ಮನುಕುಲದ ಕಲ್ಯಾಣವೇ ಮೂಲಗುರಿ

ಕಲಬುರಗಿ:ಮಾ.22: ಸಕಲರ ಬಾಳಿಗೆ ಬೆಳಕನ್ನು ಕೊಡುವ ಮನುಕುಲ ಕಲ್ಯಾಣವೇ ಶ್ರೀ ಜಗದ್ಗುರು ರೇಣುಕಚಾರ್ಯರ ಮೂಲಗುರಿಯಾಗಿದೆ ಎಂದು ವಿ.ಕೆ.ಸಲಗರದ ದ್ವಿತಿಯ ಸಾಂಬಶಿವಾಚಾರ್ಯರರು ನುಡಿದರು
ಅವರು ಜೆ. ಆರ್. ನಗರದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಪ್ರಂಗಾಣದಲ್ಲಿ ಶ್ರೀ ಸಾಂಬಶಿವಾಚಾರ್ಯರರ ಪುರಾಣ ಕಾರ್ಯಕ್ರಮದಲ್ಲಿ ಶ್ರೀ ಜಗದ್ಗುರು ರೇಣುಕಚಾರ್ಯರರ ಜಯಂತಿ ಮಹೋತ್ಸವದಲ್ಲಿ ಸಾನಿದ್ಯವಹಿಸಿ ಆರ್ಶಿವಚನದಲ್ಲಿ ಅರ್ಚನೆಗಿಂತ ಅರ್ಪಣೆ, ವ್ಯಕ್ತಿ ನಿಷ್ಠೆಗಿಂತ ತತ್ವನಿಷ್ಠೆ, ಚರಿತ್ರೆಗಿಂತ ಚಾರಿತ್ರ್ಯಕ್ಕೆ, ಧಾನಕಿಂತ ದಾಸೋಹಕ್ಕೆ ವಿಶೇಷ ಮಹತ್ವ ಕೊಟ್ಟಿದಾರೆ ಶ್ರೀ ಜಗದ್ಗುರು ರೇಣುಕಚಾರ್ಯರರು ಮಾನವಿ ಮೌಲ್ಯಗಳು ಉಳಿಸಿ ಬೆಳೆಸಿದ್ದಾರೆ ಎಂದು ನುಡಿದರು.
ಕಡಗಂಚಿಯ ವೀರಭದ್ರ ಶಿವಾಚಾರ್ಯರರು ಅಧ್ಯಕ್ಷೆ ವಹಿಸಿದರು ಮಾತೋಶ್ರೀ ಶ್ರೀ ಶರಣಮ್ಮ ತಾಯಿ ಕುರನಳ್ಳಿ ಉತ್ತರ ಮತಕ್ಷೇತ್ರದ ಶಾಸಕಿಯರಾದ ಖನಿಜಾ ಫಾತೀಮಾ ಜಯಂತಿ ಮಹೋತ್ಸವದ ಧರ್ಮಸಭೆ ಉದ್ಘಾಟಿಸಿದರು ಸುಂಟನೂರಿನ ರೇಣಯ್ಯ ಶಾಸ್ತ್ರಿ ಆದಿಲ್ ಶೆಠ ಜೆ.ಡಿ.ಎಸ್. ಮುಖಂಡರಾದ ರಾಜಶೇಖರ ಪಾಟೀಲ ದೇವಸ್ಥಾನ ಕಮಿಟಿಯ ಅಧ್ಯಕ್ಷರಾದ ಬಸವರಾಜ ಬೇಣೆಸೂರ, ಶರಣಗೌಡ ಪಾಟೀಲ ನಿಂಬರ್ಗಾ, ಸಿದ್ದಲಿಂಗ ದುರ್ಗೆ, ವೀರಭದ್ರಪ್ಪ ವರದಾನಿ, ಬಂಡಪ್ಪ ಪಂಚಾಳ, ವೀರಸಂಗಪ್ಪ ಬುಳ್ಳಾ, ಬಸವರಾಜ ದುತ್ತರಗಿ, ಶರಣಪ್ಪ ಶಟ್ಟಗಾರ ಇದ್ದರು. ಪುರಾಣಿಕರಾದ ನಾಗಲಿಂಗಯ್ಯ ಸ್ವಾಮಿ, ಶರಣಕುಮಾರ ಯಾಳಗಿ ಹಾಗೂ ಸಿದ್ದಣ್ಣ ದೇಸಾಯಿ ಕಲ್ಲೂರ ಇವರಿಂದ ಸಂಗೀತ ಜರಗಿತು ಶಾಂತವೀರ ಪಾಟೀಲ ನಿರುಪಿಸಿದರು