ಇಂಡಿ:ಜೂ.6:ದೇವರು ನಮ್ಮನ್ನು ಜೀವಿಸಲಿಕ್ಕಾಗಿ ಭೂಮಿಗೆ ಬಿಟ್ಟಿಲ್ಲ. ಬದುಕಲಿಕ್ಕೆ ಬಿಟ್ಟಿದ್ದಾನೆ. ಬದುಕುವುದು ಒಂದು ಕಲೆ. ಕಲಿಯುವುದಕ್ಕಾಗಿಯೇ ಮನುಷ್ಯನು ಮನುಷ್ಯನಾಗಿ ಬದುಕುವುದನ್ನು ಕಲಿಯಬೇಕು ಎಂದು ಬೀದರನ ಚಿದಂಬರಾಶ್ರಮದ ಡಾ. ಶಿವಕುಮಾರ ಮಹಾಸ್ವಾಮಿಗಳು ಹೇಳಿದರು.
ಪಟ್ಟಣದ ಶ್ರೀ ಬಸವರಾಜೆಂದ್ರ ಸತ್ಸಂಗ ಸಮಿತಿ ಹಾಗೂ ಶ್ರೀ ಬಸವರಾಜೆಂದ್ರ ಯುವಕ ಮಂಡಳಿ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ 71ನೇ ಹುಣ್ಣಿಮೆ ಬೆÉಳಕು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮನುಷ್ಯನು ಏನನ್ನಾದರೂ ಜೀವನದಲ್ಲಿ ಸಾಧನೆ ಮಾಡಬೇಕು. ಪರಮಾತ್ಮನ ಕೃಪೆಗೆ ಪಾತ್ರರಾಗಬೇಕು. ಸಮಾಜಕ್ಕಾಗಿ ದುಡಿಯುವವರನ್ನು ಸಮಾಜ ಗುರುತಿಸಿ ಗೌರವಿಸಬೇಕು. ಕೃತಜ್ಞತೆಯಿಂದ ಸ್ಮರಿಸಬೇಕು. ಉಪಕಾರ ಸ್ಮರಣೆ ಮಾಡಬೇಕು. ಎಲ್ಲರೂ ಮೊದಲು ಸಾಮಾನ್ಯರೆ ಆಗಿದ್ದರು ಆಮೇಲೆ ಸುಧಾರಕರಾಗಿ ದೇವರಾದರು. ನಾನು ನಿನ್ನೆ ಹೇಗಿದ್ದೆ, ಇವತ್ತು ಹೇಗಿದ್ದೇನೆ ಎಂಬುದನ್ನು ಸ್ವ-ವಿಮರ್ಷೆ ವಿಚಾರ ಮಾಡಬೇಕು. ನಿರಂತರ ಪ್ರಯತ್ನವಿದ್ದರೆ ಮಾತ್ರ ನಾವು ದೇವ ಮಾನವರಾಗಲು ಸಾಧ್ಯ ಎಂದರು.
ಓಂಕಾರಾಶ್ರಮ ಡಾ. ಸ್ವರುಪಾನಂದ ಸ್ವಾಮೀಜಿ, ಕಸಾಪ ಅಧ್ಯಕ್ಷ ರಾಘವೇಂದ್ರ ಕುಲಕರ್ಣಿ, ಶಸಾಪ ತಾಲೂಕು ಅಧ್ಯಕ್ಷ ಆರ್.ವಿ ಪಾಟೀಲ, ಯೋಗ ಶಿಕ್ಷಕ ಬಿ.ಎಸ್. ಪಾಟೀಲ ಮಾತನಾಡಿದರು.
ಶ್ರೋ.ಬ್ರ. ಶಂಕರಾನಂದ ಮಹಾಸ್ವಾಮಿಗಳು, ಈಶ್ವರಿಯ ವಿಶ್ವವಿದ್ಯಾಲಯದ ರಾಜಯೋಗಿನಿ ಬ್ರಹ್ಮಕುಮಾರಿ ಯಮುನಾ ಹಾಗೂ ಶ್ರೀದೇವಿ ಸಹೋದರಿಯರು ವೇದಿಕೆ ಮೇಲೆ ಇದ್ದರು.
ಡಾ. ಎಸ್.ಕೆ. ಕೊಪ್ಪ, ಡಿ.ಎನ್. ಅಕ್ಕಿ, ಎಂ.ಜೆ. ಪಾಟೀಲ, ಎ.ಎಸ್. ಗಾಣಿಗೇರ, ಗಿರೀಶ್ ಪೆÇೀಪಡಿ, ಸೋಮಶೇಖರ ಸುರಪುರ, ಕದಳಿ ವೇದಿಕೆ ಅಧ್ಯಕ್ಷೆ ಗಂಗಾಬಾಯಿ ಗಲಗಲಿ, ದ್ರಾಕ್ಷಾಯಿಣಿ ಮೈದುರಗಿ, ಎನ್.ವಿ. ಹಂಜಗಿ, ಶಿವಲಿಂಗಪ್ಪ ಪಟ್ಟದಕಲ್ಲ, ಕೆ.ಎಮ್. ಉಪ್ಪಿನ, ಜಿ.ಎಸ್. ವಾಲಿ, ಎಸ್.ವಿ. ಹೂಗಾರ, ಎಸ್.ಎಸ್. ಈರನಕೇರಿ, ಎಚ್.ಎಸ್. ಎಳೆಗಾಂವ, ಕೆ.ಜಿ. ನಾಟಿಕಾರ ಮತ್ತಿತರಿದ್ದರು.