ಮನುಕುಲಕ್ಕೆ ಮಾನವೀಯ ಮೌಲ್ಯದ ಮಾರ್ಗತೋರಿಸಿದ ಸಂತ ಸೇವಾಲಾಲರು: ತಹಶೀಲ್ದಾರ ಮಂಜುಳಾ ನಾಯಕ

ಇಂಡಿ:ಫೆ.16: ಭಾರತ ವೈವಿಧತೆಯಲ್ಲಿ ಏಕತೆಯನ್ನು ಹೊಂದಿದ ಶ್ರೇಷ್ಠ ದೇಶ. ಅನೇಕ ಜಾತಿ ಮತಗಳ ಜನರು ಶಾಂತಿ ಸೌರ್ಹಾದತೆಯಿಂದ ಜೀವಿಸುತ್ತಿರುವ ಪುಣ್ಯ ಭೂಮಿ ಇಲ್ಲಿ ಅನೇಕ ಸಂತ ಮಹಾಂತರು ಜನಿಸಿ ಮನುಷ್ಯನ ಬದುಕಿಗೆ ಆದರ್ಶಪ್ರಾಯರಾಗಿದ್ದಾರೆ ಇಂತಹವರ ಸಾಲಿನಲ್ಲಿ ಸಂತ ಸೇವಾಲಾಲ್ ಮಹಾರಾಜರು ಒಬ್ಬರು ಎಂದು ತಹಶೀಲ್ದಾರ ಮಂಜುಳಾ ನಾಯಕ ಹೇಳಿದರು.
ಪಟ್ಟಣದ ವಿಜಯಪೂರ ರಸ್ತೆಯಲ್ಲಿನ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಸಂತ್ ಸೇವಾಲಾಲ್ ಮಹಾರಾಜರ ವೃತ್ತಕ್ಕೆ ಪೂಜೆ ಸಲ್ಲಿಸಿ ನಂತರ ಮಾತನಾಡಿದ ಅವರು ಸಂತ್ ಸೇವಾಲಾಲ್ ಮಹಾರಾಜರು ಒಬ್ಬ ಅಧ್ಯಾತ್ಮಿಕ ಮಹಾತಪಸ್ವೀ ಹಾಗೂ ಬ್ರಹ್ಮಚಾರಿಗಳಾಗಿದ್ದರು. ಅನೇಕ ಜಾತಿ ಬುಡಕಟ್ಟು ಜನಾಂಗ ,ಗುಡ್ಡಗಾಡು ಜನಾಂಗದವರು ತಮ್ಮಶ್ರೇಷ್ಠ ಸಂಸ್ಕøತಿ ಪರಂಪರೆ ವಿಶಿಷ್ಠ ಭಾಷೆಯ ಮೂಲಕ ಈ ನೆಲವನ್ನು ಸರ್ವಜನಾಂಗವನ್ನು ಶಾಂತಿಯ ತೋಟವನ್ನಾಗಿಸಿದ್ದಾರೆ. ಮಹಾರಾಜರು ಸದಾ ತಪಸ್ಸು ,ಧ್ಯಾನ ಪೂಜೆ -ಪುನಸ್ಕಾರಗಳಲ್ಲಿ ತಮ್ಮ ಸಮಯ ಕಳೆಯುತ್ತಿದ್ದರು. ಮೋಢನಂಬಿಕೆ. ಕಂದಾಚಾರ ಅನಿಷ್ಠ ಸಂಪ್ರದಾಯ ಹೋಗಲಾಡಿಸಲು ಶ್ರಮಿಸಿದ್ದಾರೆ.ತಮ್ಮ ಜೀವನದ ಕೊನೆ ಉಸಿರು ಇರುವವರೆಗೂ ಬುಡಕಟ್ಟು ಜನಾಂಗಗಳ ಅಜ್ಞಾನ,ಅಂಧಕಾರ ಮೋಢನಂಬಿಕೆಗಳನ್ನು ಹೋಗಲಾಡಿಸಿ ದುಡಿಮೆ ಪ್ರಮಾಣಿಕತೆ ನ್ಯಾಯ,ನೀತಿ,ಧರ್ಮ ಬೋದಿಸಿದರು ಇಂತಹ ವಂಶಸ್ಥರ ಕುಡಿಗಳಾದ ಬಂಜಾರ ಸಮಾಜದ ಬಾಂಧವರು ಒಳ್ಳೇಯ ಬದುಕು ಸಾಗಿಸಿ ಆದರ್ಶ ಸಮಾಜ ಕಟ್ಟುವಲ್ಲಿ ಶ್ರಮಿಸಬೇಕು ಎಂದ ಅವರು . ಡಾ.ಬಿ.ಆರ್ ಅಂಬೇಡ್ಕರವರು ಹೇಳಿದಂತೆ ಶಿಕ್ಷಣ ಕಲಿಕಯಬೇಕು ಸುಕ್ಷಿತರಿಂದ ಉತ್ತಮ ಸಮಾಜ ನಿರ್ಮಿಸಲು ಸಾಧ್ಯ, ಮನುಷ್ಯನ ಸಾಧನೆಗೆ ಬಡತನ ಅಡ್ಡ ಬರುವುದಿಲ್ಲ ಛಲ ಇದ್ದರೆ ಎನ್ನೇಲ್ಲಾ ಮಾಡಲು ಸಾಧ್ಯ ಎಂಬುದು ಸಂವಿಧಾನ ಶಿಲ್ಪಿ ಅಂಬೇಡ್ಕರವರ ಆದರ್ಶ ಜೀವನವೆ ನಮಗೇಲ್ಲಾ ಮಾದರಿ ಇಂತಹ ದಾರ್ಶನಿಕರ ಮಾರ್ಗದಲ್ಲಿ ನಡೆದರೆ ಜೀವನ ಸಾರ್ಥಕ ಎಂದರು.

