ಮನುಕುಲದ ಬೆಳವಣಿಗೆಯಲ್ಲಿ ಪುಸ್ತಕಗಳ ಪಾತ್ರ ಅನನ್ಯ

ಸಂಜೆವಾಣಿ ವಾರ್ತೆ,
ವಿಜಯಪುರ,ಏ.24: ಮಾನವನ ನೈತಿಕ ಮೌಲ್ಯಗಳನ್ನು ಪೆÇೀಷಿಸಿ, ಮನುಕುಲದ ಬೆಳವಣಿಗೆಯಲ್ಲಿ ಪುಸ್ತಕಗಳ ಪಾತ್ರ ಅನನ್ಯ. ಅವು ಮಾಹಿತಿ ಮತ್ತು ಜ್ಞಾನದ ಶ್ರೀಮಂತ ಮೂಲವಾಗಿದ್ದು, ಪ್ರತಿಯೊಬ್ಬರು ಪುಸ್ತಕಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳುವುದು ಉತ್ತಮ ಎಂದು ಶಿಕ್ಷಕ ಸಾಹಿತಿ ಸಂತೋಷ ಬಂಡೆ ಹೇಳಿದರು.
ನಗರದ ಷಣ್ಮುಖಾರೂಢ ಮಠದಲ್ಲಿ ಭಾರತ ಯುವ ವೇದಿಕೆ ಚಾರಿಟೇಬಲ್ ಫೌಂಡೇಶನ್, ಅಭಿನವಶ್ರೀ ಹಾಗೂ ಮುರುಘರಾಜೇಂದ್ರ ಕೋಚಿಂಗ್ ಕ್ಲಾಸ್‍ಗಳ ಸಹಯೋಗದಲ್ಲಿ ‘ವಿಶ್ವ ಪುಸ್ತಕ ದಿನ’ದ ನಿಮಿತ್ತ ಏರ್ಪಡಿಸಿದ್ದ ವಿದ್ಯಾರ್ಥಿಗಳಲ್ಲಿ ಓದುವ ಪ್ರವೃತ್ತಿ-ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪುಸ್ತಕಗಳು ತಲೆಮಾರುಗಳನ್ನು ಪರಿಚಯಿಸುವ ಜೊತೆಗೆ ಚರಿತ್ರೆಯನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಕೆಲಸ ಮಾಡುತ್ತವೆ. ಅವು ಹಿಂದಿನ ಮತ್ತು ಭವಿಷ್ಯದ ನಡುವಿನ ಕೊಂಡಿಯಾಗಿ, ತಲೆಮಾರುಗಳು ಮತ್ತು ಸಂಸ್ಕøತಿಗಳ ನಡುವಿನ ಸೇತುವಾಗಿವೆ ಎಂದು ಹೇಳಿದರು.
ಭಾರತ ಯುವ ವೇದಿಕೆ ಅಧ್ಯಕ್ಷ ಸುನೀಲ ಜೈನಾಪುರ ಮಾತನಾಡಿ, ಪುಸ್ತಕ ಓದುವುದರಿಂದ ಸಂವಹನ ಕೌಶಲ್ಯ ಸುಧಾರಿಸಿ, ಶಬ್ದ ಭಂಡಾರ ವೃದ್ಧಿಸಲು ಸಹಕಾರಿಯಾಗುತ್ತದೆ. ಜೊತೆಗೆ ನಿಮ್ಮನ್ನು ಉತ್ತಮ ಬರಹಗಾರರನ್ನಾಗಿ ಮಾಡುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಅಭಿನವಶ್ರೀ ಕೋಚಿಂಗ್ ಕ್ಲಾಸ್‍ನ ಮುಖ್ಯಸ್ಥ ಅಶೋಕ ಬಿರಾದಾರ ಮಾತನಾಡಿ, ಒಂದು ಒಳ್ಳೆಯ ಪುಸ್ತಕವು ನೂರು ಸ್ನೇಹಿತರ ಮೌಲ್ಯದ್ದಾಗಿದೆ. ಪುಸ್ತಕ ಓದುವ ಉದಾತ್ತ ಅಭ್ಯಾಸ ಎಲ್ಲರೂ ರೂಢಿಸಿಕೊಂಡು, ಸರಿಯಾದ ನೈತಿಕ ಮೌಲ್ಯಗಳನ್ನು ಪರಿಪಾಲಿಸಬೇಕು ಎಂದು ಹೇಳಿದರು.
ಇಂಗ್ಲೀμï ಶಿಕ್ಷಕ ಆನಂದ ಕಂಬಾರ ಪ್ರಾಸ್ತಾವಿಕವಾಗಿ ಮಾತನಾಡಿ, ‘ದೇಶ ಸುತ್ತಬೇಕು ಕೋಶ ಓದಬೇಕು’ ಎಂಬ ಮಾತಿನಂತೆ ಪುಸ್ತಕವು ನಮ್ಮ ಬದುಕನ್ನು ಬೆಳಗಿ, ಜ್ಞಾನದಾಹವನ್ನು ತಣಿಸುತ್ತದೆ. ಇಂದಿನ ಮಕ್ಕಳಲ್ಲಿ ಪುಸ್ತಕ ಓದುವ ಸಂಸ್ಕೃತಿ ಹೆಚ್ಚಾಗಬೇಕಿದೆ ಎಂದರು.
ಸಿದ್ದೇಶ್ವರ ದೇವಸ್ಥಾನದ ಅರ್ಚಕ ಶಿವಾನಂದ ಹಿರೇಮಠ ಸಾನ್ನಿಧ್ಯ ವಹಿಸಿದ್ದರು. ಆಧ್ಯಾತ್ಮಿಕ ಚಿಂತಕ ಗಿರೀಶ ಕುಲಕರ್ಣಿ ಮಾತನಾಡಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಓದುವ ಪ್ರವೃತ್ತಿ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಸಂವಾದದಲ್ಲಿ ಭಾಗವಹಿಸಿ, ತಮ್ಮ ಸಂದೇಹಗಳಿಗೆ ಪರಿಹಾರ ಕಂಡುಕೊಂಡರು. ಶಿಕ್ಷಕರಾದ ಎಸ್.ಬಿ. ಗುಲಗಂಜಿ, ರಾಜು ಕೆಂಗಲಗುತ್ತಿ, ಅಲ್ಲಾಭಕ್ಷ ಇನಾಮದಾರ, ಗೌಡಪ್ಪ ಬಿರಾದಾರ, ರೂಪಾ ಬಿರಾದಾರ, ಲಕ್ಷ್ಮೀ ಬಿರಾದಾರ, ರೇಣುಕಾ ಕೊಡೆಕಲ್ಲ ಸೇರಿದಂತೆ ಮಕ್ಕಳು ಉಪಸ್ಥಿತರಿದ್ದರು.