ಮನುಷ್ಯನಿಗೆ ಬುದ್ದಿವಂತಿಕೆ ಒಳ್ಳೆತನ ಎರಡೂ ಬೇಕು : ದೇ.ಹಿಪ್ಪರಗಿಶ್ರೀ

ತಾಳಿಕೋಟೆ,ಏ.16: ಬುದ್ದಿಗಿಂತಲೂ ಶಕ್ತಿಯುತವಾಗಿ ಬೆಳೆಸುವದು ಒಳ್ಳೆತನವಾಗಿದ್ದು ಅನ್ಯರ ಸಂಪರ್ಕದಲ್ಲಿಯೂ ಬುದ್ದಿವಂತಿಕೆಗಿಂತಲೂ ಹೆಚ್ಚು ಸಹಕಾರಿಯಾಗಿರುವದು ಒಳ್ಳೆಯತನವೇ ಆಗಿದೆ ಎಂದು ದೇವರಹಿಪ್ಪಗಿಯ ಜಡಿಮಠದ ಶ್ರೀ ಜಡಿಸಿದ್ದೇಶ್ವರ ಮಹಾಸ್ವಾಮಿಗಳು ನುಡಿದರು.
ಸೋಮವಾರರಂದು ಹಿರಿಯ ಪತ್ರಕರ್ತರಾದ ಜಿ.ಟಿ.ಘೋರ್ಪಡೆ ಅವರ ನಿವಾಸಕ್ಕೆ ಆಗಮಿಸಿ ದ್ವಿತೀಯ ಪಿಯುಸಿಯಲ್ಲಿ ಹೆಚ್ಚಿನ ಅಂಕ ಪಡೆದ ಅವರ ಮೊಮ್ಮಗಳಾದ ಕುಮಾರಿ ಭವಾನಿ ಘೋರ್ಪಡೆ ಇವಳಿಗೆ ಶಾಲುಹೊದಿಸಿ ಸನ್ಮಾನಿಸಿ ಆಶೀರ್ವದಿಸಿ ಆಶೀರ್ವಚನವಿತ್ತ ಶ್ರೀಗಳು ಒಳ್ಳೆಯತನವೆಂಬುದು ಹೆಚ್ಚು ಫಲಕಾರಿಯಾಗಿರುವುದೇ ಒಳ್ಳೆಯವರ ಹತ್ತಿರವೇ ಆಗಿರುವುದು ಕೆಟ್ಟವ್ಯಕ್ತಿಗಳ ಹತ್ತಿರ ಒಳ್ಳೆಯತನಕ್ಕಿಂತ ಬುದ್ದಿವಂತಿಕೆಯೇ ಎಚ್ಚು ಫಲಕಾರಿಯಾಗುವದೆಂದು ಹೇಳಿದ ಶ್ರೀಗಳು ಬುದ್ದಿಗಿಂತಲೂ ಶಕ್ತಿಯುತವಾದ ಒಳ್ಳೆಯತನವಾದರೂ ಒಳ್ಳೆಯತನವೆಂಬುದು ಎಲ್ಲೆಡೆಯು ಶಕ್ತಿಯುತವಾಗಿ ಕೆಲಸ ಮಾಡಲಾರದು ಅದು ಒಳ್ಳೆಯವರ ಹತ್ತಿರವೇ ಮಾತ್ರ ತನ್ನ ಕಾರ್ಯ ನಡೆಸುತ್ತದೆ ಎಂದ ಶ್ರೀಗಳು ಒಳ್ಳೆಯತನ ಹೆಚ್ಚಾಗಿದ್ದರೆ ದೇವರ ಕೃಪೆಯೆಂಬುದು ಹೆಚ್ಚಾಗಿರುತ್ತದೆ ಕಾರಣ ಬುದ್ದಿವಂತೆಕೆ ಶ್ರೇಷ್ಠವೋ ಒಳ್ಳೆಯತನ ಶ್ರೇಷ್ಠವೋ ಎಂಬವುಗಳ ಕುರಿತು ಇವೆರೆಡರ ಭಗ್ಗೆ ಅರಿತುಕೊಂಡಿರುವ ಕುಮಾರಿ ಭವಾನಿ ಘೋರ್ಪಡೆ ಇವಳು ಚಿಕ್ಕವಯಸ್ಸಿನಿಂದಲೇ ಓದಿನ ಬಗ್ಗೆ ಆಸಕ್ತಿ ಹೊಂದಿದ್ದರಿಂದ ಶೇ. 97 ರಷ್ಠು ಅಂಕ ಪಡೆಯಲು ಕಾರಣವಾಗಿದೆ ಎಂದ ಶ್ರೀಗಳು ಹಿರಿಯ ಪತ್ರಕರ್ತ ಘೋರ್ಪಡೆ ಅವರ ಮನೆತನದ ಭಗ್ಗೆ ಚೆನ್ನಾಗಿ ಅರಿಯಬಲ್ಲೆ ಹಿರಿಯ ಪತ್ರಕರ್ತ ಜಿ.ಟಿ ಘೋರ್ಪಡೆ ಅವರು ತಮ್ಮ ಸೇವೆಯಲ್ಲಿ ತೋರುತ್ತಿರುವ ನಿಷ್ಠಾವಂತಿಕೆ, ಪ್ರಾಮಾಣಿಕತನದಂತೆ ಮೊಮ್ಮಗಳಲ್ಲಿಯೂ ಬೆಳೆಯತೊಡಗಿದೆ ಎಂದು ಹರ್ಷವ್ಯಕ್ತಪಡಿಸಿದ ಶ್ರೀಗಳು ವೈದ್ಯಕೀಯ ಸೇವೆಯಲ್ಲಿ ಈಡೇರಿಸಿಕೊಳ್ಳುವ ಆಕೆಯ ಅಪೇಕ್ಷೆ ಪೂರ್ಣಗೊಳ್ಳಲಿ ಎಂದು ಶುಭಕೋರಿದರು.
ಈ ಸಮಯದಲ್ಲಿ ಹಿರಿಯ ಪತ್ರಕರ್ತ ಜಿ.ಟಿ. ಘೋರ್ಪಡೆ ಅವರು ಶ್ರೀಗಳಿಗೆ ಕುಟುಂಬದ ವತಿಯಿಂದ ಶಾಲುಹೊದಿಸಿ ಸನ್ಮಾನಿಸಿ ಆಶೀರ್ವಾದ ಪಡೆದರು.