ಮನುಕುಲಕೆ ವಾಲ್ಮೀಕಿ ಸ್ಪೂರ್ತಿಯ ಸೆಲೆ-ನವಲಗುಂದಮಠ

ಹುಬ್ಬಳ್ಳಿ, ಅ 31-ಬಿಜೆಪಿ ಹು-ಧಾ ಪೂರ್ವ ಎಸ್.ಟಿ ಮೋರ್ಚಾ ವತಿಯಿಂದ ಹು-ಧಾ ಪೂರ್ವ ಮಂಡಳದ ಅಧ್ಯಕ್ಷರಾದ ಪ್ರಭು ನವಲಗುಂದಮಠ ಹಾಗೂ ಹು-ಧಾ ಪೂರ್ವ ಎಸ್.ಟಿ ಮೋರ್ಚಾ ಅಧ್ಯಕ್ಷರಾದ ಮಾರುತಿ ಚಾಕಲಬ್ಬಿ, ಇವರ ನೇತೃತ್ವದಲ್ಲಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವು ದುರ್ಗದ ಬೈಲ ವೃತದಲ್ಲಿ ಆಚರಿಸಲಾಯಿತು.
ಪ್ರಭು ನವಲಗುಂದಮಠ ಮಾತನಾಡಿ ಭಾರತದ ಮೊಟ್ಟಮೊದಲ ಮಹಾಕಾವ್ಯ ರಾಮಾಯಣವನ್ನು ರಚಿಸಿದ ‘ಆದಿಕವಿ’ ಮಹರ್ಷಿ ವಾಲ್ಮೀಕಿಯ ಜಯಂತ್ಯೋತ್ಸವವನ್ನು ಪ್ರತಿವರ್ಷ ಆಚರಿಸುತ್ತಿರುವುದು ಅತ್ಯಂತ ಅರ್ಥಪೂರ್ಣವಾಗಿದೆ. ಸಾವಿರಾರು ವರ್ಷಗಳ ಹಿಂದೆ ಜನಿಸಿದ ಮಹರ್ಷಿ ವಾಲ್ಮೀಕಿ ಜಗತ್ತಿನ ಮೊಟ್ಟ ಮೊದಲ ಕವಿ. ಅದಕ್ಕಾಗಿಯೇ ವಾಲ್ಮೀಕಿಯನ್ನು ಆದಿ ಕವಿ ಎಂದು ಬಣ್ಣಿಸುತ್ತಾರೆ. ಮಹಾಕಾವ್ಯದಲ್ಲಿ ಮಾತೃದೇವೋಭವ, ಪಿತೃದೇವೋಭವ, ಆಚಾರ್ಯದೇವೋಭವ, ಅತಿಥಿದೇವೋಭವದಂತಹ ಮೌಲ್ಯಗಳನ್ನು ಎತ್ತಿ ಹಿಡಿಯಲಾಗಿದೆ. ಸಂಸ್ಕೃತದಲ್ಲಿ ರಚಿಸಲಾಗಿರುವ ರಾಮಾಯಣ ಮಹಾಕಾವ್ಯವು 24,000 ಶ್ಲೋಕಗಳನ್ನು ಹೊಂದಿದೆ. ವಾಲ್ಮೀಕಿಯು ಕವಿಕುಲದ ಗುರುವಾಗಿ ಹಲವಾರು ಕವಿಗಳಿಗೆ ಮತ್ತು ಸಾಹಿತಿಗಳಿಗೆ ಸ್ಫೂರ್ತಿಯ ಸೆಲೆಯಾಗಿದ್ದಾರೆ. ವಾಲ್ಮೀಕಿ ರಾಮಾಯಣದ ಆಧಾರದ ಮೇಲೆ ವಿವಿಧ ಭಾಷೆಗಳಲ್ಲಿ ಕಾವ್ಯ, ನಾಟಕ, ಕಾದಂಬರಿ ಮತ್ತು ಕತೆಗಳನ್ನು ಅನೇಕರು ರಚಿಸಿದ್ದಾರೆ. ಇಂದಿಗೂ ಸಹ ರಾಮಾಯಣ ಮಹಾಕಾವ್ಯವು ಜಗತ್ತಿನಲ್ಲಿ ಸತ್ವಯುತವಾದ ಮತ್ತು ಮೌಲ್ಯಯುತವಾದ ಸಾಹಿತ್ಯ ಸೃಷ್ಟಿಗೆ ಪ್ರೇರಣೆಯಾಗಿದೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಶಾಸಕರು ಅಶೋಕ ಕಾಟವೆ, ಹುಡಾ ಸದದಸ್ಯರಾದ ಚಂದ್ರಶೇಖರ ಗೋಕಾಕ, ವಿಭಾಗದ ಸಂಘಟನಾ ಕಾರ್ಯದರ್ಶಿ ಜಯತಿರ್ಥ ಕಟ್ಟಿ, ಮಹಾನಗರ ಪಾಲಿಕೆ ಸದಸ್ಯರಾದ ಶಿವು ಮೇನಸಿಣಕಾಯಿ, ಮಂಡಳದ ಪ್ರಧಾನ ಕಾರ್ಯದರ್ಶಿರಾದ ವಿನಯ ಸಜ್ಜನವರ, ಜಿಲ್ಲಾ ಎಸ್. ಸಿ ಮೋರ್ಚಾ ಅಧ್ಯಾಕ್ಷರಾದ ಬಸವರಾಜ ಅಮ್ಮಿನಬಾವಿ, ಬಿಜೆಪಿ ಹೀರಿಯ ಸದಸ್ಯರಾದ ರಂಗಾ ಬದ್ದಿ, ಜಿಲ್ಲಾ ಉಪಾಧ್ಯಕ್ಷರಾದ ಶಂಕರಪ್ಪ ಛಬ್ಬಿ, ಸಂತೋಷ ಅರಕೇರಿ, ದೀಪಕ ಮೇಹರವಾಡೆ, ಜಿಲ್ಲಾ ಕಾರ್ಯದರ್ಶಿ ಮಂಜುನಾಥ ಕಾಟಕರ, ಶಶಿಕಾಂತ ಬಿಜವಾಡ, ಹನಮಂತ ನಾಯಕ, ಹು-ಧಾ ಪೂರ್ವ ಮಹಿಳಾ ಮೋರ್ಚಾ ಅಧ್ಯಕ್ಷರಾದ ಪ್ರತಿಭಾ ಪವಾರ, ನಾಗರತ್ನಾ ಬಳ್ಳಾರಿ, ಬಸವರಾಚ ಇಚಂಗಿ, ಅಣ್ಣಪ್ಪ ಗೋಕಾಕ, ಗುರುನಾಥ ಹೇಮಕರ, ನಾಗರಾಜ ಟಗರಗುಂಟಿ, ಮುಂತಾದವರು ಉಪಸ್ಥಿತರಿದ್ದರು.