ಮನುಷ್ಯರನ್ನು ಮನುಷ್ಯತ್ವದಿಂದ ಕಾಣಬೇಕು ಹೊರತು ಜಾತಿ ಲಿಂಗ ಭೇದಗಳಿಂದಲ್ಲ

ಕಲಬುರಗಿ:ಆ.17:ಮನುಷ್ಯರನ್ನು ಮನುಷ್ಯತ್ವದಿಂದ ಕಾಣಬೇಕು ಹೊರತು ಜಾತಿ ಲಿಂಗ ಭೇದಗಳಿಂದಲ್ಲ. ನಾವು ಯಾವ ಜಗತ್ತಿನಲ್ಲಿ ಇದ್ದೇವೆ, ಭಾರತದಲ್ಲಿ ನಿತ್ಯ ಮಹಿಳೆಯರ ಮೇಲೆ ಅತ್ಯಾಚಾರ ಕೊಲೆ ಲೈಂಗಿಕ ಕಿರುಕುಳ ನಡೆಯುತ್ತಿದ್ದು ಇದು ಸ್ವಾಸ್ಥ ಸಮಾಜದ ಲಕ್ಷಣವಲ್ಲ ಕೇವಲ ಜೈಲಿನ ಶಿಕ್ಷೆಯಿಂದ ಇದನ್ನು ತಡೆಯಲು ಸಾಧ್ಯವಿಲ್ಲ ನಾವೆಲ್ಲರೂ ಮನುಷ್ಯತ್ವದ ಗುಣಗಳನ್ನು ಬೆಳೆಸಿಕೊಂಡು ಅಂತಹ ದುಷ್ಕøತಕ್ಕೆ ಭಾಗಿಯಾಗದೆ ಮಹಿಳೆಯರ ಭಾವನೆಗಳಿಗೆ ಗೌರವ ಕೊಟ್ಟು ಬದುಕಬೇಕು ಹಾಗೂ ನಮ್ಮ ಮನ ಪರಿವರ್ತನೆ ಯಾದಾಗ ಮಾತ್ರ ಮಹಿಳೆಯರ ಮೇಲೆ ದೌರ್ಜನ ಕಡಿಮೆಯಾಗಿ ಸಮೃದ್ಧ ರಾಷ್ಟ್ರ ನಿರ್ಮಾಣವಾಗುತ್ತದೆ ಎಂದು ಶಾಲಾ ಶಿಕ್ಷಣ ಇಲಾಖೆಯ (ಪದವಿ ಪೂರ್ವ) ಉಪನಿರ್ದೇಶಕರಾದ ಶಿವಶರಣಪ್ಪ ಮೂಳೆಗಾವ ರವರು ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜು ಕಲ್ಬುರ್ಗಿಯ 2023 -24ನೆಯ ಪಿಯುಸಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ರಾಷ್ಟ್ರೀಯ ಸೇವಾ ಯೋಜನೆಯ ದೈನಂದಿನ ಕಾರ್ಯ ಚಟುವಟಿಕೆಗಳು ಹಾಗೂ ಸಾಹಿತ್ಯ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನೆ ಮಾಡಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ನಗರ ಕೇಂದ್ರ ಗ್ರಂಥಾಲಯದ ಉಪ ನಿರ್ದೇಶಕರಾದ ಅಜಯ್ ಕುಮಾರ್ ಮಾತನಾಡಿ ವಿದ್ಯಾರ್ಥಿಗಳು ಮೊಬೈಲ್ ಗೀಳನ್ನು ಬೆಳೆಸಿಕೊಂಡು ಓದುವ ಸಂಸ್ಕೃತಿಯನ್ನು ಕಳೆದುಕೊಂಡಿದ್ದಾರೆ ವಿದ್ಯಾರ್ಥಿಗಳು ಹೆಚ್ಚೆಚ್ಚು ಸಮಯವನ್ನು ಗ್ರಂಥಾಲಯದಲ್ಲಿ ಕಳೆಯಬೇಕು ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಈ ನಿಟ್ಟಿನಲ್ಲಿ ಗ್ರಂಥಾಲಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗಲು ಬಹಳ ಅನುಕೂಲವಾಗಿದೆ ಬಡ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಅಲ್ಲದೇ ಗ್ರಂಥಾಲಯ ಇಲಾಖೆಯಿಂದ ಡಿಜಿಟಲ್ ಲೈಬ್ರರಿ ಪ್ರಾರಂಭವಾಗಿದ್ದು ಮೊಬೈಲ್ ನಲ್ಲಿ ಖಾತೆ ತೆಗೆದು ಲಕ್ಷಾಂತರ ಪುಸ್ತಕಗಳು ಓದಬಹುದು ಇದರ ಸದುಪಯೋಗ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶ್ರೀಮತಿ ಸುಜಾತಾ ಬಿರಾದಾರ್ ಮಾತನಾಡಿ ಈಗಿನ ಕಾಲದಲ್ಲಿ ವಿದ್ಯಾರ್ಥಿಗಳು ತಮ್ಮ ಹೊಣೆಯನ್ನು ಮರೆತು ದುಶ್ಚಟಗಳಿಗೆ ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿದೆ ಹೊರತು ಯಾರ ಕೈಯಲ್ಲಿ ಇಲ್ಲ ತಾವು ಸೋಮಾರಿ ಮಾಡದೆ ಪರಿಶ್ರಮ ಪಟ್ಟು ಅಭ್ಯಾಸ ಮಾಡಿ ವ್ಯಕ್ತಿತ್ವ ವಿಕಸನ ಮಾಡಿಕೊಳ್ಳಬೇಕು. ಎಂದರು .ಪ್ರಾಸ್ತಾವಿಕವಾಗಿ ಪಾಂಡು ಎಲ್ ರಾಥೋಡ್ ಎ??????ಸ್ ಕಾರ್ಯಕ್ರಮಾಧಿಕಾರಿಗಳು ಮಾತನಾಡಿದರು. ಕಾರ್ಯಕ್ರಮದ ಸ್ವಾಗತವನ್ನು ಎ??????ಸ್ ವಿಭಾಗೀಯ ಅಧಿಕಾರಿ ಡಾ. ಚಂದ್ರಶೇಖರ್ ದೊಡ್ಮನಿ ಸ್ವಾಗತಿಸಿದರು ಕಾರ್ಯಕ್ರಮದ ನಿರೂಪಣೆಯನ್ನು ವಿಜಯಲಕ್ಷ್ಮಿ ರೆಡ್ಡಿ ನಿರ್ವಹಿಸಿದ್ದರು ವಂದನಾರ್ಪಣೆಯನ್ನು ರೋಹಿಣಿ ಕೆಎಸ್ ಮಾಡಿದರು. ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಾರ್ಯದರ್ಶಿ ಮಾಪಣ್ಣ ಜೀರೋಳಿ ಉಪನ್ಯಾಸಕರಾದ ಚಂದ್ರಕಾಂತ್ ಸನದಿ, ಬಾಬು ಲೋಕು ಚೌಹಾಣ್, ಬಲರಾಮ್ ಚೌಹಾಣ್ ಮಲ್ಲಯ್ಯ ಮಠಪತಿ ಶಶಿಧರ್ ಭೂಸನೂರ್ ಶ್ರೀಶೈಲ್ ಖುರ್ದು, ಡಾ. ಶಿಲಾವತಿ ವಾಡೆಕರ್ ಸಿದ್ದಲಿಂಗಪ್ಪ ಪೂಜಾರಿ .ಶ್ರೀನಿವಾಸ್ ಐ ಜಿ ರಾಜೇಶ್ ಮುಂತಾದವರಿದ್ದರು.