ಮನಸ್ಸಿನ ಶಾಂತಿ ಕೊರಳ ಹಾರ ಹುಡುಕುವ ಅಗತ್ಯವಿಲ್ಲ

Thousands of parents have lost sons and daughters across the country to an epidemic of accidental drug overdoses.

ಇಂದು ಇಡೀ ಪ್ರಪಂಚದಲ್ಲಿ ಎಲ್ಲಿ ನೋಡಿದರೂ ಅಶಾಂತಿ ರಾರಾಜಿಸುತ್ತಿದೆ. ಬಡವ ಅಥವಾ ಬಲ್ಲಿದನಾಗಲಿ ,ರಾಜನಾಗಲಿ ಅಥವಾ ಪ್ರಜೆಯಾಗಲಿ, ಪ್ರತಿಯೊಬ್ಬ ಮಾನವನಿಗೆ ಅಶಾಂತಿ ಕಾಡುತ್ತಿದೆ. ಶಾಂತಿ ಯಾರಿಗೆ ತಾನೆ ಪ್ರಿಯವಿಲ್ಲಶಾಂತಿಗಾಗಿ ಸಾಧು, ಸನ್ಯಾಸಿಗಳು ಕಾಡುಮೇಡುಗಳನ್ನು ಅಲೆಯುತ್ತ್ತಿರುತ್ತಾರೆ, ಭಕ್ತಜನರು ದೇವಸ್ಥಾನ ಮತ್ತು ತೀರ್ಥಯಾತ್ರೆಗಳನ್ನು ಮಾಡುತ್ತಿರುತ್ತಾರೆ, ವಿಜ್ಞಾನಿಗಳು ಸೂರ್ಯ, ಚಂದ್ರಗ್ರಹಗಳಲ್ಲಿ ಶಾಂತಿಯನ್ನು ಪಡೆಯಲು ಹವಣಿಸುತ್ತ್ತಿದ್ದಾರೆ.

ಅನೇಕರು ಹಣದಿಂದ ಶಾಂತಿ ಸಿಗುವುದೆಂದು ಹೆಚ್ಚು ಹೆಚ್ಚು ಕೂಡಿಹಾಕುವ ಪ್ರಯತ್ನದಲ್ಲಿದ್ದಾರೆ. ಹಾಗೆನಾದರೂ ಧನದಿಂದ ಶಾಂತಿ ಸಿಕ್ಕುವ ಹಾಗಿದ್ದರೆ ಪ್ರತಿಯೊಬ್ಬ ಸಾಹುಕಾರನೂ ಶಾಂತಮಯವಾದ ಜೀವನ ನಡೆಸಬೇಕಾಗಿತ್ತು. ಶಾಂತಿ ಎನ್ನವುದು ಅಂಗಡಿಗಳಲ್ಲಿ ಸಿಕ್ಕುವ ವಸ್ತುವಲ್ಲ. ಇಂದು ಪ್ರತಿಯೊಬ್ಬ ಮಾನವನು ’ಶಾಂತಿ’ ಹೇಗೆ ಸಿಗುವುದು, ಎಲ್ಲಿ ಸಿಗುವುದು ಎಂಬುದನ್ನು ತಿಳಿಯಬಯಸುತ್ತಾನೆ.
ಮನಶಾಂತಿ ಎಂಬ ನಾಳೆಯಿಂದ ಪ್ರಕಟವಾಗುವ ಲೇಖನದಲ್ಲಿ ಅಶಾಂತಿಗೆ ಮೂಖ್ಯ ಕಾರಣಗಳೇನು ಸತ್ಯವಾದ ಶಾಂತಿಯನ್ನು ಹೇಗೆ ಪ್ರಾಪ್ತಿ ಮಾಡಿಕೊಳ್ಳಬಹುದು ಎಂಬದನ್ನು ಸ್ಪಷ್ಟೀಕರಿಸಲಾಗುವುದು.
ಈ ಲೇಖನ ನಿ ಮ್ಮೆಲ್ಲರಿಗೂ ಕರೋನ ಸಂಕಟದ ಸಮಯದಲ್ಲಿ ಸಹಾಯವಾಗಲಿದೆ.

