ಮನಸ್ಸು ಸ್ವಚ್ಛಗೊಳಿಸಲು ಪುರಾಣ, ಪ್ರವಚನ ಆಲಿಸಿ

ಕಲಬುರಗಿ,ಜ.21-ಮನಸ್ಸನ್ನು ಸ್ವಚ್ಛಗೊಳಿಸಲು ಶರಣರು, ಸಂತರು, ಮಹಾತ್ಮರ ಪುರಾಣ ಪ್ರವಚನ ಆಲಿಸಬೇಕು ಎಂದು ಪುರಾಣಿಕರಾದ ಬಂಡಯ್ಯ ಶಾಸ್ತ್ರಿಗಳು ಹೇಳಿದರು.
ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಸುಕ್ಷೇತ್ರ ಕೊಕಟನೂರದ ಮಡಿವಾಳೇಶ್ವರ ಗದ್ದಗಿ ಮಠದಲ್ಲಿ ಲಿಂಗೈಕ್ಯ ಸಿದ್ದಲಿಂಗ ಮಹಾಸ್ವಾಮಿಗಳವರ 29ನೇ ಪುಣ್ಯಸ್ಮನೋತ್ಸವ ಹಾಗೂ ಮಡಿವಾಳೇಶ್ವರ ಮಹಾಸ್ವಾಮಿಗಳವರ ದ್ವಾದಶ ಪಟ್ಟಾಧಿಕಾರ ಮತ್ತು ಸಾಮೂಹಿಕ ವಿವಾಹ, 11 ಗ್ರಾಮಗಳಲ್ಲಿ ಬಸವ ದರ್ಶನ ಪ್ರವಚನ, ಅಯ್ಯಾಚಾರ, ಶಿವ ದೀಕ್ಷೆ, ಮುತ್ತೈದೆಯರು ಉಡಿತುಂಬುವ ಕಾರ್ಯಕ್ರಮ, ಆರೋಗ್ಯ ಶಿಬಿರ ಹತ್ತು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಇದರ ನಿಮಿತ್ಯವಾಗಿ ಮಹಾದಾಸೋಹಿ ಕಲಬುರಗಿಯ ಶರಣಬಸವೇಶ್ವರ ಮಹಾಪುರಾಣವನ್ನು ಬಂಡಯ್ಯ ಶಾಸ್ತ್ರಿಗಳು ಸುಂಟನೂರ, ಸಂಗೀತ ಸೇವೆ ವೀರೇಶ್ ಕೆಂಭಾವಿ, ತಬಲ ರಮೇಶ ಕಟ್ಟಿ ಸಂಗಾವಿ ಇವರುಗಳ ಸಾಹಿತ್ಯ ಸಂಗೀತ ದೊಂದಿಗೆ ಪುರಾಣ ಪ್ರವಚನ ಪ್ರಾರಂಭಗೊಂಡಿತು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಮಲ್ಗಾಣ ಹಿರೇಮಠದ ಜಡೆಶಾಂತಲಿಂಗ ಶಿವಾಚಾರ್ಯರು, ಅಧ್ಯಕ್ಷತೆಯನ್ನು ಅಥರ್ಗ ವಿರಕ್ತ ಮಠಶ ಮುರಗೇಂದ್ರ ಮಹಾ ಸ್ವಾಮಿಗಳು ವಹಿಸಿ ಮಾತನಾಡಿ ಕಲಬುರ್ಗಿ ನಗರವನ್ನು ಮರಿ ಕಲ್ಯಾಣ ಮಾಡಿದ ಕೀರ್ತಿ ಶರಣಬಸವೇಶ್ವರರಿಗೆ ಸಲ್ಲುತ್ತದೆ ಎಂದರು, ಕಾರ್ಯಕ್ರಮದ ಸಮ್ಮುಖವನ್ನು ಆ¯ಮೇಲ್ ವಿರಕ್ತ ಮಠದ ಜಗದೇವ ಮಲ್ಲಿಬೊಮ್ಮ ಮಹಾಸ್ವಾಮಿಗಳು, ನೇತೃತ್ವವನ್ನು ಕೊಕಟನೂರ ಗದ್ದಗಿ ಮಠದ ಮಡಿವಾಳೇಶ್ವರ ಮಹಾಸ್ವಾಮಿಗಳು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಗ್ರಾ.ಪಂ.ಅಧ್ಯಕ್ಷ ಪೈಗಂಬರ್ ಮೈಬು ಸಾಬ್ ಮುಲ್ಲಾ ಕೊಕಟನೂರ, ಉಪಾಧ್ಯಕ್ಷ ರಮೇಶ್ ಚಿನ್ನಕ್ಕರ್ ಹಾಗೂ ಸರ್ವ ಸದಸ್ಯರು, ಕೊಕಟನೂರ ಗ್ರಾಮದ ಹಾಗೂ ಸುತ್ತಮುತ್ತಲಿನ ಸಕಲ ಸದ್ಭಕ್ತರು ಭಾಗವಹಿಸಿದ್ದರು.