ಮನುಷ್ಯನ ಸ್ವಭಾವ

ಒಬ್ಬ ವ್ಯಕ್ತಿ ಮನಶಾಸ್ತ್ರಜ್ಞರಲ್ಲಿಗೆ ತನ್ನ ಮುಂಗೋಪಕ್ಕೆ ಸೂತ್ರ ಚಿಕಿತ್ಸೆಯನ್ನು ಕೇಳಿಕೊಂಡು ಬಂದ ಸಣ್ಣ ಕಾರಣಕ್ಕೊ ತನಗೆ ಹೇಗೆ ದೊಡ್ಡ ಪ್ರಮಾಣದ ಕೋಪ ಬರುತ್ತದೆ ಎಂಬುದನ್ನು ವಿವರಿಸಿ ಹೇಳಿದ.

ಒಂದು ಸಲ ಅವನು ಹೇಳಿದನ್ನು ಕೇಳಿಕೊಂಡು ಮನಶಾಸ್ತ್ರಜ್ಞನು ಯಾವುದೋ ಗುಂಗಿನಲ್ಲಿದ್ದವರಂತೆ “ಎಲ್ಲಿ? ನಿಮಗೆ ಕೋಪ ಹೇಗೆ ಬರುತ್ತದೆ ಎಂಬುದನ್ನು ಇನ್ನೊಮ್ಮೆ ಹೇಳಿ” ಎಂದರು ..ಅವರು ಹಾಗೆ ಹೇಳಿದರೋ ಇಲ್ಲವೊ, ಚಿಕಿತ್ಸೆಗೆ ಬಂದಿದ್ದ ಆ ಮಹಾರಾಯನ ಕೋಪ ಗರಿಷ್ಠವಸ್ಥೆಯಲ್ಲಿ ಕಾಣಿಸಿಕೊಂಡು. “ಒಂದು ಸಲ ಹೇಳಿದರೆ ಗೊತ್ತಾಗುವುದಿಲ್ಲವೇನ್ರಿ, ಎಷ್ಟು ಸಲ ಹೇಳಿದರೆ ಅದು ನಿಮ್ಮ ತಲೆಗೆ ಹೋಗುತ್ತದೆ ಹೇಳಿ” ಎಂದು ಟೇಬಲಿನ ಮೇಲಿದ್ದ ಪೇಪರ ವೈಟನ್ನು ಎತ್ತಿ ಕುಕ್ಕಿದನಂತೆ!

ಇದು ಬಂದು ಜೋಕಾಗಿರಬಹುದು ಆದರೆ ಒಬ್ಬರ ಸ್ವಭಾವ ಹೇಗೆ ಬದಲಾಗದು ಎಂಬುದಕ್ಕೆ ಹಿಡಿದ ಕೈಗನ್ನಡಿಯಾ ಆಗಿದೆ. ಹೌದು, ಹುಟ್ಟು ಗುಣ ಅರ್ಥಾತ್ ಸ್ವಭಾವ ಸುಟ್ಟರೂ ಹೋಗುವುದಿಲ್ಲ ಸ್ವಭಾವಕ್ಕೆ ಮದ್ದಿಲ್ಲ ಎನ್ನುವುದೂ ಇದಕ್ಕೇ ಬಚ್ಚಿಟ್ಟುಕೊಂಡರೂ ಬಚ್ಚಿಟ್ಟುಕೊಳ್ಳಲಾಗದ, ಬಚ್ಚಿಟ್ಟುಕೊಳ್ಳಲೆತ್ನಾಂದಿಷ್ಟೊ ಬಚ್ಚಿಟ್ಟುಕೊಳ್ಳಲು ಹರ್ವಶಿಸುವಂಥಾದ್ದು ಈ ಸ್ವಭಾವ ಕೇಲವು ಸ್ವಭಾವಗಳು ಸ್ವಾಭಾವಿಕವಾಗಿ ಬಂದು ಬಿಡುತ್ತದೆ. ಬದುಕಿನ ಅವಿಭಾಜ್ಯ ಅಂಗ ಅಂತಾರಲ್ಲ ಹಾಗೆ, ಮಾತನಾಡುತ್ತ ಇರುವುದು ಹೆಣ್ಣುಮಕ್ಕಳ ಸ್ವಭಾವ, ರೇಗುವುದು ಪುರುಷರ ಸ್ವಭಾವ, ಅಳುವುದು ಮಕ್ಕಳ ಸ್ವಭಾವ, ಗೋಣಗುವುದು ಮುದುಕರ ಸ್ವಭಾವ ಹೀಗೆ! ಇವು ಹುಟ್ಟಿನಿಂದಲೇ ಬರು, ಬಿಟ್ಟಿನೆಂದರೂ ಬಿಡದ ಖಾಯಂ ಗುಣಗಳು ಒಂದು ರೀತಿಯಲ್ಲಿ ಇವು ಅವರವರ ಹಕ್ಕುಗಳ್ಳಿದ್ದ ಹಾಗೆ ಅವರೂ ಬಿಟ್ಟು ಕೊಡುವುದಿಲ್ಲ ಯಾರು ಕಸಿದುಕೊಳ್ಳುವುದಿಲ್ಲ.

ಡೊಂಕುತನಕ್ಕೆ ಶ್ವಾನದ ಲಾಂಗೂಲ ಮಾತ್ರವಲ್ಲ ಮನುಷ್ಯ ಸ್ವಭಾವವೂ ಬಂದ ಉದಾಹರಣೆಯಾಗಿದೆ. ಒಬ್ಬರ ಸ್ವಭಾವವನ್ನು ಬದಲಾಯಿಸುವುದೂ ಶ್ವಾನದ ಬಾಲವನ್ನು ನೆಟ್ಟಿಗೆ ಮಾಡುವುದೂ ಎರಡು ಒಂದೇ ಹಾಗೆಯೇ ಯಾರ ಪ್ರಭಾವವೂ ಇನ್ನೊಬ್ಬರ ಸ್ವಭಾವವನ್ನು ತಿದ್ದಲಾರದು. ಭಾವನ ಸ್ವಭಾವ ಭಾವನಿಗೆ, ಮಾನವ ಸ್ವಭಾವ ಮಾನವನಿಗೆ, ಕೋಗಿಲೆ-ಕಾಗೆಯ ಸಹವಾಸದಲ್ಲಿದ್ದರೂ ತನ್ನ ಮಂಜುಳ ದ್ವನಿಯನ್ನು ಹೇಗೆ ಕಳೆದುಕೊಳ್ಳುವುದಿಲ್ಲವೂ ಹಾಗೇ ಸಜ್ಜನರು ದುಷ್ಟರ ಸಂಪರ್ಕದಲ್ಲಿದ್ದರೂ ತಮ್ಮ ಸ್ವಭಾವವನ್ನು ಕಳೆದುಕೊಳ್ಳುವುದಿಲ್ಲ ಎಂದು ಸಂಸ್ಕ್ರತ ಸುಭಾಷಿತವೊಂದು ಹೇಳುತ್ತದೆ.

ಇನ್ನು ಇಬ್ಬರ ಸ್ವಭಾವದಲ್ಲಿ ಸೌಮ್ಯತೆ ಕಾಣುವುದು ಅಪರೂಪ ಪ್ರತಿಯೊಬ್ಬರೂ ತಮ್ಮ ಸ್ವಭಾವದಲ್ಲಿ ಸ್ವಂತಿಕೆಯನ್ನು ಮರೆಯುವವರೇ ನಕಲು ಎಂಬುದು ಇಲ್ಲಿ ಇಲ್ಲ. ಈಗ ನೋಡಿ ಒಬ್ಬರು ಪ್ರತಿಯೊಂದು ವಿಷಯಕ್ಕೂ ಸರಕ್ಕನೆ ಸಿಟ್ಟಿಗೆದ್ದೆರೆ ಇನ್ನೊಬ್ಬರು ಎಲ್ಲ ಸಂಗತಿಗಳನ್ನು ಶಾಂತಿ ಮನಸ್ಸರಾಗಿ ಸ್ವೀಕರಿಸಬಹುದು. ಒಬ್ಬರು ಎದುರಿನವರು ಕೇಳಲಿ ಬೀಡಲಿ, ತಮ್ಮ ಶಂಖವನ್ನು ತಾವು ಊದಿದರೆ ಇನ್ನೊಬ್ಬರು ಯೋಚನೆ ಮಾಡಿದ ನಂತರ ಬಂದು ತೊರದ ಮಾತಾಡಬಹುದು ಎಲ್ಲರನ್ನೂ ಹಚ್ಚಿಕೊಂಡು ಹೋಗುವ ಕಕ್ಕುಲಾತಿಯ ಸ್ವಭಾವ ಒಬ್ಬರಾದರೆ, ಯಾರನ್ನು ಯಾವೂದನ್ನು ಹೆಚ್ಚಿಗೆ ಹಚ್ಚಿಕೊಳ್ಳದೆ ನಿಶ್ಚಿಂತರಾಗಿರುವುದು ಇನ್ನೊಬ್ಬರದೂ ಸ್ವಭಾವವಾಗಿರಬಹುದು ಹೀಗೆ ಒಬ್ಬಬ್ಬರದೂ ಒಂದೊಂದು ರೀತಿಯ ಸ್ವಭಾವ.

ಎಲ್ಲಾರಲ್ಲೂ ಸಾಮಾನ್ಯ ಎನ್ನಬಹುದಾದ ಕೆಲವು ಸ್ವಭಾವಗಳು ಇವೆಯಾದರೂ ಜನ ಅವರನ್ನು ಗುರುತಿಸುವುದು ಅವರವರದೆ ಆದ ಸ್ವಂತ ಸ್ವಭಾವದಿಂದಲೇ. ಉದಾಹರಣೆಗೆ ಸಿಟ್ಟಿನ ಶಾಂತಪ್ಪ ನಿಶ್ಚಿಂತರಾಯಣ, ಸಂಕಟದ ಸುಟ್ಟರಾಯ ಹೀಗೆ ಜನ ಅವರನ್ನು ಅವರ ಅನುಪಸ್ಥಿಯಲ್ಲಿ ಅವರ ಸ್ವಭಾವವನ್ನು ಸೇರಿಸಿಯೆ ಕರೆಯುತ್ತಾರೆ.

ಒಬ್ಬರ ಸ್ವಭಾವ ತಿಳಿದ ಮೇಲೆ ಅದಕ್ಕೆ ತಕ್ಕಂತೆ ಅವರೊಂದಿಗೆ ನಡೆದುಕೊಳ್ಳುವುದು ಜಾಣತನ ಅವರೊಂದಿಗೆ ಉತ್ತಮ ಬಾಂಧವ್ಯದ ದೃಷ್ಟಿಯಿಂದಲೂ ಇದು ಯೋಗ್ಯ ಕ್ರಮ, ಸೂಕ್ಷ್ಮ ಸ್ವಭಾವದವರೊಂದಿಗೆ ಒರಟು ಸ್ವಭಾವದವರು ಏಕಪಕ್ಷೀಯವಾಗಿ ಸಲಿಗೆಯನ್ನು ವಹಿಸಿ ಸಲೀಸಾಗಿ ಹೆಗಲ ಮೇಲೆ ಕೈಹಾಕಿ “ಏನಯ್ಯಾ ಸಮಾಚಾರ” ಎಂದು ಕೇಳಿದಕ್ಕೆ ಹೇಗಾಗಬೇಡ? ಮೊದಲೇ ಅವರ ಸ್ವಭಾವ ಇವರಿಗೆ ನುಂಗಲೂ ಆಗದ ಉಗುಳಲೂ ಆಗದ ಬಿಸಿತುಪ್ಪ ಮೇಲೆ ಸಲಿಗೆಯ ಮಾಘಸ್ತನ ಸೂಕ್ಷ್ಮ ಸ್ವಭಾವದವರು ಪಾಲಿಗೆ ಇಂಥ ಸಂದರ್ಭಗಳು ಮುದ್ರಣದ ಮಾತಿನಲ್ಲಿ ಹೇಳುವುದಾದದರೆ ನೀರಳಿಯದ ಗಂಟನೊಳ್ ಕಡೆಬನ್ನು ತುರುಕಿದಂತೆ!.

