ಕರಜಗಿ :ಅ.1:ಮನುಷ್ಯ ಆರೋಗ್ಯದಿಂದ ಇರಲು ಯೋಗ, ಪ್ರಾಣಾಯಾಮದ ಅವಶ್ಯಕತೆಯಿದೆ.ಆದ್ದರಿಂದ ನಾವು ಯೋಗ ಹಾಗೂ ಪ್ರಾಣಾಯಮದೊಂದಿಗೆ ನಮ್ಮ ದಿನವನ್ನು ಆರಂಭಿಸಬೇಕು ಎಂದು ತಾಲೂಕಿನ ಬಳೂರ್ಗಿ ಗ್ರಾಮದ ಆಯುಷ್
ಆರೋಗ್ಯ ಕ್ಷೇಮ ಕೇಂದ್ರ ಮತ್ತು ಆಯುರ್ವೇದ ಚಿಕಿತ್ಸಾಲಯದ ವೈದ್ಯಾಧಿಕಾರಿ ಡಾ ಶ್ರೀಶೈಲ ಪಾಟೀಲ ಹೇಳಿದರು
ಅವರು ಅಫಜಲಪುರ ತಾಲೂಕಿನ ಬಳೂರ್ಗಿ ಗ್ರಾಮದ ಸರ್ಕಾರಿ ಆಯುರ್ವೇದ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ಉಚಿತ ಆಯುರ್ವೇದ ಚಿಕಿತ್ಸೆ, ರಕ್ತದೋತ್ತಡ (ಬಿಪಿ), ಮಧುಮೇಹ, ಕೀಲು ನೋವು, ಸ್ತ್ರೀ ರೋಗ ಸೇರಿದಂತೆ ವಿವಿಧ ಕಾಯಿಲೆಗಳ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ ಕಾರ್ಯಕ್ರಮದಲ್ಲಿ ಮಾತನಾಡಿದರು
ಯೋಗ ಶಿಕ್ಷಕಿ ಪ್ರಭಾವತಿ ಎಸ್ ಮೇತ್ರೆ ಮಾತನಾಡಿ
ಯೋಗ ಧ್ಯಾನ ಪ್ರಾಣಾಯಾಮ ನಮ್ಮ ದೇಹದ ಮಾನಸಿಕ ದೈಹಿಕ ಆರೋಗ್ಯಕ್ಕೆ ಅವಶ್ಯಕವಾಗಿದೆ.
ಇಂದಿನ ಒತ್ತಡದ ಮತ್ತು ಧಾವಂತದ ಜೀವನ ಶೈಲಿಯಿಂದ ಜನರು ಮಾನಸಿಕವಾಗಿ ಬಹಳಷ್ಟು ಬಳಲುತ್ತಾರೆ.ಈ ನಿಟ್ಟಿನಲ್ಲಿ ದಿನನಿತ್ಯ ಯೋಗ ಧ್ಯಾನ ಪ್ರಾಣಾಯಾಮ ಮಾಡುವುದು ಅನಿವಾರ್ಯವಾಗಿದೆ ಎಂದು ಹೇಳಿದರು
ಡಾ ಮನೋರಮಾ ಕಕ್ಕಳಮೇಲಿ ಮನೆಮದ್ದು ಕಾರ್ಯಕ್ರಮ ಮನೆಯಲ್ಲಿ ಹಾಗೂ ಸುತ್ತಮುತ್ತ ಸಿಗುವಂತಹ ಕೆಲವೊಂದು ಔಷಧಿ ಸಸ್ಯಗಳ ಬಗ್ಗೆ ಮಾಹಿತಿ ನೀಡಿದರು. ಗ್ರಾಮ ಪಂಚಾಯತ ಅಧ್ಯಕ್ಷ ರಮೇಶ ಹೆರೂರ ಕಾರ್ಯಕ್ರಮ ಉದ್ಘಾಟಿಸಿದರು
ಈ ಸಂದರ್ಭದಲ್ಲಿ ಡಾ ಮನೋರಮಾ ಕಕ್ಕಳಮೇಲಿ ಯೋಗ ಶಿಕ್ಷಕಿ ಪ್ರಭಾವತಿ ಎಸ್ ಮೇತ್ರೆ ಪ್ರತಿಭಾ ಮಹಿಂದ್ರಕರ ಶಿವಾನಂದ ಹಸರಗುಂಡಗಿ ಬಸಮ್ಮಾ ಗುತ್ತೇದಾರ ಅರವಿಂದ ದೊಡ್ಡಮನಿ,ಗಂಗೂಬಾಯಿ ದೊಡ್ಡಮನಿ,ಶಿವಪ್ಪ ಪೂಜಾರಿ,ಕಬೀರದಾಸ ರಾಠೋಡ,ಮನೋಹರ ರಾಠೋಡ,ಅರ್ಜುನ ಸೋಮಜಾಳ ನಾಗಮ್ಮ ಚಲಗೇರಿ ರಾಜಕುಮಾರ ಹಡಪದ,ಶಿವಯ್ಯಾ ಗುತ್ತೇದಾರ ಇತರರಿದ್ದರು