ಮನುಷ್ಯ ಮರೆತು ನಡೆಯುತ್ತಿದ್ದಾನೆ:ಚನ್ನವೀರ ಶ್ರೀಗಳು

ಸೈದಾಪುರ:ಜ.9:ಮನುಷ್ಯ ತನ್ನ ಜೀವನಕ್ಕೆ ಬೇಕಾದ ಮುಖ್ಯವಾದ ಅಂಶವನ್ನು ಮರೆತು ಸುಖ ಶಾಂತಿ ಪಡೆಯುವಲ್ಲಿ ಸಂಪೂರ್ಣ ವಿಫಲನಾಗಿದ್ದಾನೆ. ಭೂಮಿಯ ಮೇಲೆ ಯಾವುದು ಸ್ಥಿರವಲ್ಲ ದೇವರ ನಾಮಸ್ಮರಣೆ ಸ್ಥಿರವಾಗಲು ಸಾಧ್ಯ ಎಂದು ಬಾಡಿಯಾಲ ಮೂಲಮಠದ ಚನ್ನವೀರ ಶಿವಾಚಾರ್ಯ ಮಹಾಸ್ವಾಮಿಜಿಗಳು ಅಭಿಪ್ರಾಯಪಟ್ಟರು.
ಇಲ್ಲಿಗೆ ಸಮೀಪದ ಸುಕ್ಷೇತ್ರ ಬಾಡಿಯಾಲ ಸಂಸ್ಥಾನ ಮೂಲಮಠದ 2023ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ ಮತ್ತು ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಮನುಷ್ಯನ ಮನಸ್ಸು ಚಂಚಲವಾಗಿರುತ್ತದೆ. ಇದಕ್ಕಾಗಿ ಶರಣರ ತತ್ವಗಳು, ಸಂತರ ಉಪದೇಶಗಳು, ವಚನಕಾರರ ವಚನಗಳು ಕೇಳಿ ಪ್ರತಿ ನಿತ್ಯ ಅನುಸರಿಸಿಕೊಂಡು ಜೀವನ ನಡೆಸಿಕೊಂಡು ಹೋದರೆ ನಾವು ಉತ್ತಮರಾಗುತ್ತೇವೆ. ನಾವು ನಮ್ಮವರೆಂಬ ಭಾವನೆಯೊಂದಿಗೆ ಪ್ರೀತಿ, ಪ್ರೇಮ, ಸ್ನೇಹ, ವಾತ್ಸಲ್ಯದ ಬದುಕು ನಮ್ಮದಾಗಬೇಕು ಎಂದು ಕಿವಿ ಮಾತುಗಳನ್ನು ಹೇಳಿದರು.
ಶರಣ ಕುಮಾರ್ ಶಾಸ್ತ್ರಿಗಳು ಹಾಗೂ ತಂಡದವರು ಸಂಗೀತಾ ಕಾರ್ಯಕ್ರಮ ನೆಡಿಸಿಕೊಟ್ಟರು. ಶರಣಗೌಡ ಪಾಟೀಲ್ ಚಿಗುಂಟ, ಶಂಕರಗೌಡ ಸನ್ನತಿ, ಶಾಂತ ಮಲ್ಲಗೌಡ ಸನ್ನತಿ, ಶರಣಗೌಡ ಅನ್ನದಾನಿ ಕೊಲ್ಲೂರು, ಶಿವಮೂರ್ತಿ ಸ್ವಾಮಿ, ಶರಣಯ್ಯ ಸ್ವಾಮಿ ಗುರ್ಜಾಲ್, ಗ್ರಾಮದ ಭಕ್ತಾಧಿಗಳು ಸೇರಿದಂತೆ ಸುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು.