ಮನುಷ್ಯರಲ್ಲಿಯೇ ಬೇಧಬಾವ ಹುಡುಕುವ ಬಿಜೆಪಿಯವರ ನಡೆ ಸರಿಯಲ್ಲ

ಹರಿಹರ.ಜು.೨೪; ಮನುಷ್ಯರನ್ನು ಮನುಷ್ಯರಂತೆ ನೋಡದೆ ಕೀಳಾಗಿ ಕಾಣುವ ಹಿಂದೂ-ಮುಸ್ಲಿಂ-ಕ್ರೈಸ್ತ ಎಂದು ಭಿನ್ನವಾಗಿ ನೋಡುತ್ತಿರುವ ಬಿಜೆಪಿಯನ್ನು  ವಿರೋಧಿಸಬೇಕು ಎಂದು ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.ನಗರದ  ಸಿದ್ದೇಶ್ವರ ಪ್ಯಾಲೇಸ್ ನಲ್ಲಿ  ಎಸ್. ರಾಮಪ್ಪ ಅಭಿಮಾನಿ ಬಳಗದಿಂದ ಶಾಸಕ ಎಸ್. ರಾಮಪ್ಪನವರ 65 ನೇ ಹುಟ್ಟುಹಬ್ಬದ ನಿಮಿತ್ತ ನಡೆದ ಸರ್ವಧರ್ಮ ಸಾಮೂಹಿಕ ವಿವಾಹ ಹಾಗೂ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಎಲ್ಲಾ ಮನುಷ್ಯರನ್ನು ದೇವರು ಒಂದೇ ರೀತಿಯಲ್ಲಿ ಸೃಷ್ಟಿಸಿದ್ದಾನೆ ಆದರೆ ಅವರನ್ನು ಒಂದೇ ರೀತಿ ಕಾಣದೆ ಮನುಷ್ಯರಲ್ಲಿಯೇ ಬೇಧಬಾವ ಹುಡುಕುವ ಬಿಜೆಪಿಯವರ ನಡೆ ಸರಿಯಲ್ಲ ಎಂದರು.ಶಾಸಕ ರಾಮಪ್ಪ ಅವರು ಬಡತನ ಕುಟುಂಬದಲ್ಲಿ‌ ಬೆಳೆದು, ಯಾವುದೇ ಅಧಿಕಾರದ ಅಹಂ ಇಲ್ಲದ ವ್ಯಕ್ತಿ ಯಾಗಿದ್ದಾರೆ,ಅವರನ್ನು ಮತ್ತು ನಮ್ಮನ್ನು ಗೆಲ್ಲಿಸಿದ ಪ್ರಜೆಗಳೇ ನನಗೆ ದೊಡ್ಡವರಾಗಿದ್ದು ಪ್ರಜಾ ಪ್ರಭುತ್ವದಲ್ಲಿ ಮತಕೊಡುವವರೆ ನಮಗೆ ಮಾಲಿಕ ರಾಗಿದ್ದು ಅವರ ಆಶೀರ್ವಾದದಿಂದ ರಾಮಪ್ಪ ಶಾಸಕ ಆಗಿದ್ದಾರೆ.   ಹರಿಹರ ಕ್ಷೇತ್ರದ ಅಭಿವೃದ್ಧಿ ಮಾಡುವಂತೆ ರಾಮಪ್ಪನನ್ನು ನೀವು ವಿಧಾನಸೌಧಕ್ಕೆ ಕಳಿಸಿದ್ದೀರಿ. ಅವರು ಮಂತ್ರಿಗಳ,ಅಧಿಕಾರಿಗಳ ಕಚೇರಿ ಸುತ್ತಿ ಕ್ಷೇತ್ರಕ್ಕೆ ಅನುಧಾನವನ್ನು‌ ತಂದು ಜನರ ಮೂಲ ಭೂತ ಸೌಕರ್ಯಗಳನ್ನು ಈಡೇರಿಸುತ್ತಿದ್ದಾರೆ.ನಾನು ಅಧಿಕಾರದಲ್ಲಿ ಇದ್ದಿದ್ದರೆ ಹರಿಹರಕ್ಕೆ ಅಭಿವೃದ್ಧಿಗಳ ಸುರಿಮಳೆಯನ್ನು  ಸುರಿಸುತ್ತಿದ್ದೆ. ನಾನು ಅಧಿಕಾರದಲ್ಲಿ‌ ಇದ್ದಾಗ ಎಲ್ಲಾ ಶಾಸಕರಿಗೂ ಹೆಚ್ವಿನ ಅನುಧಾನವನ್ನು ನೀಡಿದ್ದೆ. ಆದರೆ ಬಿಜೆಪಿ ಸರ್ಕಾರದವರು ತಮ್ಮ ಶಾಸಕರಿಗೆ ಹೆಚ್ಚು ಅನುದಾನ ನೀಡಿ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರಿಗೆ ಅಲ್ಪ ಪ್ರಮಾಣ ಅನುದಾನವನ್ನು ನೀಡುತ್ತಿದ್ದಾರೆ .ಯಾವುದೆ ಪಕ್ಷ ಆಗಲಿ ರಾಜ್ಯದ ಜನತೆಗೆ ದ್ರೋಹ ಮಾಡಬಾರದು. ನಾನು ಸಿ.ಎಂ ಆಗಿದ್ದಾಗ ಜಾತಿ ಭೇದಭಾವ ಮಾಡದೇ ಅನೇಕ ಯೋಜನೆ ಗಳನ್ನು ಜಾರಿಗೆ ತಂದೆ. ಅನ್ನಭಾಗ್ಯದಿಂದ ನಾಲ್ಕು ಕೋಟಿ ಜನರ ಹಸಿವನ್ನು‌ ನೀಗಿಸಿದ್ದೆ. ಅಂದು ಬಸವಣ್ಣ ಹೇಳಿದಂತೆ ಸಮ ಸಮಾಜವನ್ನು ನಿರ್ಮಾಣ ಆಗಬೇಕು ಎಂದು ಅದನ್ನೇ ಗಾಂಧೀಜಿ ಯವರೂ‌ ಸಹ ಹೇಳಿದ್ದರು. ಆದರೆ ಜಿಜೆಪಿಯವರು ಸಮ ಸಮಾಜ ನಿರ್ಮಾಣಕ್ಕೆ ಮುಂದಾಗುತ್ತಿಲ್ಲ ಎಂದು ಖೇದ ವ್ಯಕ್ತಪಡಿಸಿದರು.

