ಮನುಷ್ಯನ ಮನಸ್ಸಿನ ಮಾಲಿನ್ಯವೇ ಪರಿಸರ ಮಾಲಿನ್ಯಕ್ಕೆ ಕಾರಣ

ಮೈಸೂರು,ಜೂ.9: ಮನುಷ್ಯನ ಮನಸ್ಸಿನ ಮಾಲಿನ್ಯವೇ ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಡಾ.ಬಿ.ವಿ. ವಸಂತ್ ಕುಮಾರ್ ಅಭಿಪ್ರಾಯಪಟ್ಟರು.
ಅವರಿಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮೈಸೂರು ವಿಭಾಗದ ವತಿಯಿಂದ ಎಬಿವಿಪಿ ಕರ್ನಾಟಕ ಕರೆ ನೀಡಿದ್ದ ಆಕ್ಸಿಜನ್ ಚಾಲೆಂಜ್ ಅಭಿಯಾನದ ಅಂಗವಾಗಿ ಮೈಸೂರಿನ ಗಾಂಧಿನಗರದಲ್ಲಿ ಸಸಿಗಳನ್ನು ನೆಡುವುದರ ಮೂಲಕ ಆಕ್ಸಿಜನ್ ಚಾಲೆಂಜ್ ನ್ನು ಸ್ವೀಕರಿಸಿದರು. ಬಳಿಕ ಮಾತನಾಡಿದ ಅವರು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮತ್ತು ಸ್ಟೂಡೆಂಟ್ಸ್ ಫಾರ್ ಡೆವಲಪ್ ಮೆಂಟ್ ವೇದಿಕೆಗಳು ಕರ್ನಾಟಕ ರಾಜ್ಯದಲ್ಲಿ ಐದು ಲಕ್ಷಕ್ಕೂ ಹೆಚ್ಚು ಸಸಿಗಳನ್ನು ನೆಡುವಂಥದ್ದು ಬಹಳ ಸಂತೋಷದ ಸಂಗತಿ. ಆ ಕಾರ್ಯಕ್ರಮ ಯಶಸ್ವಿಯಾಗಲೆಂದು ತುಂಬು ಹೃದಯದಿಂದ ಹಾರೈಸುತ್ತೇನೆ. ಕೊರೋನಾದಂತಹ ಸಮಯದಲ್ಲಿ ರಾಜ್ಯದ ಯುವಜನಾಂಗ ಇಂತಹ ಕೆಲಸದಲ್ಲಿ ತೊಡಗಿರುವುದು ಭವಿಷ್ಯದ ದೃಷ್ಟಿಯಿಂದ ಕೂಡ ರಚನಾತ್ಮಕ ಮಾರ್ಗವನ್ನು ಸೃಷ್ಟಿ ಮಾಡಲಿದೆ. ಗಿಡಗಳನ್ನು ಹಾಕಬೇಕಾಗಿರುವುದು ಗಿಡಗಳ ಕಲ್ಯಾಣಕ್ಕಲ್ಲ, ಮನುಷ್ಯನ ಕಲ್ಯಾಣಕ್ಕೆ, ಗಿಡಗಳನ್ನು ರಕ್ಷಿಸಬೇಕಾಗಿರುವುದು ಬೆಳೆಸಬೇಕಾಗಿರುವುದು ನಮ್ಮ ಕರ್ತವ್ಯವಾಗಿದೆ ಎಂದರು.
ಬಹುಶಃ ಕೊರೋನಾ ಈ ಪಾಠ ಕಲಿಸುತ್ತಿದೆ. ಪ್ರಕೃತಿ ನಾಶವಾದರೆ ಮನುಷ್ಯನ ನಾಶ ಕಟ್ಟಿಟ್ಟ ಬುತ್ತಿ. ಅದನ್ನು ಉಳಿಸಿಕೊಳ್ಳುವ ಪ್ರಜ್ಞೆ ಕೂಡ ಇದರಿಂದ ಜಾಗೃತವಾಗಲಿ, ಗಿಡ ನೆಡುವ ಕ್ರಿಯೆ ಒಂದು ದಿನದ ಕ್ರಿಯೆಯಾಗದೆ ಮನಸ್ಸಿನೊಳಗಡೆ ನಿರಂತರವಾದ ಹಸಿರೀಕರಣಕ್ಕೆ ಕಾರಣವಾಗಲಿ. ಮನುಷ್ಯನ ಮನಸ್ಸಿನ ಮಾಲಿನ್ಯವೇ ಪರಿಸರ ಮಾಲಿನ್ಯಕ್ಕೆ ಕಾರಣವಾಗತ್ತೆ. ಮನಸ್ಸಿನ ಮಾಲಿನ್ಯ ಶುದ್ಧವಾಗುತ್ತ ಹೋದ ಹಾಗೆ ಪರಿಸರ ಕೂಡ ಶುದ್ಧವಾಗತ್ತೆ. ಹಾಗಾಗಿ ಅಂತರಂಗ ಶುದ್ಧಿಯೇ ಬಹಿರಂಗ ಶುದ್ಧಿ ಅಂತ ಬಸವಣ್ಣನವರು ಹೇಳಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಮುಖರಾದ ಮಹದೇವಪ್ರಸಾದ್, ಕಾಪೆರ್Çೀರೇಟರ್ ಅಶ್ವಿನಿ ಶರತ್, ರಾಜ್ಯ ಸಹಕಾರ್ಯದರ್ಶಿ ಶ್ರೀರಾಮ್, ಜಿಲ್ಲಾ ಸಂಚಾಲಕ ಮಲ್ಲಪ್ಪ, ಮಹಾನಗರ ಸಹಕಾರ್ಯದರ್ಶಿ ಕಿರಣ್, ಕಾರ್ಯಕರ್ತರಾದ ಮನು ಭಾಗವಹಿಸಿದ್ದರು