
ಚಾಮರಾಜನಗರ, ಏ.26:- ಮನುಕುಲಕ್ಕೆ ಜ್ಞಾನದ ಬಗ್ಗೆ ಬೆಳಕು ಚೆಲ್ಲಿದವರು ಆದಿಗುರು ಶ್ರೀ ಶಂಕರಾಚಾರ್ಯರು ಎಂದು ಜಿಲ್ಲಾಧಿಕಾರಿ ಡಿ.ಎಸ್.ರಮೇಶ್‍ಅವರು ತಿಳಿಸಿದರು.
ನಗರದ ಜಿಲ್ಲಾಡಳಿತ ಭವನದಲ್ಲಿಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿಇಲಾಖೆಯ ವತಿಯಿಂದ ಆಯೋಜಿಸಲಾಗಿದ್ದ ಜಗದ್ಗುರು ಶ್ರೀ ಶಂಕರಾಚಾರ್ಯರಜಯಂತಿಯನ್ನು ಪುμÁ್ಪರ್ಚನೆ ಮಾಡುವ ಮೂಲಕ ಸರಳವಾಗಿ ಮತ್ತು ಸಾಂಕೇತಿಕವಾಗಿ ಉದ್ಘಾಟಿಸಿ ಅವರು ಮಾತನಾಡಿದರು.
ಜಗತ್ತಿನಲ್ಲಿ ತಮ್ಮದೇ ಚಿಂತನೆಗಳ ಮೂಲಕ ಜಗತ್ತಿಗೆಜ್ಞಾನದ ಬೆಳಕು ಪಸರಿಸಿದವರು ಶಂಕರಾಚಾರ್ಯರು. ಇಡೀದೇಶದ ಮೂಲೆ ಮೂಲೆಗಳಲ್ಲಿ ದೈವಆರಾಧನೆಗೆ ಅಷ್ಟಮಠಗಳನ್ನು ಸ್ಥಾಪಿಸಿದರು. ಪ್ರವಚನಗಳನ್ನು ನೀಡಿ ಮನುಕುಲಕ್ಕೆ ತಮ್ಮದೆ ರೀತಿಯಲ್ಲಿ ಕೊಡುಗೆಯನ್ನು ನೀಡಿದವÀರು ಶಂಕರಾಚಾರ್ಯರು ಎಂದರು.
ಕಾಲಕ್ಕೆ ಎಲ್ಲವನ್ನೂ ಶೂನ್ಯವಾಗಿಸುವ ಶಕ್ತಿ ಇದೆ. ಯೌವ್ವನ, ಜನ, ಧನ ಪ್ರತಿಯೊಬ್ಬರಿಗೂ ಒಂದಲ್ಲ ಒಂದು ವಿಧಾನದಲ್ಲಿ ದೊರೆಯುತ್ತದೆ. ಅವುಗಳು ನಮ್ಮ ಬಳಿ ಇದ್ದಾಗ ಗರ್ವಪಡದೇ ಸಮಾನ ಚಿತ್ತದಿಂದ ಇರಬೇಕು ಎಂಬುದನ್ನು ಬಹಳ ಅರ್ಥಪೂರ್ಣವಾಗಿ ತಿಳಿಸಿಕೊಟ್ಟವರು ಶಂಕರಾಚಾರ್ಯರು ಎಂದು ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ಹೇಳಿದರು.
ಉಪನ್ಯಾಸಕರಾದ ಸುರೇಶ್ ಎನ್. ಋಗ್ವೇದಿ ಅವರು ಮಾತನಾಡಿ ಧರ್ಮ ಶ್ರೇಷ್ಠತೆ, ಮಾನವೀಯ ಮೌಲ್ಯಗಳು ಭಕ್ತಿ ಮಾರ್ಗದ ಮೂಲಕ ಹೆಚ್ಚಿನ ಜ್ಞಾನ ಪಡೆದುಕೊಳ್ಳಲು ಶಂಕರಾಚಾರ್ಯರು ಅವಕಾಶ ಮಾಡಿಕೊಟ್ಟರೆಂದು ತಿಳಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಗುರುಲಿಂಗಯ್ಯ, ಸಮಾಜದ ಮುಖಂಡರು, ಅಧಿಕಾರಿಗಳು ಉಪಸ್ಥಿತರಿದ್ದರು.