    ಮಾಜಿ ಸಚಿವ ಎಚ್. ಆಂಜನೇಯ ಮಾತನಾಡಿ, ಸಿದ್ದರಾಮಯ್ಯ ಅವರು ಎಲ್ಲಾ ಧರ್ಮ ಜಾತಿಯ ಜನರ ಕಷ್ಟಗಳಿಗೆ ಸ್ಪಂದಿಸಿ ಅವರ ಕಣ್ಣೀರನ್ನು ವರೆಸಿದ್ದಾರೆ. ರಾಮಪ್ಪ ಅವರ 65 ನೇ ಹುಟ್ಟು ಹಬ್ಬ, ಮುಂದಿನ ತಿಂಗಳು ಸಿದ್ದರಾಮಯ್ಯನವರ 75ನೇ ಹುಟ್ಟು ಹಬ್ಬದ ಆಚರಣೆ ಹಮ್ಮಿಕೊಂಡಿರುವುದು ಪಕ್ಷಕ್ಕೆ ಶಕ್ತಿದಾಯಕವಾಗಿದೆ ಎಂದು ಹೇಳಿದರು.

    ಶಾಸಕ ಎಸ್.ರಾಮಪ್ಪ ಮಾತನಾಡಿ, ಯಾವುದೇ ಕಪ್ಪು ಚುಕ್ಕೆ ಇಲ್ಲದೇ ಜನಪರವಾದ ಯೋಜನೆ ಗಳನ್ನು ಜನಸಾಮಾನ್ಯರಿಗೆ ನೀಡಿದ ಕೊಡುಗೆ ಅಪಾರ. ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ, ನನಗೂ ನಿಮ್ಮ ಸೇವೆ ಮಾಡುವ ಅವಕಾಶ ನೀಡಿ.ಪಬಿಜೆಪಿ ಸರ್ಕಾರ ಭ್ರಷ್ಟ ಆಡಳಿತವನ್ನು ನಡೆಸುತ್ತಿದೆ. ಮೋದಿಯವರ ಮರುಳು ಮಾತಿಗೆ ಮರುಳಾಗದೇ ಬಿಜೆಪಿಗೆ ಮತವನ್ನು ನೀಡದೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ. 