ಇನ್ನು ಗುಟ್ಟಿನ ವಿಷಯವನ್ನು ತಡೆವಿಲ್ಲದೆ ಪ್ರಸಾರ ಮಾಡುವುದು ಹೆಂಗಸರ ಸಹಜ ಸ್ವಭಾವ ಎಂದು ಗೊತ್ತಿದ್ದೂ ಅವರ ಮುಂದೆ ಗುಟ್ಟನ್ನು ಬಿಚ್ಚಿಟ್ಟರೆ ಯಾರಿಗೆ ಹೇಳಬೇಕು ಎಂಬುದನ್ನೂ ಆಗಲೇ ಮನಸ್ಸಿನಲ್ಲಿ ನಿಶ್ಚಿಯಸುವ ಹೆಂಗಸರ ತಪ್ಪೆ? ಅಂದ ಹಾಗೆ ಕೌಟುಂಬಿಕ ವಿಷಯವಾಗಿ ’ಕುತೂಹಲ” ಹೆಂಗಸರ ಸ್ವಭಾವವಾದರೆ “ನಿರಾಸಕ್ತಿ” ಗಂಡಸರ ಸ್ವಭಾವ, ಅವರ ಸ್ವಭಾವ ಇವರಿಗೆ ಬೇಡವಾದರೆ ಇವರ ಸ್ವಭಾವ ಅವರಿಗೆ ಗೂಢವಾಗಿದೆ. ಒಟ್ಟಿನಲ್ಲಿ ಅವರವರ ಸ್ವಭಾವ ಅವರಿಗೆ ಸಹಜವಾಗಿದೆ. ಯಾರನ್ನೂ ಯಾರೂ ಅಪೇಕ್ಷಿಸುವಂತಿಲ್ಲ ತಮ್ಮ ಎಂದಿನ ಸಂಸಾರಿಕ ವಾರ್ತಾಲಾಪದಲ್ಲಿ ಸ್ತ್ರೀಯರು ಮುಳಗಿ ಜಗತ್ತನ್ನೂ ಮರೆತರೆ ಅಯ್ಯೋ’ ಅವರ ಸ್ವಭಾವವೇ ಅಷ್ಟು ಎಂದು ಗಂಡಸರು ಸುಮ್ಮನಾಗುತ್ತಾರೆ. ತಾವೂ ಏನೇ ತರಾತುರಿ ಸುದ್ದಿ ಹೇಳಿದರು ಮತ್ತು ಹೂಗಳಲ್ಲೆ ಮುಗಿಸುವ ಗಂಡಸರನ್ನು ಕಂಡು ’ಅಯ್ಯೋ ಇವರ ಸ್ವಭಾವವು ಇಷ್ಟೆ ಎಂದು ಹೆಂಗಸರು ನಿಡುಸುಯ್ಯಾತ್ತಾರೆ.

ಕೆಲವೊಮ್ಮೆ ಸ್ವಭಾವ ವಂಶಪಾರಂಪರಿಕವಾಗಿ ಬಂದರೆ ಮತ್ತೆ ಕೆಲವು ಸಲ ಅದು ಪರಿಸರದ ಪ್ರಭಾವಕ್ಕೋ ಒಳಗಾಗಬಹುದು ವಯೋಮಾನಕ್ಕೊ ಅನುಗುಣವಾಗಿಯು ಕೆಲವು ಸ್ವಭಾವಗಳು ಕಾಣಿಸಕೊಳ್ಳಬಹುದು. ಚಾಂಚಲ್ಯ ಬಾಲ್ಯದ ಸ್ವಭಾವವಾದರೆ, ಪೌಢಾವಸ್ಥೆ ಪುರುಷರಿಗೆ ಗಾಂಭಿರ್ಯವನ್ನು ಹೆಣ್ಣುಮಕ್ಕಳಿಗೆ ನಾಚಿಕೆಯನ್ನೆ ಕೊಡುಗುಯಾಗಿ ನೀಡುತ್ತದೆ. ವಯಸ್ಸಾದಂತೆಲ್ಲ ಸಿಟ್ಟು ಸೇಡುವ ಕಡಿಮೆಯಾಗಿ ಶಾಂತ ಮನೋಭಾವ ನಿಧಾನವಾಗಿ ಆವರಿಸಕೋಳ್ಳಬಹುದು ಆಯಾ ಸ್ವಭಾವ ಆಯಾ ವಯಸ್ಸಿನವರ ಲಕ್ಷಣವೂ ಹೌದು ಅದು ಅವರಿಗೆ ಭೊಷಣವೂ ಹೌದು. ಸಮಾನಶೀಲೆ ವ್ಯಸನೇಷ ಸಖ್ಯಂ ಎನ್ನುವಂತೆ ಸಮಾನ ಸ್ವಭಾವದವರು ಬಹುಬೇಗ ಒಮ್ಮುಖರಾಘುತ್ತಾರೆ, ವಿಭಿನ್ನ ಸ್ವಭಾವದವರು ಅಷ್ಟೇ ಬೇಗ ವಿಮುಖರಾಗುತ್ತಾರೆ. ಬಹಳವೆಂದರೆ ಅವರು ಪರಸ್ಪರ ಪರಿಚಿತರಾಗಿ ಮುಂದುವರೆಯುತ್ತಾರೆ ಆದರೆ ಸಗಿತರಾಗುವುದಿಲ್ಲ.