೧.ಮನಸ್ಸಿನ ಶಾಂತಿಯೇ ಆತ್ಮಶಾಂತಿ
ಮನಸ್ಸಿಗೆ ಶಾಂತಿ ಬೇಕೆಂದು ಹೇಳಿದರೂ ಸಹ ಅದರ ಅರ್ಥ “ನಾನು ಅಶಾಂತಿಯಿಂದಿದ್ದೇನೆ ಅಥವಾ ನನಗೆ ಶಾಂತಿ ಬೇಕಾಗಿದೆ” ಎಂಬುದೇ ಆಗಿದೆ. ನಾನು ಎಂಬುದನ್ನು ಬಾಯಿಯಿಂದ ಹೇಳುತ್ತೇವೆ. ಇದನ್ನು ಹೇಳುವವರು ಯಾರು ಎಂಬುದನ್ನು ತಿಳಿಯವದು ಅತ್ಯವಶ್ಯಕ. ಈ ರೀತಿ ತನ್ನನ್ನು ತಾನೇ ’ನಾನು’ ಎಂದು ಹೇಳುವ ಚೈತನ್ಯ ಶಕ್ತಿ ’ಆತ್ಮ’ ವಾಗಿದ್ದೇನೆ. ಇದು ನಿರಾಕಾರವಾದ(ಶರೀರವಲ್ಲದ) ಜ್ಯೋತಿರ್ಬಿಂದು ಸ್ವರೂಪ ಆತ್ಮ, ಪಂಚತತ್ವಗಳಿಂದ (ಗಾಳಿ, ಬೆಂಕಿ, ನೀರು, ಪೃಥ್ವಿ, ಆಕಾಶ) ಮಾಡಿದ ಶರೀರವನ್ನು ಧಾರಣೆ ಮಾಡುತ್ತದೆಯೋ, ಆಗ ಅದು ಜೀವಾತ್ಮ ಎನಿಸಿಕೋಳ್ಳುತ್ತದೆ.. ಎಂದರೆ ಶರೀರ+ಆತ್ಮ ಎಂದರ್ಥ. ಎಲ್ಲಿಯ ವರೆಗೆ ಆತ್ಮ ಶರೀರವನ್ನು ಹೊಂದುವದಿಲ್ಲವೋ ಅಲ್ಲಿಯ ವರೆಗೆ ಅದಕ್ಕೆ ದ:ಖ ಅಥವಾ ಸುಖ-ಶಾಂತಿ ಅಥವಾ ಅಶಾಂತಿಯ ಅನುಭವವಾಗುವುದಿಲ್ಲ. ಜೀವನವು ದು:ಖ ಅಥವಾ ಅಶಾಂತಮಯವಾದಾಗ ಶಾಂತಿಯ ಇಚ್ಛೆಯು ಜೀವತ್ಮನಿಗೆ ಆಗುವುದು.
ಜೀವನವು ಸದಾ ದು:ಖ ಮತು ಅಶಾಂತಿಯಿಂದಲೇ ಇರುವುದಿಲ್ಲ. ಸುಖದ ಜೀವನವನ್ನು ಹಿಂದೆ ಅನುಭವಿಸಿರುವುದರಿಂದಲೇ ಮನುಷ್ಯನಿಗೆ ಅದರ ಇಚ್ಛೆಯು ಮತ್ತೆ ಅಗುವುದು. ಹಾಗೇನಾದರೂ ಯಾವಾಗಲೂ ಅಶಾಂತಿ ಮತ್ತು ದ:ಖವೆ ಮನುಷ್ಯನ ಜೀವನವಾಗಿದ್ದರೆ ಶಾಂತಿ ಮತ್ತು ಸುಖದ ಇಚ್ಛೆಯನ್ನು ಇಡುವುದು ಕೂಡ ತಪ್ಪಾಗುತ್ತಿತ್ತು.
೨. ಮನಸ್ಸು ಎಂಬುದು ಆತ್ಮನ ಸಂಕಲ್ಪ ಶಕ್ತಿಯ ಹೆಸರಾಗಿದೆ
ಸಾಮಾನ್ಯವಾಗಿ ಮನಸ್ಸನ್ನು ಆತ್ಮದಿಂದ ಬೇರೆ ಎಂದು ತಿಳಿಯುವರು.ಈ ಸಿದ್ದಾಂತವು ಸರಿಯಾದರೆ ಮನಸ್ಸನ್ನು ಕೂಡ ಶರೀರದ ಒಂದು ಅಂಗವೆಂದು ಒಪ್ಪಿಕೊಳ್ಳಬೇಕಾಗುತ್ತದೆ. ಇದು ಅಸಾಧ್ಯ. ಹೃದಯವು ಶರೀರದ ಅಂಗವೆಂದು ತಿಳಿದಿರುವವರು ಹೃದಯ ಮತ್ತು ಮನದ ವ್ಯತ್ಯಾಸವನ್ನು ತಿಳಿದಿರಲಾರರು.
