ಮನುಕುಲದ ಉದ್ದಾರಕ್ಕಾಗಿ ಭಗೀರಥರ ಕೊಡುಗೆ ಅಪಾರ: ಜಿ.ರಡ್ಡಿ


ಸಂಜೆವಾಣಿ ವಾರ್ತೆ
ಗಂಗಾವತಿ, ಏ.27: ಮನುಕುಲದ ಉದ್ದಾರಕ್ಕಾಗಿ ತನ್ನ ಜೀವನವನ್ನು ಮುಡಿಪಾಗಿಟ್ಟ ಭಗೀರಥರಂಥ ಮಹಾತ್ಮರ ಆದರ್ಶ ಮತ್ತು ತತ್ವಗಳನ್ನು ಎಲ್ಲರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಜಯಂತಿ ಆಚರಿಸಿದ್ದ‌ಕ್ಕೆ ಸಾರ್ಥಕವಾಗುತ್ತದೆ ಎಂದು ಮಾಜಿ ಸಚಿವ ಜನಾರ್ಧನ ರಡ್ಡಿ ಹೇಳಿದರು.
ನಗರದಲ್ಲಿ ಉಪ್ಪಾರ ಸಮಾಜದಿಂದ ಹಮ್ಮಿಕೊಂಡಿದ್ದ ಶ್ರೀ ಭಗೀರಥ ಮಹರ್ಷಿ ಜಯಂತೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಭಗೀರಥ ಒಬ್ಬ ಶ್ರೇಷ್ಟ ಗುರುಭಕ್ತನಾಗಿ ಪುರಾಣಪುರುಷನಾಗಿ, ತನ್ನ ಸಾಹಸ, ಏಕಾಗ್ರ ಮನಸ್ಥಿತಿಗೆ ತಪೋನಿಷ್ಠೆಗೆ ಪ್ರಸಿದ್ಧನಾಗಿದ್ದನಿಂದ ಭಗೀರಥ ಪ್ರಯತ್ನ ಎಂಬ ನುಡಿ ಎಲ್ಲೆಡೆ ಪ್ರಸರಿಸಿತು. ಸತ್ಕಾರ್ಯಗಳಿಂದ ಜನರಿಗೆ ಒಳ್ಳೆಯದಾಗಬೇಕು. ಭೂಮಿಗೆ ಗಂಗೆಯನ್ನು ತರುವಲ್ಲಿ ಕಠೊರ ತಪಸ್ಸು ಮಾಡಿದ ಭಗೀರಥರು ಸವಾಲು ಮತ್ತು ಸಮಸ್ಯೆಗಳಿಗೆ ಎಂದಿಗೂ ಎದೆಗುಂದಲಿಲ್ಲ. ಸಮಾಜಕ್ಕೆ ಒಳಿತು ಮಾಡಲು ಪರಮಾತ್ಮನನ್ನು ಒಲಿಸಿಕೊಂಡರು ಎಂದರು.
ಈ ವೇಳೆ ಸಮಾಜದ ಮುಖಂಡರಾದ ನರಸಪ್ಪ ಅಮರಜ್ಯೋತಿ, ನಾಗರಾಜ ಇಂಗಳಗಿ, ಯಮನೂರಪ್ಪ ಹುಲಿಗಿ, ರಾಮಕೃಷ್ಣ, ರಾಜಪ್ಪ ಹುಲಿಗಿ, ಯಂಕಪ್ಪ ಕಟ್ಟಿಮನಿ, ಯಲ್ಲಪ್ಪ ಕಟ್ಟಿಮನಿ, ಸಣ್ಣ ನಿಂಗಪ್ಪ, ಪಂಪಣ್ಣ ಗೋವಿಂದಪ್ಪಹುಲಿಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.