“ಲೋಕೋಭಿನ್ನರುಚಿ” ಎಂಬಂತೆ ಸಮಾನ “ಲೋಕೋಭಿನ್ನ ಸ್ವಭಾವಂ” ಕೊಡ ಆಹುದು. ನಮ್ಮನ್ನು ನಾವು ಸ್ವಭಾವವ ಸಂಪರೆಂದು ಹೇಳಿ ತಿಳಿದುಕೊಂಡಿರುತ್ತೇವೆ ಯಾಕೆಂದರೆ ನಮ್ಮ ಸ್ವಭಾವ ನಮಗೆ ಸರಿಯಾಗಿಯೇ ತೋರುತ್ತದೆ. ಆದರೆ ಬೇರೆಯವರಿಗೆ ಅದು ಅಸ್ವಾಭಾವಿಕ ಎನಿದುವ ಸಂದರ್ಭಗಳು ಹೆಚ್ಚು ಅವರವರ ಸ್ವಭಾವ ಅವರ ಸ್ವಂತದಲ್ಲವೆ? ಅದನ್ನು ಬದಲಾಯಿಸುವುದು ಸಾಧ್ಯವೂ ಅಲ್ಲ, ನಮಗೆ ಬಗ್ಗುವ ಸ್ವಭಾವದ ಸವಿ ಸವಿಯತ್ತ ಬಗ್ಗದ್ದರ ಬಗರನ್ನು ಅಲ್ಲೆ ಬಿಡುತ್ತ ಸಾಗುವ ಹಂಸಕ್ಷೀರ ನ್ಯಾಯದ ಸ್ವಭಾವ ನಮ್ಮದಾಗಿಬಿಟ್ಟರೆ ಅದಕ್ಕಿಂತ ಸುಖ ಬೇರುಂಟೆ?

ಆದ್ದರಿಂದ ಬೇರೆಯವರನ್ನು ತೆಗಳುವ ಪೂರ್ವದಲ್ಲಿ ನಮ್ಮನ್ನ ನಾವು ಅರ್ಥೈಸಿಕೊಳ್ಳವುದೇ ಲೇಸು. ಸ್ವಭಾವಕ್ಕೇ ಹೊಂದಿಕೊಂಡು ನಾವು ಬದಲಾಗಬೇಕೆ ವಿನಃ ಬೇರೆಯವರಿಗೆ ಬದಲಾಗಿಸುವ ಪರಿ ನಮ್ಮದ್ದಾಗಬಾರದು. ಅಂದಾಗ ಮಾತ್ರ ನಾವು ಬೆಳೆಯಲು ಸಾಧ್ಯ ಆದ್ದರಿಂದ ಅವರವರ ಸ್ವಭಾವ ಅವರವರಿಗೆ ಬಿಟ್ಟಿದ್ದು ಎಂಬುದು ನನ್ನ ಸ್ವಯಂ ಪ್ರೇರಿತ ಅಧಿಮತ.

ಡಾ.ಸುಮಂಗಲಾ. ಎನ್.ರೆಡ್ಡಿ.

ಸಹಾಯಕ ಪ್ರಾಧ್ಯಪಕರು,
ಶರಣಬಸವ ವಿಶ್ವವಿದ್ಯಾಲಯ, ಕಲಬುರಗಿ.