ಮನಸ್ಸು ಆತ್ಮನಿಂದ ಬೇರೆಯಾದ ಇನ್ನಾವ ವಸ್ತವೂ ಅಲ್ಲ. ಚೈತನ್ಯ ಆತ್ಮವು ಮನ, ಬುದ್ದಿ ಮತ್ತು ಸಂಸ್ಕಾರಗಳಿಂದ ಕೂಡಿದೆ.ಮನಸ್ಸು ಸಂಕಲ್ಪ ಶ್ಕಕ್ತಿಯ ಹೆಸರಾಗಿದೆ. ಹಾಗೆ ಬಂದಂಥ ಸಂಕಲ್ಪಗಳನ್ನು ನಿರ್ಣಯಿಸುವ ಅಥವಾ ವಿವೇಚನಾ ಶಕ್ತಿಗೆ ಬುದ್ದಿಯೇಂದು ಹೇಳುತ್ತೇವೆ. ಅದನ್ನು ನಿರ್ಣಯಿಸಿ ಕಾರ್ಯರೂಪಕ್ಕೆ ತರುವುದೇ ಮನಸ್ಸಿನ ಕರ್ತವ್ಯವಾಗಿದೆ. ಅದು ಕರ್ಮವಾದ ಮೇಲೆ ಸಂಸ್ಕಾರವಾಗುವುದು.ಸಂಸ್ಕಾರಕ್ಕೆ ತಕ್ಕಂತೆ ಫಲ ಇದ್ದೇ ಇರುತ್ತದೆ. ಎಲ್ಲಿಯ ವರೆಗೆ ಆತ್ಮನು ಶರೀರದಲ್ಲಿರುವನೋ ಅಲ್ಲಯ ವರೆಗೆ, ಸಾಗರದಲ್ಲಿ ಆಲೆಗಳು ಏಳುತ್ತಿರುವವೋ ಅದೆ ರೀತಿ ಮನಸ್ಸಿನಲ್ಲಿಯೂ ಸಂಕಲ್ಪಗಳು ಏಳುತ್ತಲೆ ಇರುತ್ತವೆ.
೩.ಮನಸ್ಸು ಮತ್ತು ಹೃದಯದ ಅಂತರ
ಹೃದಯವನ್ನು ಶರೀರದ ಅಂಗವೆಂದು ಮೇಲೆ ಸಿದ್ದ ಪಡಿಸಲಾಗಿದೆ. ಮನಸ್ಸು ಆತ್ಮದ ಅಂಗವಾಗಿರುವುದರಿಂದ ಅದು ಚೈತನ್ಯವಾಗಿದೆ.ಇವೆರಡರ ಪರಸ್ಪರ ಸಂಬಂಧ ಅತ್ಯವಶ್ಯಕ. ಹೇಗೆ ನೋಡುವ ಕಾರ್ಯವು ಕಣ್ಣಿನ ಮೂಲಕ ಆಗುವುದೋ ಅದೇ ಪ್ರಕಾರವಾಗಿ ಆತ್ಮವು ಶರೀರದಲ್ಲಿದ್ದಾಗ ಮಾತ್ರ ಸಂಕಲ್ಪವು ಉತ್ಪತ್ತಿಯಾಗುವುದು. ಮನಸ್ಸಿನ ಸ್ಥಿರತೆ ಅಥವಾ ಚಂಚಲತೆಯು ಸಂಸ್ಕಾರದ ಕಠೋರತೆ ಮತ್ತು ಕೋಮಲತೆಯ ಮೇಲೆ ನಿರ್ಧಾರವಾಗಿರುತ್ತದೆ.ಶುದ್ಧ ಸಂಸ್ಕಾರವುಳ್ಳ ಮನುಷ್ಯರಿಗೆ ಕೋಮಲ ಹೃದಯದವರೆಂದು ಸ್ತುತಿ ಮಡಲಾಗುವುದು.ಪ್ರತಿನಿತ್ಯ ಮನಸ್ಸಿನಲ್ಲಿ ನಡೆಯುವ ಸಂಕಲ್ಪವು ಸಂಸ್ಕಾರದ ಪ್ರಭಾವದ ಮೇಲೆ ಅವಲಂಬಿಸಿರುತ್ತದೆ.