    ರಾಜ್ಯದಲ್ಲಿ ಹಾಲು,ಮೊಸರಿಗೆ  ಜಿ.ಎಸ್.ಟಿ ವಿಧಿಸುವ ಲಜ್ಜೆಗೆಟ್ಟ ಸರ್ಕಾರವಿದ್ದರೆ ಅದು ಬಿಜೆಪಿ ಸರ್ಕಾರ. ನಾಡಿನಲ್ಲಿ ಕೋಮು ಗಲೆಭೆಗಳನ್ನು ಬಿಜೆಪಿ ಸರ್ಕಾರ ಸೃಷ್ಟಿಸುತ್ತಿದೆ. ಅವರ ಆಡಳಿತದಿಂದ ಜನರು ರೋಸಿಹೋಗಿದ್ದಾರೆ. ಹಿಂದೂ ಮುಸ್ಲೀಂ ಧರ್ಮದವರು ಪ್ರೀತಿ ವಿಶ್ವಾಸದಿಂದ ಜೀವನ‌ ನಡೆಸಬೇಕು.‌ ಈ ನಿಟ್ಟಿನಲ್ಲಿ ರಾಜ್ಯ ಮತ್ತು ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತರಬೇಕು ಎಂದು ತಿಳಿಸಿದರು.

     ಕಾರ್ಯಕ್ರಮದಲ್ಲಿ ಮಾಜಿ ಮಂತ್ರಿ ಎಸ್.ಎಸ್. ಮಲ್ಲಿಕಾರ್ಜುನ್, ಶಾಸಕ ಹಾಗೂ ಮಾಜಿ ಮಂತ್ರಿ ಜಮೀರ್ ಅಹಮದ್ ಖಾನ್ ಮುಂತಾದವರು ಮಾತನಾಡಿದರು.

    ಈ ಸಮಯದಲ್ಲಿ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ಜಗದ್ಗುರು ವಚನಾ ನಂದ ಸ್ವಾಮೀಜಿ, ಹಿರಿಯೂರು ಕೋಡಿಹಳ್ಳಿ ಆದಿಜಾಂಬವ ಮಠದ ಷಡಕ್ಷರ ಮುನಿ ದೇಶಿಕೇಂದ್ರ ಸ್ವಾಮೀಜಿ, ನಿಜಶರಣ ಅಂಬಿಗರ ಚೌಡಯ್ಯನವರ ಚೌಡಯ್ಯ ಮಹಾಸ್ವಾಮಿಗಳು, ಮೌಲಾನಾ ಖಾಜಿ-ಇ- ಶಹರ್ ಖಾಜಿ ಶಂಷುದ್ದೀನ್, ವಿಧಾನಪರಿಷತ್ ಸದಸ್ಯರಾದ ಅಬ್ದುಲ್ ಜಬ್ಬರ್ ಸಾಬ್, ಕೊಂಡಜ್ಜಿ ಮೋಹನ್ ಕುಮಾರ್, ಡಿ ಬಸವರಾಜ್, ಬಿ.ರೇವಣ ಸಿದ್ದಪ್ಪ, ನಂದಿಗಾವಿ ಎನ್.ಎಚ್. ಶ್ರೀನಿವಾಸ್, ನಿಖಿಲ್ ಕೊಂಡಜ್ಜಿ, ನಗರಸಭೆ ಅಧ್ಯಕ್ಷೆ ಶಾಹಿನ ಬಾನು ದಾದಾಪೀರ್, ನಗರಸಭೆ ಸದಸ್ಯ ಎಸ್.ಎಂ. ವಸಂತ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಎಲ್. ಬಿ.ಹನುಮಂತಪ್ಪ,ಎಂ.ಬಿ.ಅಭಿಮಾನಿ,ಎಂ.ನಾಗೇಂದ್ರಪ್ಪ, ಕಾಂಗ್ರೆಸ್ ವೀಕ್ಷಕರುಗಳಾದ ವೇಣು ಗೋಪಾಲ್,ನಿಖಿಲ್ ರಾಜವರ್ಮ, ಸಿರಾಜ್ ಶೇಖ್, ಅನ್ವರ್ ಸಾಬ್ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ. ಮಂಜಪ್ಪ, ಶಂಕರ್ ಖಟಾವಕರ್ ಏಜಾಜ್ ಅಹಮ ದ್ ಸೇರಿದಂತೆ ಅನೇಕ ಕಾಂಗ್ರೆಸ್ ಮುಖಂಡರುಗಳು ಅಭಿಮಾನಿ ಗಳು ಉಪಸ್ಥಿತರಿದ್ದರು.