ಮನುಷ್ಯನಿಗೆ ಆರೋಗ್ಯವೇ ಭಾಗ್ಯ

ಕೋಲಾರ,ಜ.೨- ಜಿಲ್ಲೆಯಲ್ಲಿನ ರೋಗಿಗಳಿಗೆ ಸಹಕಾರಿಯಾಗಿ ಬಡವರ ಪಾಲಿಗೆ ಸೇವೆ ಮಾಡುವ ನಿಟ್ಟಿನಲ್ಲಿ ನಗರದ ಶ್ರೀನಿವಾಸ ಸ್ಕ್ಯಾನ್ ಸೆಂಟರ್ ಕೆಲಸ ಮಾಡಲಿ ಎಂದು ಬಂಗಾರಪೇಟೆ ಶಾಸಕ ಎಸ್.ಎನ್ ನಾರಾಯಣಸ್ವಾಮಿ ಹಾರೈಸಿದರು.
ನಗರದ ಶ್ರೀನಿವಾಸ ಸ್ಕ್ಯಾನ್ ಮತ್ತು ಡಯಾಬಿಟಿಸ್ ಕೇಂದ್ರದಲ್ಲಿ ಶನಿವಾರ ಆಸ್ಪತ್ರೆಯ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡಿದ ಅವರು ಮನುಷ್ಯನಿಗೆ ಆರೋಗ್ಯವೇ ಭಾಗ್ಯ ಎಂಬುದು ಬಹುಮುಖ್ಯವಾಗಿದ್ದು ಬಡವರ ಕೈಗೆಟುಕುವ ಬೆಲೆಯಲ್ಲಿ ಚಿಕಿತ್ಸೆ ನೀಡಲು ಸಾಧ್ಯವಾಗಿ ರೋಗ ಮುಕ್ತ ಜಿಲ್ಲೆಯಾಗುವಂತಾಗಲಿ ಎಂದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಎಂ.ಎಲ್ ಅನಿಲ್ ಕುಮಾರ್ ಮಾತನಾಡಿ ಮನುಷ್ಯನ ಅಗತ್ಯ ಸೇವೆಗಳಲ್ಲಿ ಆರೋಗ್ಯವು ಒಂದಾಗಿದೆ ಕೊರೊನಾ ಸಂದರ್ಭದಲ್ಲಿ ಆರೋಗ್ಯದ ಪರಿಸ್ಥಿತಿಯ ಬಗ್ಗೆ ಏನು ಎಲ್ಲಾ ಸಮಸ್ಯೆಗಳಾಗಿವೆ ಎಂಬುದು ನಮಗೆಲ್ಲ ತಿಳಿದಿದೆ ಕೊರೊನಾ ಅಂತಹ ರೋಗಗಳು ದೇಶದಿಂದಲ್ಲೇ ದೂರವಾಗಿ ನೆಮ್ಮದಿಯ ಬದುಕು ಹೊಸ ವರ್ಷದಲ್ಲಿ ಸಿಗಲಿ ಎಂದರು
ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿಚ್ಚಹಳ್ಳಿ ಗೋವಿಂದರಾಜು, ಕೆಪಿಸಿಸಿ ಕಾರ್ಯದರ್ಶಿ ಬೆಳಗಾನಹಳ್ಳಿ ಮುನಿವೆಂಕಟಪ್ಪ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸೀಸಂದ್ರ ಗೋಪಾಲಗೌಡ, ಯುವ ಕಾಂಗ್ರೆಸ್ ಮುಖಂಡ ರಾಜು ಶ್ರೀನಿವಾಸಪ್ಪ, ಆಸ್ಪತ್ರೆಯ ವೈದ್ಯ ಡಾ ರಾಕೇಶ್, ಹೊನ್ನೇನಹಳ್ಳಿ ಗ್ರಾಪಂ ಅಧ್ಯಕ್ಷ ವೆಂಕಟೇಶಪ್ಪ, ವಕ್ಕಲೇರಿ ಗ್ರಾಪಂ ಅಧ್ಯಕ್ಷ ಮುರಳಿ, ವಡಗೂರು ಗ್ರಾಪಂ ಅಧ್ಯಕ್ಷ ವಿಶ್ವನಾಥ್ ಮುಖಂಡರಾದ ಸಿ.ಎಂ ನಾರಾಯಣಸ್ವಾಮಿ, ಯಾರಂಘಟ್ಟ ಮುನಿರಾಜು, ನಡುಪಳ್ಳಿ ಸಂತೋಷ್, ಗಿರಿಜಮ್ಮ, ರಾಮಕೃಷ್ಣೇಗೌಡ ಮುಂತಾದವರು ಇದ್ದರು.