ಮನುಜ ಕುಲದ ಚಿತ್ಸೂರ್ಯ ಶ್ರೀ ಜಗದ್ಗುರು ರೇಣುಕಾಚಾರ್ಯರು 

ಅಜ್ಜಂಪುರ.ಏ. ೧೪; ಶಿವನಿಂದ ಬೋಧಿಸಲ್ಪಟ್ಟ ಶಿವಾಗಮಗಳ ಸಾರವನ್ನು ಸಿದ್ಧಾಂತ ಶಿಖಾಮಣಿಯಲ್ಲಿ ಕಾಣಬಹುದು. ಶ್ರೀ ಜಗದ್ಗುರು ರೇಣುಕಾಚಾರ್ಯರು ಶಿವಾದ್ವೆöÊತ ಸಿದ್ಧಾಂತದ ಚಿತ್ಸೂರ್ಯರೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರುಅವರು ಗುರುವಾರ ತಾಲೂಕಿನ ಶಿವನಿ ಗ್ರಾಮದ ಬಯಲು ರಂಗಮAದಿರದಲ್ಲಿ ಜರುಗಿದ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.ಅತ್ಯಂತ ಪ್ರಾಚೀನ ಇತಿಹಾಸ ಮತ್ತು ಪರಂಪರೆ ಹೊಂದಿದ ವೀರಶೈವ ಧರ್ಮ ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸುತ್ತಾ ಬಂದಿದೆ. ಅಂಗ ಲಿಂಗವಾಗುವ ಮತ್ತು ಜೀವಾತ್ಮ ಪರಮಾತ್ಮನಾಗುವ ಸಾಧನ ಮಾರ್ಗವನ್ನು ಅರ್ಥಪೂರ್ಣವಾಗಿ ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ್ದನ್ನು ಮರೆಯಲಾಗದು. ಸತ್ಯ ಸೈದ್ಧಾಂತಿಕದ ಮೇಲೆ ಆರೋಗ್ಯ ಪೂರ್ಣ ಸಮಾಜ ನಿರ್ಮಾಣಕ್ಕೆ ದಾರಿ ತೋರಿದ ಯುಗ ಪುರುಷರು ಶ್ರೀ ಜಗದ್ಗುರು ರೇಣುಕಾಚಾರ್ಯರು. ಕಣ್ಣು ಜಗತ್ತನ್ನೆಲ್ಲ ಕಂಡರೂ ತನ್ನ ಮುಖ ತನಗೆ ಕಾಣದು. ಮುಖ ನೋಡಲು ಮುಕುರ ಬೇಕಾಗುವಂತೆ ಅಜ್ಞಾನ ಕಳೆಯಲು ಜ್ಞಾನದ ಬೆಳಕು ತೋರಲು ಗುರುವಿನ ಮಾರ್ಗದರ್ಶನ ಅವಶ್ಯಕ. ತಿಳುವಳಿಕೆಗಿಂತ ನಡವಳಿಕೆ ಬಹು ಮುಖ್ಯವೆಂದು ಸಾರಿದ ಅವರು ಮನುಷ್ಯ ಎಷ್ಟೇ ಸಿರಿವಂತನಾದರೂ ಗುಣಕ್ಕೆ ಬೆಲೆ ಜಾಸ್ತಿ. ನೋವುಗಳ ನಡುವೆ ನೆಮ್ಮದಿ ಪಡೆಯುವುದೇ ನಿಜವಾದ ಜೀವನ. ಜಾತಿ ಮತ ಪಂಥಗಳ ಗಡಿ ಮೀರಿ ಸಾಮರಸ್ಯ ಬದುಕಿಗೆ ಧರ್ಮದ ದಶವಿಧ ಸೂತ್ರಗಳನ್ನು ಬೋಧಿಸಿ ಉದ್ಧರಿಸಿ ಶಿವತಪ, ಶಿವಕರ್ಮ, ಶಿವಜಪ, ಶಿವಧ್ಯಾನ ಮತ್ತು ಶಿವಜ್ಞಾನದ ಮೂಲಕ ಬದುಕನ್ನು ಶ್ರೀಮಂತಗೊಳಿಸಿದ ಕೀರ್ತಿ ಶ್ರೀ ಜಗದ್ಗುರು ರೇಣುಕಾಚಾರ್ಯರಿಗೆ ಸಲ್ಲುತ್ತದೆ ಎಂದರು.ಹುಲಿಕೆರೆ ವಿರೂಪಾಕ್ಷ ಶಿವಾಚಾರ್ಯರು, ತರೀಕೆರೆ ಜಗದೀಶ ಶಿವಾಚಾರ್ಯರು, ಹುಣಸಘಟ್ಟ ಗುರುಮೂರ್ತಿ ಶಿವಾಚಾರ್ಯರು, ಬಿಳಕಿ ರಾಚೋಟೇಶ್ವರ ಶಿವಾಚಾರ್ಯರು, ಚಿಕ್ಕಮಗಳೂರು ಚಂದ್ರಶೇಖರ ಶಿವಾಚಾರ್ಯರು, ಕೆ.ಬಿದರೆ ಪ್ರಭುಕುಮಾರ ಶಿವಾಚಾರ್ಯರು, ತೆಂಡೇಕೆರೆ ಗಂಗಾಧರ ಶಿವಾಚಾರ್ಯರು, ನಂದೀಪುರ ನಂದೀಶ್ವರ ಶಿವಾಚಾರ್ಯರು, ಬೀರೂರು ರುದ್ರಮುನಿ ಶಿವಾಚಾರ್ಯರು, ಹಣ್ಣೆ ಮರುಳಸಿದ್ಧ ಶಿವಾಚಾರ್ಯರು, ತಾವರೆಕೆರೆ ಅಭಿನವ ಸಿದ್ಧಲಿಂಗ ಶಿವಾಚಾರ್ಯರು ಪಾಲ್ಗೊಂಡು ನುಡಿ ನಮನ ಸಲ್ಲಿಸಿದರು. ಎಸ್.ವಿ.ಗಂಗಾಧರಯ್ಯನವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿ.ಪಿ.ಶಿವಮೂರ್ತಿ ವಿಶೇಷ ಉಪನ್ಯಾಸವನ್ನಿತ್ತರು. ಅಧ್ಯಕ್ಷತೆ ವಹಿಸಿದ ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಮಲತ್ರಯಗಳನ್ನು ದೂರಮಾಡಿ ಶಿವಜ್ಞಾನ ಉಂಟು ಮಾಡುವ ಶ್ರೀ ಗುರುವಿನ ಮಹಿಮೆ ಅಪಾರ. ಯುಗಪುರುಷರಾದ ಶ್ರೀ ಜಗದ್ಗುರು ರೇಣುಕಾಚಾರ್ಯರು ಮೌಲ್ಯಾಧಾರಿತ ಬದುಕಿಗೆ ದಶವಿಧ ಸೂತ್ರಗಳನ್ನು ಬೋಧಿಸಿದ್ದಾರೆ ಎಂದರು. ಚಿಕ್ಕಮಗಳೂರು ಅ.ಭಾ.ವೀ.ಮಹಾಸಭಾ ಜಿಲ್ಲಾಧ್ಯಕ್ಷ ಹೆಚ್.ಎಂ.ಲೋಕೇಶ, ಜಿ.ವಿ.ಯೋಗೀಶ್, ಸಿ.ಎಸ್.ಪ್ರಭುಲಿಂಗಶಾಸ್ತೊç. ಎ.ಎಸ್.ಆರಾಧ್ಯ, ಸಿ.ರಾಮಚಂದ್ರಪ್ಪ, ಎಸ್.ಎಸ್.ಶ್ರೀಕಂಠಪ್ಪ, ಕೆ.ಹೆಚ್.ರಾಜಣ್ಣ, ಎಸ್.ಪಿ.ಮಂಜುನಾಥ ಹಾಗೂ ವಿ.ಕೆ.ಕುಮಾರಸ್ವಾಮಿ ಸೇರಿದಂತೆ ಹಲವಾರು ಗಣ್ಯರಿಗೆ ಮತ್ತು ದಾನಿಗಳಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆಯಿತ್ತು ಹರಸಿದರು.