ಮನುಷ್ಯ ಜೀವನದ ಸಾರ್ಥಕತೆ ತಿಳಿಸಿದ ಕೈವಾರ ತಾತಯ್ಯ

ಚಿತ್ರದುರ್ಗ.ಮಾ.೮; ಸಮಾಜದಿಂದ ನಾವು ಬಹಳಷ್ಟು ಪಡೆದುಕೊಂಡಿದ್ದೇವೆ.   ಸಮಾಜಕ್ಕೂ ಆದಷ್ಟು ಕೊಡುಗೆ ನೀಡಿ, ನಮ್ಮ ಜೀವನ ಸಾರ್ಥಕ ಪಡಿಸಿಕೊಳ್ಳಬೇಕು ಎಂಬ ತತ್ವವನ್ನು ಕೈವಾರ ತಾತಯ್ಯ ತಿಳಿಸಿದ್ದಾರೆ ಎಂದು ಇತಿಹಾಸ ಸಂಶೋಧಕ, ನಿವೃತ್ತ  ಪ್ರಾಚಾರ್ಯ ಡಾ.ಬಿ.ರಾಜಶೇಖರಪ್ಪ ಹೇಳಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ನಗರಸಭೆ ಸಹಯೋಗದಲ್ಲಿ ನಗರದ ತರಾಸು ರಂಗಮಂದಿರದಲ್ಲಿ ಆಯೋಜಿಸಲಾದ ಕೈವಾರ ತಾತಯ್ಯ (ಶ್ರೀ ಯೋಗಿನಾರೇಯಣ ಯತೀಂದ್ರ) ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.18ನೇ ಶತಮಾನದ ಆದಿಯಿಂದ  19ನೇ ಶತಮಾನದ ಆದಿವರೆಗೆ ಜೀವಿಸಿದ್ದ ಯೋಗಿ ನಾರೇಯಣ ಯತಿಂದ್ರರು, ಶಿವಶರಣ, ದಾಸ ಪರಂಪರೆ ಹಾಗೂ ಭಕ್ತಿ ಚಳುವಳಿ ಆಧ್ಯಾತ್ಮಿಕರ ಸಾಲಿಗೆ ಸೇರುತ್ತಾರೆ. ಕ್ರಿ.ಶ.1726 ರಲ್ಲಿ ಜನಿಸಿದ ಇವರು 110 ವರ್ಷಗಳ ಕಾಲ ಬದುಕಿ 1836 ರಲ್ಲಿ ಕೈವಾರದಲ್ಲಿ ಸಜೀವ ಸಮಾಧಿಯಾದರು. ಅಂದಿನಿಂದ ಕೈವಾರ ತಾತಯ್ಯ ಎಂದು ಜನ ಮಾನಸದಲ್ಲಿ ಪ್ರಸಿದ್ಧಿಯಾಗಿದ್ದಾರೆ.ಹುಟ್ಟುತ್ತಲೇ ತಂದೆ ತಾಯಿ ತೀರಿ ಕಳೆದುಕೊಂಡು ಅನಾಥರಾಗಿದ್ದ ಇವರನ್ನು ಗ್ರಾಮಸ್ಥರು ಸಾಕಿದರು. ಬೆಳದ ಮೇಲೆ ಕುಲ ಕಸುಬು ಬಳೆ ಮಾರುವ ವೃತ್ತಿಯಲ್ಲಿ ತೊಡಗಿದರು.   ಒಮ್ಮೆ ಪರದೇಶಿ ಸ್ವಾಮಿಗಳ ಕೃಪಾದೃಷ್ಟಿ ಹಾಗೂ ಸಂಸರ್ಗದಿಂದ ಯೋಗಿ ನಾರೇಯಣರ ಮೈಯಲ್ಲಿ ಶಕ್ತಿ ಸಂಚಾರವಾಗಿ ಆಧ್ಯಾತ್ಮಕ ಭಾವನೆ ಜಾಗೃತಗೊಂಡು ಸಂಸಾರಿಕ ಜೀವನ ತೊರೆದರು.ತೆಲುಗು ಸೇರಿದಂತೆ ಕನ್ನಡದಲ್ಲಿ  ಹಲವು ಕೃತಿಗಳನ್ನು ಕೈವಾರ ತಾತಯ್ಯ ರಚಿಸಿದ್ದಾರೆ. ಸುಲಲಿತ ಹಾಗೂ ಸುಂದರ ತೆಲುಗು ಭಾμÉಯಲ್ಲಿ ವೇದಾಂತ ಸಾರಾವಳಿ, ನಾದಬ್ರಹ್ಮಾನಂದ ನಾರೇಯಣ ಕವಿ ತ್ರಿಶತಕ, ಅಮರ ನಾರಾಯಣ ಕವಿ ಶತಕ, ವೀವಲಿಂಗ ಶತಕ, ತಾರಕ ಬ್ರಹ್ಮಾನಂದ ಶತಕ, ಶ್ರೀ ಕೃಷ್ಣ ಚರಿತ, ಶ್ರೀ ಕೃಷ್ಣ ತತ್ವಾಂಮೃತ, ಶ್ರೀ ಕೃಷ್ಣ ಸಿದ್ದಾಂತ ಯೋಗಸಾರ, ಕಾಲಜ್ಞಾನ ಸೇರಿದಂತೆ  ಆತ್ಮಬೋಧಾಮೃತಗಳನ್ನು ರಚಿಸಿದ್ದಾರೆ.  ಕನ್ನಡದಲ್ಲಿ ಕೈವಾರ ತಾತಯ್ಯ ರಚನೆಯ ನಾಲ್ಕು ಹಾಗೂ ಐದು ಸಾಲಿನ ಹಲವು ಪದ್ಯಗಳು ಲಭಿಸಿವೆ ಎಂದರು.ಉಪನ್ಯಾಸಕಿ ಯಶೋಧರ ರಾಜಶೇಖರಪ್ಪ ಮಾತನಾಡಿ, ಭಾರತದಲ್ಲಿ ಬಹುದೊಡ್ಡ ಸಂತ ಪರಂಪರೆಯಿದೆ. ಕೈವಾರ ತಾತಯ್ಯ ಬಲಿಜ ಜನಾಂಗದ ಸಾಂಸ್ಕೃತಿಕ ಪುರುಷ, ಯೋಗಿಗಳು, ದಾರ್ಶನಿಕರು, ಭೂತ ಭವಿಷ್ಯ ಕಾಲಗಳನ್ನು ಬಲ್ಲವರಾಗಿದ್ದರು. ಮನುಷ್ಯ ಜನಾಂಗದ ಸಾರ್ಥಕತೆ ಬಗ್ಗೆ ತಿಳಿಸಿ ಲೋಕ ಕಲ್ಯಾಣ ಚಿಂತನೆ ಮಾಡಿದರು ಎಂದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ ಕಾರ್ಯಕ್ರಮ ಉದ್ಘಾಟಿಸಿ ಸ್ವಾಗತಿಸಿದರು.  ರಂಗ ಕಲಾವಿದ ಕೆ.ಪಿ.ಎಂ.ಗಣೇಶಯ್ಯ ನಿರೂಪಿಸಿದರು. ಹಿಮಂತರಾಜು ಮತ್ತು ತಂಡ ನಾಡಗೀತೆ ಪ್ರಸ್ತುತ ಪಡಿಸುವುದರೊಂದಿಗೆ ಗೀತ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು. ಬಲಿಜ ಸಮಾಜದ ರಾಘವೇಂದ್ರ ವಂದಿಸಿದರು.