ಮನುಷ್ಯನನ್ನ ನವಚೇತನ ದತ್ತ ಕೊಂಡೊಯ್ಯುವ ಶಕ್ತಿ ಯೋಗಕ್ಕಿದೆ.

ಬಳ್ಳಾರಿ, ಜ.03: ಕೆ‌ಎಸ್.ಹೆಲ್ಪಿಂಗ್ ಹ್ಯಾಂಡ್ಸ್ ಮತ್ತು ಜಿಲ್ಲಾ ಪತಂಜಲಿ ಯೋಗ ಸಮಿತಿ ಇವರ ಸಂಯುಕ್ತ ಆಶ್ರಯದಲ್ಲಿ ಇಂದು ಮುಂಜಾವಿನಲ್ಲಿ ನಗರದಲ್ಲಿರುವ
ವಾರ್ಡ್ ನಂಬರ್ 18 ಗಣೇಶ್ ಕಾಲೋನಿ ಪಾರ್ಕ್ ನಲ್ಲಿ ನೂತನ” ಗಣೇಶ ಯೋಗ ಕೇಂದ್ರ” ಉದ್ಘಾಟನೆಯನ್ನು ಜಿಲ್ಲಾ ಪತಂಜಲಿ ಸಂಯೋಜಕ ಇಸ್ವಿ ಪಂಪಾಪತಿ ಅವರು ಉದ್ಘಾಟನೆ ಮಾಡಿದರು.
ನಂತರ ಮಾತನಾಡಿದ ಅವರು ಜಾತಿ ಭೇದಭಾವವಿಲ್ಲದೆ ನಾವೆಲ್ಲರೂ ಒಂದೇ ಎನ್ನುವ ಭಾವೈಕ್ಯತೆ ಪ್ರತಿಯೊಬ್ಬರ ಮನದಲ್ಲಿ ನೆಲೆಯೂರುವಂತೆ ಮಾಡುವುದು ಮತ್ತು ದಿನವೆಲ್ಲಾ ಚೈತನ್ಯದತ್ತ ಕೊಂಡೊಯ್ಯುವ ಮಾಂತ್ರಿಕ ಶಕ್ತಿ ಯೋಗಕ್ಕಿದೆ. ಯೋಗದ ಗುರಿ ಆರೋಗ್ಯದ ಸರ್ವಾಂಗೀಣ ಅಭಿವೃದ್ಧಿ ಮೂಲಕ ಮೋಕ್ಷ ಸಾಧಿಸುವ ಉದ್ದೇಶವಾಗಿದೆ ಎಂದು ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿರುವ ಸನ್ಮಾನ್ಯ ಶ್ರೀ ಕೆ.ಎಸ್ ಅಶೋಕ್ ಕುಮಾರ್ ರವರು ಯೋಗ ಧ್ಯಾನ ಪ್ರಾಣಾಯಾಮ ಗಳೊಂದಿಗೆ ಪ್ರಾರಂಭಿಸಿ,
ಈ ಒಂದು ಯೋಗ ಧ್ಯಾನಕ್ಕೆ ನಮ್ಮ ಸಂಸ್ಥೆ ಕೆ.ಎಸ್.ಹೆಲ್ಪಿಂಗ್ ಹ್ಯಾಂಡ್ಸ್ ನಿಂದ ಹೆಚ್ಚಿನ ಸಹಕಾರ ನೀಡಿ ಈ ಭಾಗದ ನಾಗರೀಕರಿಗೆ ಉಚಿತ ಯೋಗವಿಜ್ಞಾನ ಶಿಬಿರವನ್ನು ಪ್ರತಿಯೊಬ್ಬರು ಸದುಪಯೋಗ ಪಡೆದುಕೊಳ್ಳಬೇಕು. ಆರೋಗ್ಯವಂತರಾಗಿ ನೆಮ್ಮದಿಯಾಗಿ ಜೀವನ ನಡೆಸಬೇಕು ಎಂದು
ಹಾಗೆಯೇ
ಸಾರ್ವಜನಿಕರಿಗೆ ಉಪಯೋಗವಾಗುವ ನಿಟ್ಟಿನಲ್ಲಿ ನಮ್ಮ ಶಕ್ತಿ ಮೀರಿ ಸಮಾಜಕ್ಕೆ ಸೇವೆ ಸಲ್ಲಿಸುತ್ತೇವೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಕಾರ್ಯಕ್ರಮದ ಸಾನಿಧ್ಯವಹಿಸಿದ್ದ ಕಮ್ಮರಚೇಡು ಮಠದ ಕಲ್ಯಾಣ ಸ್ವಾಮೀಜಿ ಅವರು ಆಶೀರ್ವಚನ ನೀಡಿ
ಇಂದಿನ ದಿನಮಾನಗಳಲ್ಲಿ ಕೊರೋನಾ ಅಂತಹ ಮತ್ತು ಇನ್ನು ಮುಂತಾದ ಮಹಾಮಾರಿ ಗಳನ್ನು ತಡೆಯಲು ಯೋಗವೇ ಪರಿಹಾರ, ಜೊತೆಗೆ ಬಾಬಾರಾಮದೇವ್ ಗುರೂಜಿಯವರ ಸಂಕಲ್ಪದೊಂದಿಗೆ ನೂತನವಾಗಿ ಬಳ್ಳಾರಿ ನಗರದಲ್ಲಿ 50 ಯೋಗ ಕೇಂದ್ರಗಳನ್ನು ಆರಂಭಿಸಬೇಕು ಎನ್ನುವ ಗುರಿ ಹೊಂದಿದ್ದು
ಇಂದು ಮೊಟ್ಟಮೊದಲ ಯೋಗ ಕೇಂದ್ರವನ್ನು ಪ್ರಾರಂಭಿಸಲಾಗಿದೆ.
“ಗಣೇಶ ಯೋಗ ಕೇಂದ್ರ”
ಐವತ್ತೊಂದನೇ ಕೇಂದ್ರವಾಗಿ ನಮ್ಮ ಕಲ್ಯಾಣ ಮಂಟಪದಲ್ಲಿ
ಪ್ರಾರಂಭಿಸಬೇಕು ಕಲ್ಯಾಣ ಸ್ವಾಮೀಜಿಗಳು ಕರೆ ನೀಡಿದರು. ಕಾರ್ಯಕ್ರಮದಲ್ಲಿ ವಿವಿಧ ಯೋಗ ಕೇಂದ್ರಗಳಿಂದ ಬಂದಿರುವ ಪ್ರಭಾರಿಗಳಾದ ಅಂಕಲೆಸ್, ವೀರೇಶ್, ಲಕ್ಷ್ಮಿರೆಡ್ಡಿ, ಪ್ರಕಾಶ್, ಕಮಾರತ್ತಿ, ಕೃಷ್ಣಮೂರ್ತಿ,ಪುಲ್ಲಯ್ಯ,ಪ್ರಕಾಶ್, ರಾಜೇಂದ್ರ ರೆಡ್ಡಿ, ಚಂದ್ರಗೌಡ, ಪಂಪನಗೌಡ, ವಿರುಪಾಕ್ಷಪ್ಪ, ವೆಂಕಟೇಶ್ ರಾಜಶೇಖರ್ ಮತ್ತು ಯೋಗ ಶಿಕ್ಷಕರು ಯೋಗ ಸಾಧಕರು ಸಾಧಕಿಯರು ಮತ್ತು ನೂತನವಾಗಿ ನೂರಾರು ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು.