ಮನೆಅಂಗಳದಲ್ಲಿ ಮಹಾನಿಯರು


ಸಂಜೆವಾಣಿ ವಾರ್ತೆ
ಸಂಡೂರು: ಆ29  ಸಂಡೂರು ಪಟ್ಟಣದ ಎಲ್ ಬಿ ಕಾಲೋನಿಯಲ್ಲಿ 11ನೇ ವಾರ್ಡಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕ ವತಿಯಿಂದ ಮನೆಯಂಗಳದಲ್ಲಿ ಮಹಾನಿಯರು ಎನ್ನುವ ಅಧ್ಬುತ ಕಾರ್ಯಕ್ರಮ ಅಂತರ ರಾಷ್ರೀಯ ಖ್ಯತ ಚಿತ್ರ ಕಲಾವಿದರಾದ ನಾಡೋಜ ಡಾ|| ವಿ.ಟಿ ಕಾಳೆ ಅವರ ಮನೆಯಲ್ಲಿ ಅವರ ಜೀವನ ಸಾಧನೆ, ಚಿತ್ರಕಲಾ ಸಾಧನೆಯನ್ನು ಕುರಿತು ಚಳ್ಳಕೆರಿ ತಾ ಪರಶುರಾಮಪುರದ ಕನ್ನಡ ಉಪನ್ಯಾಸಕ. ತಿಪ್ಪೇರುದ್ರ ಸಂಡೂರು ಅವರು ಮಾತು ಕತೆ ನಡೆಸಿದರು. ಸಂಡೂರಿನ ವಸತಿ ಶಾಲೆಯಲ್ಲಿ ಚಿತ್ರಕಲಾ ಶಿಕ್ಷರಾಗಿ ಕಾರ್ಯನಿರ್ವಹಿಸಿದ ಅನುಭವಗಳನ್ನು ನಾಡೋಜ ವಿ.ಟಿ ಕಾಳೆಯವರು ಡಾ|| ತಿಪ್ಪೇರುದ್ರ ಸಂಡೂರು ಅವರೊಂದಿಗೆ ಹಂಚಿಕೊಂಡರು.
ನಾಡೋಜ ವಿ.ಟಿ ಕಾಳೆಯವರು ಮಾತನಾಡಿ ಗದುಗಿನ ಚಿತ್ರಕಲಾವಿದ ತಮ್ಮ ಹಿರಿಯಣ್ಣ ಮನೆಯ ಪಕ್ಕದಲ್ಲಿದ್ದ ಪೇಂಟರ್ ಎಂ.ಸಿ ಮುನವಳ್ಳಿ ಯವರಿಂದ ಚಿತ್ರಕಲೆಯಲ್ಲಿ ಆಸಕ್ತಿ ಬೆಳಸಿಕೊಂಡಿದ್ದು ಅಲ್ಲಿನ ಮುನ್ಸಿಪಲ್ ಶಲೇಯಲ್ಲಿ ಚಿತ್ರಕಲಾ ಶಿಕ್ಷರಾದ ಟಿ.ಪಿ ಹಕ್ಕಿ ಯವರು ತಮ್ಮಲಿನ ಚಿತ್ರಕಲೆಯನ್ನು ಗುರುತಿಸಿ ಪ್ರೊತ್ಸಾಹಿಸಿದ್ದು ಹಾಗೂ ನಂತರದಲ್ಲಿ ಚಿತ್ರಕಲಾ ಪರೀಕ್ಷೆಯಲ್ಲಿ ಪ್ರಥಮ ರ್ಯಾಂಕಿನಲ್ಲಿ ಉತ್ತೀರ್ಣರಾಗಿದನ್ನು ಕಾಳೆಯವರು ಹಂಚಿಕೊಂಡರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಕ.ಸಾ.ಪ. ತಾಲೂಕು ಘಟಕದ ಅಧ್ಯಕ್ಷ ಬಿ.ನಾಗನಗೌಢ ಮಾತನಾಡಿ ಮಹಾನಿಯರ ಕಾರ್ಯಕ್ರಮ ವಿವಿಧ ಕ್ಷೇತ್ರಗಳ ಸಾಧಕರನ್ನ ಹಾಗೂ ಅವರ ಕಲೆಯನ್ನ ಜನತೆಗೆ ಪರಿಚಯಿಸುವ ಉದ್ದೇಶ ಹೋದಿದೆ. ಮನೆಯಂಗಳದಲ್ಲಿ ಮಹಾನಿಯರ ಕಾರ್ಯಕ್ರಮಗಳನ್ನು. ಸಾಧಕರ ಚಿಂತನೆಗಳನ್ನು ಪುಸ್ತಕರೂಪದಲ್ಲಿ ಸಂಗ್ರಹಿಸಿದರೆ ನಾನೇ ಅವುಗಳನ್ನು ಪ್ರಕಟಿಸಲು ಸಿದ್ದನಿದ್ದೇನೆ ಎಂದು ತಿಳಿಸಿದರು.
ಕ.ಸಾ.ಪ. ಮಾಜಿ ಅಧ್ಯಕ್ಷ ವಿಶ್ರಾಂತ ಕನ್ನಡ ಉಪನ್ಯಾಸಕ ಬಸವರಾಜ್ ಮಸೂತಿ, ವಿ.ಟಿ ಕಾಳೆಯವರ ಮೊಮ್ಮಗಳು ಲಾವಣ್ಯ ಭೋಸ್ಲೆ ಕಾಳೆಯವರ ಬಹುಮುಖ ಪ್ರತಿಭೆ ಕುರಿತು ಮಾತನಾಡಿದರು. ಜಿ.ವೀರೇಶಿ ನಿರೂಪಿಸಿದರು ಎಂ.ಟಿ ರಾಠೋಡ್ ವಂದಿಸಿದರು. ಡಾ|| ಕಾಳೆಯವರ ಪತ್ನಿ ಕಾಸಿಬಾಯಿ, ಹೆನ್ ಭೋಸ್ಲೆ ಕಾತಿಕಾ ಕಾಳೆ, ಶ್ರೀನಾಥಕಾಳೆ, ಕಾಶೀನಾಥಕಾಳೆ, ವಿದ್ಯಾಭೋಸ್ಲೆ ಅಲ್ಲದೆ ಕ.ಸಾ.ಪ ಪದ ಅದಿಕಾರಿಗಳು ಹಾಗೂ ಹಲವಾರು ಸಾಹಿತ್ಯಾ ಸಕ್ತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಮಹಾನಿಯರ ಕಾರ್ಯಕ್ರಮದ ಉದ್ದೇಶ ಸಾಧನೆಯ ವಿವಿಧ ಮಜಲುಗಳನ್ನು ತಿಳಿಯಲು ಮತ್ತು ಅವರ ಅನುಭವದ ಬುತ್ತಿಯನ್ನು ಜನತೆಗೆ ಉಣಬಡಿಸಲು ಸಹಾಕಾರಿಯಾಯಿತು ಎನ್ನುವುದರಲ್ಲಿ ಯಾವಸಂದೇಹವು ಇಲ್ಲ.