ಮನಾಲಿ-ಲೆಹ್ ಮದ್ಯೆ ಸುರಂಗ ಮಾರ್ಗ ನಿರ್ಮಾಣ

ಮನಾಲಿ, ಸೆ.೧೬- ಹಿಮಾಚಲ ಪ್ರದೇಶದ ಮನಾಲಿ ಹಾಗೂ ಲೆಹ್ ನಡುವಿನ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ವಿಶ್ವದ ಅತಿ ದೊಡ್ಡ ಅಟಲ್ ಸುರಂಗ ಕಾಲುವೆ ಮಾರ್ಗ ಪೂರ್ಣಗೊಳ್ಳಲು ಇನ್ನು ಹತ್ತು ವರ್ಷ ಬೇಕಾಗಲಿದೆ.
೧೦ ಸಾವಿರ ಅಡಿಗಿಂತಲೂ ಉದ್ದವಾಗಿರುವ ಈ ಸುರಂಗ ಕಾಲುವೆ ನಿರ್ಮಾಣಕ್ಕೆ ಆರ್ ವರ್ಷಗಳು ಬೇಕಾಗಬಹುದು ಎಂದು ಈ ಹಿಂದೆ ಅಂದಾಜು ಮಾಡಲಾಗಿತ್ತು. ಆದರೆ ಈ ಕಾಲುವೆ ಪೂರ್ಣಗೊಳ್ಳಲು ಹತ್ತು ವರ್ಷಗಳು ಬೇಕಾಗಬಹುದು ಎಂದು ಮುಖ್ಯ ಎಂಜಿನಿಯರ್ ಒಬ್ಬರು ಸುದ್ದಿಸಂಸ್ಥೆಗೆ ಮಾಹಿತಿ ನೀಡಿದ್ದಾರೆ.
ಪ್ರತಿ ೬೦ ಮೀಟರ್‌ಗೆ ಒಂದು ಸಿಸಿಟಿವಿ ಕ್ಯಾಮೆರಾ, ಪ್ರತಿ ೫೦೦ ಮೀಟರ್‌ಗೆ ಒಂದು ತುರ್ತು ನಿರ್ಗಮನದ ಬಾಗಿಲು ಸುರಂಗ ಮಾರ್ಗದ ಒಳ ಭಾಗದಲ್ಲಿ ಇರುತ್ತವೆ. ಸುರಕ್ಷತೆಗೆ ಬೇಕಾದ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ಹೆದ್ದಾರಿ ಸುರಂಗ ಕಾಲುವೆ ಮಾರ್ಗವು ಮನಾಲಿ ಮತ್ತು ಲೇಹ್ ನಡುವಿನ ೪೬ ಕಿ.ಮೀ. ದೂರ ಸುತ್ತುವುದನ್ನು ಮತ್ತು ನಾಲ್ಕು ಗಂಟೆಗಳನ್ನು ಉಳಿಸುತ್ತದೆ. ನಿರ್ಮಾಣ ಕಾರ್ಯವು ಪ್ರಗತಿಯಲ್ಲಿದೆ ಎಂದವರು ಹೇಳಿದ್ದಾರೆ.
ನಿಗದಿತ ಸಮಯದೊಳಗೆ ಈ ಯೋಜನೆಯನ್ನು ಪೂರ್ಣಗೊಳಿಸುವುದಕ್ಕೆ ಹಲವಾರು ಸವಾಲುಗಳಿವೆ. ಪ್ರತಿ ಉಪಕರಣ ಹಾಗೂ ಇತರ ಸಂಪನ್ಮೂಲಗಳ ಅಳವಡಿಕೆ ಮಾಡುವುದು ಮತ್ತು ತೆಗೆಯುವುದು ಕಷ್ಟಕರ ಸಂಗತಿಯಾಗಿದೆ. ಫುಟ್‌ಪಾತ್ ಸೇರಿದಂತೆ ೧೦.೫ಮೀ ಅಗಲವನ್ನು ಈ ದಾರಿ ಹೊಂದಿದೆ. ಇದೊಂದು ಕನಸಿನ ಯೋಜನೆಯಾಗಿದ್ದು, ಇದು ಪೂರ್ಣಗೊಳಿಸಲು ಬಹಳವೇ ಪ್ರಯತ್ನ ಹಾಕುಲಾಗುತ್ತಿದೆ ಎಂದೂ ಇಂಜಿನಿರ್‌ಗಳ ಸಮೂಹ ಅಭಿಪ್ರಾಯ ಪಟ್ಟಿದೆ.