ಮನು ಮಾದರಿ..

ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಹಿರಿಯ ಪುತ್ರ ಮನುರಂಜನ್ ಮಾದರಿ ಕೆಲಸ ಮಾಡಿದ್ದಾರೆ. ಈ ಮೂಲಕ ಇನ್ನಷ್ಟು ನಟ,ನಟಿಯರಿಗೆ ಸ್ಫೂರ್ತಿಯಾಗಿದ್ದಾರೆ..

ಅರೆ ಏನಿದು ಅಂತೀರಾ.. ತಮ್ಮ ಚಿತ್ರ “ಮುಗಿಲ್ ಪೇಟೆ” ಚಿತ್ರದಲ್ಲಿ ಕೆಲಸ ಮಾಡಿದ ಕಲಾವಿದರೂ ತಂತ್ರಜ್ಞರು ಸೇರಿದಂತೆ ಇಡೀ ತಂಡಕ್ಕೆ ತಲಾ ಐದು ಸಾವಿರ ರೂಪಾಯಿ ವರ್ಗಾವಣೆ ಮಾಡುವ ಮೂಲಕ ಕೊರೊನಾ ಸಂಕಷ್ಟ ಕಾಲದಲ್ಲಿ ನೆರವಾಗಿದ್ದಾರೆ.

ಮನು ಮತ್ತವರ ತಂಡದ ಕೆಲಸಕ್ಕೆ ಚಿತ್ರತಂಡ ಖುಷಿಯಾಗಿದೆ. ಜೊತೆಗೆ ಮನುರಂಜನ್ ಕೆಲಸಕ್ಕೆ ಪ್ರಶಂಸೆ ವ್ಯಕ್ತವಾಗಿದೆ. ಈ ಕುರಿತು ಮಾಹಿತಿ ಹಂಚಿಕೊಂಡ ನಟ ಮನುರಂಜನ್, ನಾನು, ನನ್ನ ತಮ್ಮ, ನಿರ್ಮಾಪಕರು ಚರ್ಚೆ ಮಾಡಿ, ಚಿತ್ರದಲ್ಲಿ ಕೆಲಸ ಮಾಡಿದ ನೂರು ಮಂದಿಗೆ ಹಣಕಾಸಿನ ನೆರವು ನೀಡಿದ್ದೇವೆ. ಸದ್ಯದಲ್ಲಿಯೇ ಎಲ್ಲರಿಗೂ ಆಹಾರದ ಕಿಟ್ ನೀಡುವ ಮೂಲಕ ಕಲಾವಿದರು, ತಂಡದ ಜೊತೆಗೆ ನಾವಿದ್ದೇವೆ ಎಂದು ಧೈರ್ಯ ನೀಡುವ ಪ್ರಯತ್ನ ನಮ್ಮದು ಎಂದರು.

ಇನ್ನುಳಿದಂತೆ ಮುಗಿಲ್‍ಪೇಟೆ ಚಿತ್ರದ ಚಿತ್ರೀಕರಣ ಸಂಪೂರ್ಣ ಪೂರ್ಣಗೊಂಡಿದೆ. ಒಂದು ದಿನದ ಚಿತ್ರೀಕರಣ ಬಾಕಿ ಇತ್ತು.ಉಳಿದಂತೆ ಎಲ್ಲಾ ಕೆಲಸಗಳು ಬಹುತೇಕ ಪೂರ್ಣಗೊಂಡಿದೆ.

ಚಿತ್ರವನ್ನು ಸಕಲೇಶಪುರ, ಕುಂದಾಪುರ,ತೀರ್ಥಹಳ್ಳಿ,ಬೆಂಗಳೂರು ಸೇರಿದಂತೆ ಮತ್ತಿತರ ಕಡೆ 85 ರಿಂದ 90 ದಿನಗಳ ಕಾಲ ಚಿತ್ರೀಕರಣ ಮಾಡಿದ್ದೇವೆ.

ಸಾಲ ವಸೂಲಿ ಮಾಡುವ ಏಜೆಂಟ್ ಪಾತ್ರ. ಸಂಪೂರ್ಣವಾಗಿ ಫ್ಯಾಲಿಲಿ ಎಂಟಟೈನ್‍ಮೆಂಟ್ ಜೊತೆಗೆ, ಲವ್ ಸ್ಟೋರಿಯೂ ಚಿತ್ರದಲ್ಲಿದೆ.ನಾಯಕಿಯಾಗಿ ಪುಣೆ ಮೂಲದ ಖಯಾದು ಕಾಣಿಸಿಕೊಂಡಿದ್ದಾರೆ.

ಪ್ರಾರಂಭ ಚಿತ್ರದ ಚಿತ್ರೀಕರಣ ಮುಗಿದಿದೆ. ಮೊದಲು ಅದು ಬಿಡುಗಡೆಯಾದ ನಂತರ ಮುಗಿಲ್ ಪೇಟೆ ಚಿತ್ರ ತೆರೆಗೆ ಬರುವ ಸಾಧ್ಯತೆಗಳಿವೆ. ಲಾಕ್ ಡೌನ್ ಮುಗಿದ ನಂತರ ಯಾವ ಚಿತ್ರ ಮೊದಲು ಬರಬೇಕೆಂದು ನಿರ್ಧಾರ ತೆಗೆದುಕೊಳ್ಳುತ್ತೇವೆ.

ಮದುವೆ ಸದ್ಯಕ್ಕಿಲ್ಲ.

2021ರಲ್ಲಿ ಮದುವೆ ಮದುವೆ ಎಂದು ಈ ಮುಂಚೆ ಹೇಳಿಕೊಂಡಿದ್ದ ನಟ ಮನುರಂಜನ್ ಸದ್ಯದ ಪರಿಸ್ಥಿತಿಯಲ್ಲಿ ಆ ಯೋಚನೆ ಮುಂದೂಡಿದ್ದಾರೆ

ಸದ್ಯದ ಪರಿಸ್ಥಿತಿಯಲ್ಲಿ ಹೆಣ್ಣು ನೋಡಲು ಆಗುವುದಿಲ್ಲ.ಎಲ್ಲಾ ಪರಿಸ್ಥಿತಿ ತಿಳಿಯಾಗಿ ಸಹಜ ಸ್ಥಿತಿಗೆ ಬಂದಾದ ಹೆಣ್ಣು ನೋಡುವ ಮತ್ತು ಮದುವೆ ಬಗ್ಗೆ ಯೋಚನೆ ಮಾಡುತ್ತೇವೆ ಎಂದರು.