ಮನುಷ್ಯನ ಆರೋಗ್ಯಕ್ಕಾಗಿ ಪರಿಸರ ಸಂರಕ್ಷಣೆ ಅಗತ್ಯ

 ಚಿತ್ರದುರ್ಗ. ಅ.೩೦; ಆರೋಗ್ಯಪೂರ್ಣ ಜೀವನ ನಡೆಸಲು ಪರಿಸರದ ಜತೆ ನಾವು ಸಹಕರಿಸಬೇಕಾಗುತ್ತದೆ, ಪರಿಸರದ ನಿಯಮಗಳನ್ನ ಉಲ್ಲಂಘನೆ ಮಾಡಿ ನಾವು ನಮ್ಮ ಜೀವನವನ್ನು ರೂಪಿಸಿಕೊಳ್ಳಲು ಅಸಾಧ್ಯ, ಸಾಮಾನ್ಯ ಜನರಿಗೂ ಸಹ ಪರಿಸರ ಪ್ರಜ್ಞೆ ಮೂಡಿಸಬೇಕಾಗುತ್ತದೆ, ವಿಶ್ವವಿದ್ಯಾಲಯದ ಸುಂದರ ಪರಿಸರಕ್ಕೆ ಮಕ್ಕಳನ್ನ ಕರೆದೊಯ್ದು, ಅವರಿಗೆ ಪರಿಸರ ಪ್ರಜ್ಞೆ ಮೂಡಿಸಬೇಕಾಗುತ್ತದೆ ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷ ಡಾ. ಎಚ್. ಕೆ. ಎಸ್. ಸ್ವಾಮಿ ತಿಳಿಸಿದರು.ಅವರು ನಗರದಲ್ಲಿರುವ ದಾವಣಗೆರೆ ವಿಶ್ವವಿದ್ಯಾಲಯದ ಸ್ನಾತಕೋತ್ತರ ವಿಭಾಗ. ಜ್ಞಾನಗಂಗೋತ್ರಿಯಲ್ಲಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಮತ್ತು ಎಂ.ಕಾಂನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಸಹಯೋಗದಿಂದ ಆಯೋಜಿಸಿದ್ದ “ಪರಿಸರ ಮತ್ತು ಆರೋಗ್ಯ” ಜನಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.ವಿಶ್ವವಿದ್ಯಾಲಯದ ಪರಿಸರದ ಮಾರ್ಗದರ್ಶನವನ್ನು, ಪರಿಸರದ ಮಾರ್ಗಸೂಚನೆಗಳನ್ನು, ಸಾಮಾನ್ಯ ಜನರ ಮಟ್ಟಕ್ಕೆ ತೆಗೆದುಕೊಂಡು ಹೋಗುವುದು ಉತ್ತಮ. ಪರಿಸರದ ಬಗ್ಗೆ ಉನ್ನತ ವ್ಯಾಸಂಗ ಮಾಡುವಂತಹ ಅವಕಾಶಗಳು ಸಿಕ್ಕಾಗ, ವಿದ್ಯಾರ್ಥಿಗಳು ಅವುಗಳನ್ನು ಬಳಕೆ ಮಾಡಿಕೊಳ್ಳಬೇಕು, ರಾಷ್ಟ್ರೀಯ ಸೇವಾ ಯೋಜನೆಯ ಅಡಿಯಲ್ಲಿ ಬರುವ ಎಲ್ಲಾ ಸಾಮಾಜಿಕ, ಆರ್ಥಿಕ, ಆರೋಗ್ಯಕ್ಕೆ ಪೂರಕವಾದ ಕಾರ್ಯಕ್ರಮಗಳು, ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಸಹಕಾರಿಯಾಗುತ್ತದೆ ಎಂದರು.ಉನ್ನತ ಶಿಕ್ಷಣದ ಅವಕಾಶ ಕೆಲವಷ್ಟೇ ಜನರಿಗೆ ದೊರೆಯುತ್ತಿರುವುದರಿಂದ, ವಿಶ್ವವಿದ್ಯಾಲಯಗಳಿಗೆ ಜನಸಾಮಾನ್ಯರನ್ನ ಕರೆದೊಯ್ದು, ಅವರಿಗೆ ಅಲ್ಲಿಯ ವಿದ್ಯಾರ್ಜನೆಯ ಆಗುಹೋಗುಗಳನ್ನು ಮನದಟ್ಟು ಮಾಡಿಕೊಟ್ಟ, ಅಷ್ಟು ಜನರೂ ಸಹ ತಮ್ಮ ಬದುಕಿನಲ್ಲಿ ಬದಲಾವಣೆ ಮಾಡಿಕೊಳ್ಳಲು ಅನುಕೂಲವಾಗುವುದು ಎಂದರು.