ಮನುಷ್ಯನ ಅಂಧಕಾರ ಕಳೆಯಲು ಗುರುವಿನ ಮಾರ್ಗದರ್ಶನ ಅವಶ್ಯಕತೆಯಿದೆ:ನಾರಾಯಣಸಿಂಗ ಬೆಂಕಿತಾತ

ಶಹಾಬಾದ: ಜು.15:ಮನುಷ್ಯನಲ್ಲಿ ಅಡಗಿರುವ ಅಂಧಕಾರವನ್ನು ಕಳೆಯಲು ಗುರುಗಳ ಮಾರ್ಗದರ್ಶನದ ಅವಶ್ಯಕತೆ ಇದೆ. ಗುರುಗಳ ಮಾರ್ಗದರ್ಶನದಿಂದ ಮಾತ್ರ ಮನುಷ್ಯನ ಅಡಗಿರುವ ಅಂಧಕಾರವನ್ನು ದೂರ ಮಾಡಬಹುದಾಗಿದೆ ಎಂದು ಯನಗುಂಟಿಯ ನಾರಾಯಣಸಿಂಗ ಬೆಂಕಿತಾತನವರು ಹೇಳಿದರು.

ಅವರು ಬುಧವಾರ ಯನಗುಂಟಿ ಗ್ರಾಮದ ಬೆಂಕಿತಾತನ ಮಠದಲ್ಲಿ ಗುರುಪೂರ್ಣಿಮೆ ನಿಮಿತ್ತ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಾನವ ಜನ್ಮ ಪಾವನವಾಗಬೇಕಾದರೆ ಗುರು ಮಾರ್ಗದರ್ಶನ ಪಡೆದು ಧರ್ಮದ ದಾರಿಯಲ್ಲಿ ನಡೆಯುವ ಅವಶ್ಯಕತೆ ಇದೆ. ಮಠಮಾನ್ಯಗಳ ಮಠಾಧೀಶರು ಧರ್ಮಭೋದನೆ ಮಾಡದೆ ಇದ್ದರೆ ಸಮಾಜ ಅಧೋಗತಿ ತಲುಪುತ್ತಿತ್ತು. ಸಮಾಜದಲ್ಲಿ ಅಶಾಂತಿ ಮೂಡುತ್ತಿತ್ತು. ಸಮಾಜದಲ್ಲಿ ಶಾಂತಿ ಸೌಹಾರ್ದತೆ ಕಾಣಸಿಗುವುದಾದರೆ ಅದು ಮಠಾಧೀಶರ ಕೊಡುಗೆ. ಮನುಷ್ಯ ಮಾನವನಾಗಿ ಮಹಾದೇವನಾಗಬೇಕಾದರೆ ಪ್ರತಿಯೊಬ್ಬ ವ್ಯಕ್ತಿಗೂ ಗುರು ಮಾರ್ಗದರ್ಶನದಲ್ಲಿ ನಡೆಯುವ ಅವಶ್ಯಕತೆ ಇದೆ.ನಮಗೂ ನಿಮಗೂ ಎಲ್ಲರಿಗೂ ಗುರು ಇದ್ದಾಗ ಮಾತ್ರ ಜೀವನ ಪಾವನವಾಗುವುದರಲ್ಲಿ ಸಂದೇಹವಿಲ್ಲ ಎಂದು ಹೇಳಿದರು.