೪.ಮನಸ್ಸು ಮೂರ್ಖ, ಪಾಪಿ, ಭೂತ ಅಲ್ಲ
ಸಾಮಾನ್ಯವಾಗಿ ಎಲ್ಲರೂ ಮನಸ್ಸೇ ಎಲ್ಲಾ ಪಾಪ ಕರ್ಮಗಳಿಗೂ ಕಾರಣವೆಂದು ದೂಷಿಸುತ್ತಾರೆ.ಆದರೆ ನಾವು ಅದನ್ನು ಆಳವಾಗಿ ಚಿಂತಿಸಿದರೆ ಮನಸ್ಸಿನಲ್ಲಿ ಸದಾ ಕೆಟ್ಟ ಸಂಕಲ್ಪಗಳು ಏಳುವುದಿಲ್ಲವೆಂಬುದು ಅರಿವಾಗುವುದು. ಹಾಗೇನಾದರೂ ಕೇವಲ ಕೆಟ್ಟ ಸಂಕಲ್ಪಗಳೇ ಮನಸ್ಸಿನಲ್ಲಿ ಏಳುವುದಾದರೆ, ಪ್ರಪಂಚದಲ್ಲಿ ಯಾವ ಮನುಷ್ಯನಿಂದಲೂ ಒಳ್ಳೆಯ ಕೆಲಸಗಳೇ ನಡೆಯುತ್ತಿರಲಿಲ್ಲ. ಆದರೆ ನಾವು ನೋಡುತ್ತಿರುವಂತೆ ಕೆಟ್ಟ ಮತ್ತು ಒಳ್ಳೆಯ ಕರ್ಮಗಳನ್ನು ಮನುಷ್ಯರು ಮಾಡುತ್ತಲೇ ಇರುತ್ತಾರೆ. ಯಾವಾಗ ಮನಸ್ಸಿನಲ್ಲಿ ಕೇವಲ ಅಶುದ್ಧ ಸಂಕಲ್ಪಗಳು ಏಳುವವೋ ಅಂತಹ ಮನಸ್ಸಿನ ಆತ್ಮನನ್ನು “ಪಾಪಾತ್ಮ” ಎಂದು ಹೇಳಬಹುದು.
ಮನಸ್ಸು ಆತ್ಮದ ಒಂದು ಅಂಗ, ಪುಣ್ಯಾತ್ಮರಾದ ದೇವಿ-ದೇವತೆಯರ ಸಂಕಲ್ಪಗಳು ಸದಾ ಶುದ್ಧವಾಗಿಯೇ ಇರುತ್ತಿದ್ದವು. ಆಗ ಭಾರತವು ಸ್ವರ್ಗವೆಂದು ಕರೆಯಲ್ಪಡುತ್ತಿತ್ತು. ಅಶುದ್ಧ ಸಂಕಲ್ಪ ಎಂಬ ಹೆಸರೇ ಇರಲಿಲ್ಲ. ದ್ವಾಪರದಿಂದ(೨೫೦೦ ವರ್ಷಗಳಿಂದ) ಅಶುದ್ಧ ಹಾಗೂ ವಿಕಾರಿ ಸಂಕಲ್ಪಗಳು ಪ್ರಾರಂಭವಾಗಿ ಈಗ ಕಲಿಯುಗದಲ್ಲಿ ವಿಕಾರಿ ಸಂಕಲ್ಪಗಳೇ ಹೆಚ್ಚಾಗಿರುವುದರಿಂದ ಇದನ್ನು ನರಕವೆಂದು ಕರೆಯುಲಾಗುವುದು. ಇದರಿಂದ ಮನುಷ್ಯನ ಮಾನಸಿಕ ವೃತ್ತಿ ಬೇರೆ ಬೇರೆಯಾಗಿದೆಯೆಂದು ಅಂದರೆ ಸತೋ, ರಜೋ ಮತ್ತು ತಮೋ ಗುಣವುಳ್ಳದ್ದಾಗಿದೆಯೆಂದು ಸಿದ್ಧವಾಗುವುದು.
