ಮನುಷ್ಯನ ದುರಾಸೆಗೆ ಪರಿಸರ ನಾಶ – ಸೋಮನಾಥ ಶ್ರೀ‌

ಸಿಂಧನೂರು.ನ.08- ಮನುಷ್ಯನ ಆಸೆ ದುರಾಸೆಗಳಿಗಾಗಿ ಮರಗಳನ್ನು ಕಡಿಯುತ್ತಾ ಪರಿಸರವನ್ನು ನಾಶ ಮಾಡುತ್ತಿರುವುದು ಅಪಾಯಕಾರಿ ಬೆಳವಣಿಗೆ ಎಂದು ಮೂರ ಮೈಲ್ ಕ್ಯಾಂಪಿನ ಸೋಮನಾಥ ಶಿವಾಚಾರ್ಯ ಮಹಾಸ್ವಾಮಿಗಳು ಕಳವಳ‌ ವ್ಯಕ್ತ ಪಡಿಸಿದರು.
ವನಸಿರಿ ಫೌಂಡೇಶನ್ ನಗರದಲ್ಲಿ ಹಮ್ಮಿಕೊಂಡಿದ್ದ ‌ ಪರಿಸರ ಜಾಗೃತಿ ನಾಮಪಲಕ ಉದ್ಘಾಟನೆ ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡಿದ ಅವರು ಮನುಷ್ಯ ಸೇರಿದಂತೆ ಸಕಲ ಜೀವರಾಶಿಗಳಿಗೆ ಹಸಿರೇ ಉಸಿರಾಗಿದ್ದು ಎಲ್ಲರೂ ಗಿಡ ಮರಗಳನ್ನು ಬೆಳೆಸುವ ಮೂಲಕ ಶುದ್ದವಾದ ಗಾಳಿ, ಉತ್ತಮವಾದ ಆರೋಗ್ಯ ಕಾಪಾಡಿಕೊಳ್ಳಬೆಕೆಂದು ಹೇಳಿದ ಅವರು ವನಸಿರಿ ಫೌಂಡೇಷನ್ ಪರಿಸರ ಕಾಳಜಿಯನ್ನು ಶ್ಲಾಘಿಸಿದರು.
‌ ಮಾದಯ್ಯ ಗುರುವಿನ್ ತುರವಿಹಾಳ ,ಅಮರ ಗುಂಡ ಶಿವಾಚಾರ್ಯರ ಮಹಾಸ್ವಾಮಿಗಳು ತುರವಿಹಾಳ,ಜಿ.ಪ‌ ಸದಸ್ಯರಾದ ಶಿವನಗೌಡ ಗೋರೆಬಾಳ, ಬಸವರಾಜ ಹಿರೇಗೌಡರ, ವನಸಿರಿ ಫೌಂಡೇಶನ್‌ ಜಿಲ್ಲಾದ್ಯಕ್ಷರಾದ ಅಮರೇಗೌಡ ಮಲ್ಲಾಪುರ, ಸೋಮನ ಗೌಡ ಬಾದರ್ಲಿ, ಸಂದೀಪ ಪಾಟೀಲ, ಮಂಗಳಮುಖಿ ಮಧುಶ್ರೀ ,ದ್ರಾಕ್ಷಾಯಣಿ, ಹನುಮಂತಪ್ಪ ನಾಯಕ, ಕಾರುಣ್ಯ ಸಂಸ್ಥೆಯ ಚನ್ನಬಸವ, ಸೇರಿದಂತೆ ಇತರರು ವೇದಿಕೆ ಮೇಲೆ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಕೊಟ್ರೇಶ ಸೇರಿದಂತೆ ಇತರ ಸಾಧಕರಿಗೆ ಕಾರ್ಯಕ್ರಮ ದಲ್ಲಿ ಸನ್ಮಾನಿಸಿ, ಗೌರವಿಸಲಾಯಿತು.