ಡಾ. ಸತ್ಯನಾರಾಯಣ ಸಹ ಪ್ರಾಧ್ಯಾಪಕರು ಮಾತನಾಡುತ್ತಾ ರಾ.ಸೇ.ಯೋ ಉದ್ಧೇಶ ವಿದ್ಯಾರ್ಥಿಗಳ ಸೇವಾ ಮನೋಭಾವನೆ ಹೆಚ್ಚಿಸುವುದೇ ಆಗಿದೆ. ಓದಿನ ಜೊತೆಗೆ ನಾವು ಸೇವಾ ಮನೋಭಾವನೆಯನ್ನು ಮಕ್ಕಳಲ್ಲಿ ತುಂಬಬೇಕಾಗುತ್ತದೆ. ಅದಕ್ಕಾಗಿ ವಿಜ್ಞಾನ ಸಂಸ್ಥೆಗಳು, ಎನ್ನೆಸ್ಸೆಸ್‌ಗಳು, ರೋಟರಿ ಸಂಸ್ಥೆಗಳು, ಇನ್ನರ್ ವೀಲ್, ಮಹಿಳಾ ಸಂಘಟನೆಗಳು, ಎಲ್ಲವೂ ಸಹ ಸಹಭಾಗಿತ್ವದಲ್ಲಿ ಕೆಲಸ ಮಾಡಿದಾಗ, ಒಳ್ಳೆಯ ಫಲಿತಾಂಶ ಬರಲು ಕಾರಣವಾಗುತ್ತದೆ, ಬಿಡುವಿನ ಸಮಯದಲ್ಲಿ ವಿದ್ಯಾರ್ಥಿಗಳನ್ನು ಅರಣ್ಯಗಳಿಗೆ ಭೇಟಿ ನೀಡಿ, ಮೃಗಾಲಯಗಳಿಗೆ ಕರೆದೊಯ್ಯುವುದು, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಮಾಡುವುದು, ಅವರ ಮನಪರಿವರ್ತನೆಗೆ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಎಂದರು. ಉಷಾ ಸಹಾಯಕ ಪ್ರಾಧ್ಯಾಪಕರು, ರಾ.ಸೇ.ಯೋ.ಅಧಿಕಾರಿಗಳು, ಘಟಕ 1 ಮಾತನಾಡುತ್ತಾ ಸಾಮಾನ್ಯ ಜನರಿಗೆ, ಸಾಮಾನ್ಯ ವಿದ್ಯಾರ್ಥಿಗಳಿಗೆ ಕೆಲವೊಮ್ಮೆ ವಿಶ್ವವಿದ್ಯಾಲಯ ಮಟ್ಟದಲ್ಲಿ ಶಿಕ್ಷಣ ಪಡೆವ ಅವಕಾಶಗಳು ಕಡಿಮೆಯಾಗಿರುತ್ತವೆ. ಆದರೂ ಸಹ ತಮ್ಮ ಜೀವನದ ಒಂದಿಷ್ಟು ಸಮಯದಲ್ಲಿ ವಿಶ್ವವಿದ್ಯಾಲಯಗಳಿಗೆ ಭೇಟಿ ನೀಡಿ, ಅಲ್ಲಿನ ಅಧ್ಯಯನ ಮಾಡುವ ರೀತಿ, ವಿದ್ಯಾರ್ಥಿಗಳ ಕೌಶಲ್ಯಗಳನ್ನು ಕಂಡುಕೊAಡು ತಮ್ಮ ಜೀವನಕ್ಕೆ, ತಮ್ಮ ಸುತ್ತಲಿನ ಪರಿಸರಕ್ಕೆ ಅಳವಡಿಸಿಕೊಳ್ಳಬಹುದು ಎಂದರು. ರೋರ‍್ಯಾಕ್ಟ್ ಎಚ್.ಎಸ್. ರಚನಾ, ಎಚ್. ಎಸ್. ಪ್ರೇರಣಾ ಪರಿಸರ ಗೀತೆಗಳನ್ನು ಮತ್ತು ವಿಜ್ಞಾನದ ಗೀತೆಗಳನ್ನ ಹಾಡಿ ಜಾಗೃತಿ ಮೂಡಿಸಿದರು ಕಾರ್ಯಕ್ರಮದಲ್ಲಿ ಶ್ರೀಮತಿ ಸುಮಾ ಕೆಂಚರೆಡ್ಡಿ ಹಾಗೂ ಎಂ. ಕಾಂ.ನ ಸ್ನಾತಕೋತ್ತರ ವಿದ್ಯಾರ್ಥಿಗಳಲ್ಲಿ ಭಾಗವಹಿಸಿದ್ದರು.Attachments area