
ಮಾಲೂರು, ಮಾ.೧೨- ಸಮಾಜದಲ್ಲಿ ಮನುಷ್ಯನ ಹುಟ್ಟು ಸಾವುಗಳ ನಡುವೆ ಏನಾದರೂ ಶಾಶ್ವತವಾಗಿ ಉಳಿಯುವ ಕೆಲಸವನ್ನು ಮಾಡಬೇಕು ಆಗ ಮಾನವ ಜನ್ಮ ಪಾವನವಾಗುತ್ತದೆ ಎಂದು ತ್ಯಾವನಹಳ್ಳಿ ಡಾ ಎಂ.ಗೋಪಾಲಗೌಡ ಹೇಳಿದರು.
ಅವರು ತ್ಯಾವನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿ ಕೊಂಡಿದ್ದ ಶಾಲಾ ಸರಸ್ವತಿ ಪೂಜೆ ಹಾಗೂ ೧೦ನೇ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ತ್ಯಾವನಹಳ್ಳಿ ಗ್ರಾಮದಲ್ಲಿ ಹುಟ್ಟಿ ಬೆಳೆದ ನಾನು ವೈದ್ಯಕೀಯ ಪದವಿ ಪಡೆದು ಸಮಾಜದಲ್ಲಿ ವೈದ್ಯಕೀಯ ಸೇವೆಯನ್ನು ಮಾಡುವ ಮೂಲಕ ಉನ್ನತ ಸ್ಥಾನದಲ್ಲಿದ್ದು ನನ್ನ ಹುಟ್ಟೂರಿಗೆ ಏನಾದರೂ ಸೇವೆ ಮಾಡಿ ಋಣ ತೀರಿಸಿಕೊಳ್ಳಲು ನಮ್ಮ ಊರಿನಿಂದ ಮತ್ತು ಸುತ್ತ ಮುತಲಿನ ಗ್ರಾಮಗಳಿಂದ ಪ್ರೌಢ ಶಾಲೆಗೆ ಅರಬಿಕೊತ್ತನೂರಿಗೆ ಹೋಗಬೇಕಿತ್ತು ಆದ್ದರಿಂದ ಹೈಸ್ಕೂಲ್ ಮತ್ತು ಶಾಲೆಗೆ ಜಮೀನು ಮಂಜೂರು ಮಾಡಿಸಲು ಸರ್ಕಾರಿ ಮತ್ತು ಸಾರ್ವಜನಿಕ ವಲಯದಲ್ಲಿ ತುಂಬಾ ಹೋರಾಟ ಸಾಹಸ ಮಾಡಿ ಸಾಧನೆ ಮಾಡಿ ತ್ಯಾವನಹಳ್ಳಿ ಮತ್ತು ಸುತ್ತ ಮುತ್ತಲಿನ ಗ್ರಾಮೀಣ ಭಾಗದ ಪೋಷಕರು ತಮ್ಮ ಮಕ್ಕಳನ್ನು ಈ ಶಾಲೆಗೆ ಕಳುಹಿಸುವ ಮೂಲಕ ಸಹಕಾರ ನೀಡುತಿದ್ದಾರೆ. ಅದರಂತೆ ಶಾಲಾ ಸಿಬ್ಬಂದಿ ವಿದ್ಯಾರ್ಥಿಗಳಿಗೆ ಉತ್ತಮ ಗುಣ ಮಟ್ಟದ ಶಿಕ್ಷಣ ನೀಡಿ ಒಳ್ಳೆ ರೀತಿಯಲ್ಲಿ ಶಾಲೆಯನ್ನು ಮುನ್ನಡಿಸಿ ಕೊಂಡು ಹೋಗುತಿದ್ದು ಇನ್ನೂ ಹೆಚ್ಚಿನ ಅಭಿವೃದ್ಧಿಗೆ ಸಂಬಂಧಪಟ್ಟ ಅಧಿಕಾರಿಗಳ ಜೊತೆಗೆ ಚರ್ಚಿಸಲಾಗುವುದು, ಇಂಗ್ಲಿಷ್ ಮಧ್ಯಮ ಶಾಲೆಯನ್ನು ಪ್ರಾರಂಭಿಸಿ ಉನ್ನತಿ ಕರಿಸಲಾಗುವುದು ಶಾಲಾ ಮಕ್ಕಳು ವ್ಯಾಸಂಗ ದಿನಗಳನ್ನು ವ್ಯರ್ಥ ಮಾಡದೆ ಶೈಕ್ಷಣಿಕವಾಗಿ ಪ್ರಗತಿ ಹೊಂದುವ ಮೂಲಕ ಉತ್ತಮ ವಿದ್ಯಾರ್ಥಿಗಳಾಗಬೇಕೆಂದರು.
ಶಾಲಾ ಮುಖೋಪಾಧ್ಯಾಯ. ರಾಮಯ್ಯ ಶೆಟ್ಟಿ ಮಾತನಾಡಿ ಡಾ:ಗೋಪಾಲ ಗೌಡರು ಶಾಲೆಯ ಸ್ಥಾಪನೆಗೆ ಮತ್ತು ಉಳಿವಿಗಾಗಿ ಹೆಚ್ಚಿನ ಶ್ರಮ ವಹಿಸಿದ್ದು ಅವರ ಸಹಕಾರಕ್ಕೆ ಗ್ರಾಮಸ್ಥರು ಪೋಷಕರು, ಶಾಲಾ ಸಿಬ್ಬಂದಿಯಿದ್ದು ಶಾಲೆಗೆ ಕಾಂಪೌಂಡ್ ನಿರ್ಮಾಣ ಮಾಡಿಸಿ ಅಭಿವೃದ್ಧಿ ಮಾಡಬೇಂದು ತಿಳಿಸಿದರು. ಶಾಲಾ ಮಕ್ಕಳ ವ್ಯಾಸಂಗದ ದಿನಗಳಲ್ಲಿ ಸಮಯವನ್ನು ವ್ಯರ್ಥ ಮಾಡದೆ ಶ್ರದ್ಧೆ ಆಸಕ್ತಿ ಛಲ ರೂಡಿಸಿಕೊಂಡು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ ಉತ್ತಮ ಗುಣಾತ್ಮಕ ಶಿಕ್ಷಣವನ್ನು ಪಡೆದು ಸಮಾಜದ ಮುಖ್ಯ ವಾಹಿನಿಗೆ ಬಂದು ಸಮಾಜಕ್ಕೆ ತಾವು ಸಹ ಏನಾದರೂ ಕೊಡುಗೆಯನ್ನು ನೀಡಬೇಕು ಎಂದರು