ಮಂಗಲಸಿಂಗ ಬೆಂಕಿತಾತನವರು ಮಾತನಾಡಿ,ಪಾಶ್ಚಾತ್ಯ ಸಂಸ್ಕøತಿಯ ಅಂಧಾನುರಣದಿಂದ ಬೆಳಕಿನಡೆಗಿನ ನಮ್ಮ ಪಯಣ ಕುಂಟುತ್ತ ಸಾಗುತ್ತಿರುವುದು ದುರಂತದ ವಿಚಾರ. ಅಜ್ಞಾನವೆಂಬ ಕತ್ತಲು ಕಳೆದು ಜ್ಞಾನ ಎಂಬ ಬೆಳಕು ಜೀವನದಲ್ಲಿ ಪ್ರಸರಿಸಬೇಕೆಂದಲ್ಲಿ ಗುರುವಿನ ಮಾರ್ಗದರ್ಶನ ಅತ್ಯಗತ್ಯ. ಹುಟ್ಟಿದಾಗಿನಿಂದ ಸಾಯುವವರೆಗೂ ಮನುಷ್ಯನ ಕಲಿಕೆ ನಿರಂತರ.ತಾಯಿ ಬೆರಳನ್ನು ಹಿಡಿದು ಮುದ್ದಿಸಿ, ಪಾಲನೆ ಮಾಡಿ ಬೆಳೆಸಿದರೇ, ಗುರು ಜೀವನದಲ್ಲಿ ಸನ್ಮಾರ್ಗವನ್ನು ದಯಪಾಲಿಸುತ್ತಾನೆ.ಅದಕ್ಕಾಗಿ ಭಾರತೀಯ ಪರಂಪರೆಯಲ್ಲಿ ಗುರುವಿಗೆ ಮಹತ್ವದ ಸ್ಥಾನವಿದೆ.ಪ್ರತಿಯೊಬ್ಬರ ಜೀವನದಲ್ಲಿ ಮುಂದೊಂದು ಗುರಿ ಹಿಂದೆ ಒಬ್ಬ ಗುರು ಇದ್ದಾಗ ಸಾಧನೆಯ ಹಾದಿ ಕಂಡಿತ ಸುಗಮವಾಗುವುದು ಎಂದು ಹೇಳಿದರು.

ಶಿವರುದ್ರಯ್ಯಸ್ವಾಮಿ, ಮಲ್ಲಣ್ಣಗೌಡ ಮಾಲಿಪಾಟೀಲ,ನಾಗಣ್ಣ ಸಾಹು ಮ್ಯಾಳಗಿ, ಚಂದ್ರಶ್ಯಾ ಕರಗಾರ,ಅಯ್ಯಣ್ಣ ಕರಗಾರ, ಸಾಹೇಬಗೌಡ, ಮಲ್ಲು ಸಾಹುಕಾರ ಮ್ಯಾಳಗಿ, ನಾಗಣ್ಣ ಕರಗಾರ, ಸುಭಾಷ ಸಗರ,ಶರಣಪ್ಪ ಹುರೇಕುರುಬ, ಶಿವಪ್ಪ ಗೌನಳ್ಳಿ, ಪ್ರಭು, ಶಿವು ಉಪ್ಪಾರ, ಸಂಗಣ್ಣ ವಾಲೀಕಾರ, ಶರಣಪ್ಪ ದೊಡ್ಡಮನಿ, ಶರಣಪ್ಪ ಭಂಡಾರಿ, ಶರಣಪ್ಪ ದೊಡ್ಮನಿ, ಸುಭಾಷ ಕಟ್ಟಿಮನಿ, ಮಲ್ಲಿಕಾರ್ಜುನ ದೊಡ್ಮನಿ, ಕಾಸಿಂ ಪಟೇಲ್, ಶರಣಪ್ಪಗೌಡ

ಮರತ, ಬಸವಣ್ಣ ವಕೀಲ ಜೇವರ್ಗಿ, ಭೀಮು ಪೂಜಾರಿ ಮದ್ರಿ, ಅರವಿಂದ ಬೇಕರಿ, ದೇವಿಂದ್ರ ಅರಣಕಲ್ ಬಾಗೋಡಿ, ಗೋಪಾಲಸಿಂಗ ಶಹಾಪೂರ, ಶಂಭುಲಿಂಗ ನೈಕಲ್, ಚನ್ನು ಬಡಿಗೇರ, ರವಿ ಕೊಳಕೂರ, ಮಹೇಶ ಇತರರು ಇದ್ದರು.