ಆಲ್ ಇಂಡಿಯಾ ಬಂಜಾರ ಸೇವಾ ಸಂಘ ಇಂಡಿ ,ಕಾಂಗ್ರೇಸ್ ಎಸ್ಸಿ ಸಂಘಟನಾ ಕಾರ್ಯದರ್ಶಿ ಸಂಜು ಚವ್ಹಾಣ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಗುತ್ತಿಗೆದಾರ. ಉದ್ದಿಮೇದಾರರಾದ ಭೀಮು ರಾಠೋಡ, ವಿಶ್ವನಾಥ ಚವ್ಹಾಣ, ಪುರಸಭೆ ಸದಸ್ಯ ಪಿಂಟು ರಾಠೋಡ, ವಿಜಯಕುಮಾರ ರಾಠೋಡ, ಮೋಹನ ರಾಠೋಡ, ಶಶಿ ರಾಠೋಡ, ಸಂಜು ಜಾಧವ, ತುಕಾರಾಮ ನಾಯಿಕ, ಧರ್ಮರಾಜ ರಾಠೋಡ,ರಮೇಶ ರಾಠೋಡ ಸೇರಿದಂತೆ ಅನೇಕ ಮುಖಂಡರು ಹಾಗೂ ತಾಲೂಕಾಢಳಿತ ಅಧಿಕಾರಿಗಳು ಸಂತ್ ಸೇವಾಲಾಲ್ ಜಯಂತಿ ಕಾರ್ಯಕ್ರಮದಲ್ಲಿದ್ದರು.

ಸಂತ್ ಸೇವಾಲಾಲ್ ಮಹಾರಾಜರು ಬಂಜಾರ ಸಮಾಜದ ಸಂಸ್ಕøತಿ, ಅಧ್ಯಾತ್ಮಿಕ ರಾಯಬಾರಿಯಾಗಿದ್ದಾರೆ. ತತ್ವಜ್ಞಾನಿಯಾದ ಅವರು ದೈವಾಂಶ ಸಂಭೂತರಾಗಿದ್ದಾರೆ. ಇವರ ಉಪದೇಶಗಳಲ್ಲಿ ಬುದ್ದನ ಕರುಣೆ, ಬಸವಣ್ಣನ ಸತ್ಯ-ಧರ್ಮ, ಅಂಬೇಡ್ಕರವರ ಸಮಾನತೆ ಅಂಶಗಳು ಮೇಳೈಸಿರುವುದನ್ನು ಕಾಣಬಹುದು. ಸಂತ್ ಸೇವಾಲಾಲ್ ಮಹಾರಾಜರು ಇವರ ದೈವಿಕ ಶಕ್ತಿಯಿಂದ ಅನೇಕ ರೋಗಗಳನ್ನು ವಾಸಿಮಾಡಿದ್ದಾರೆ. ಇಂತಹ ಮಹಾನ್ ಸಂತರ ಆದರ್ಶಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಉಪವಿಭಾಗಾಧಿಕಾರಿ ಅಬೀದ ಗದ್ಯಾಳ ಹೇಳಿದರು.