ಮನುಷ್ಯಾತ್ಮ ತನಗೆ ತಾನೇ ಶತ್ರು ಮತ್ತು ತನಗೆ ತಾನೇ ಮಿತ್ರನೆಂದು ಭಗವದ್ಗೀತೆಯಲ್ಲಿ ಹೇಳಲಾಗಿದೆ.ಯಾವಾಗ ಶುದ್ಧ ಸಂಕಲ್ಪಗಳು ಏಳುತ್ತವೆಯೋ, ಆಗ ಆತ್ಮ ತನಗೆ ತಾನೇ ಮಿತ್ರ ಮತ್ತು ಯಾವಾಗ ಅಶುದ್ಧ ಸಂಕಲ್ಪಗಳು ಏಳುತ್ತವೆಯೋ ಆಗ ತನಗೆ ತಾನೇ ಶತ್ರುವಾಗುವನು.ಈ ಪ್ರಕಾರ ಮನಸ್ಸು ಸದಾ ಕೆಟ್ಟ ಸಂಕಲ್ಪಗಳಲ್ಲಿ ಇರುವುದಿಲ್ಲವೆಂದು ತಿಳಿಯಬಹುದು.
೫. ಶುದ್ಧ ಸಂಕಲ್ಪ ಅಥವಾ ಅಶುದ್ಧ ಸಂಕಲ್ಪ, ವಿಕಲ್ಪಗಳು ಪೂರ್ವ ಸಂಸ್ಕಾರದ ಮೇಲೆ ಆಧಾರಿತವಾಗಿವೆ
ಆತ್ಮದಲ್ಲಿಯೇ ಸಂಸ್ಕಾರ ತುಂಬಿದೆಯೆಂದು ಮೇಲೆ ಹೇಳಲಾಗಿದೆ. ಸಂಸ್ಕಾರದಲ್ಲಿ ಸತೋ, ರಜೋ ಮತ್ತು ತಮೋ ಗುಣಗಳೆಂಬ ಮೂರು ಪ್ರಕಾರಗಳಿವೆ. ಯಾವ ಸಮಯದಲ್ಲಿ ಯಾವ ಸಂಸ್ಕಾರಗಳ ಪ್ರಧಾನತೆಯಿರುತ್ತದೆಯೋ ಆ ಸಮಯದಲ್ಲಿ ಮನಸ್ಸಿನಲ್ಲಿ ಅವೇ ಸಂಕಲ್ಪಗಳು ಬರುತ್ತವೆ. ಆತ್ಮದಲ್ಲಿ ತುಂಬಿರುವ ಶುದ್ಧ ಅಥವಾ ಅಶುದ್ಧ ಸಂಸ್ಕಾರಗಳು ಪೂರ್ವ ಕರ್ಮಗಳನ್ನು ಅವಲಂಬಿಸಿರುತ್ತವೆ. ಮನುಷ್ಯನ ಆತ್ಮವು ಎಂತಹ ಕರ್ಮಗಳನ್ನು ಮಾಡುತ್ತಿರುತ್ತದೋ ಅದಕ್ಕನುಗುಣವಾಗಿಯೇ ಸಂಸ್ಕಾರಗಳು ಒಳ್ಳೆಯವು ಅಥವಾ ಕೆಟ್ಟದ್ದಾಗಿರುತ್ತವೆ. ಶುದ್ಧ ಸಂಸ್ಕಾರಗಳನ್ನು ಹೊಂದಬಯಸುವವರು ತಮ್ಮ ಕರ್ಮಗಳ ಮೇಲೆ ಪೂರ್ಣ ಗಮನವನ್ನಿಡಬೇಕಾಗಿದೆ. ಸದಾ ಶುದ್ಧ ಕರ್ಮಗಳಲ್ಲಿ ತೊಡಗಿರಬೇಕು.ಪ್ರತಿಯೊಂದು ಕರ್ಮ ಮಾಡುವುದಕ್ಕೆ ಮೊದಲು ಯೋಚಿಸುವುದು ಬುದ್ಧಿಯ ಕೆಲಸ. ಯಾವಾಗ ಬುದ್ಧಿಯು ಸತೋಗುಣದಿಂದ ಕೂಡಿರುತ್ತದೆಯೋ, ಆಗ ಖಂಡಿತ ಶ್ರೇಷ್ಠ ಕರ್ಮಗಳಾಗುತ್ತವೆ. ಬುದ್ಧಿಯ ಶುದ್ಧಿಯು ಸತ್ಯಜ್ಞಾನ ಮತ್ತು ಯೋಗದಿಂದ ಆಗುತ್ತದೆ.ಯೋಗದಿಂದ ಬುದ್ಧಿಗೆ ಬಲ ದೊರೆಯುವುದು.ಈ ಬಲದಿಂದ ಮನಸ್ಸಿನಲ್ಲಿ ಮಲಿನ ಸಂಕಲ್ಪಗಳು ಮೇಲೆಳದಂತೆ ಮಾಡಬಹುದು.ಮನ, ವಚನ ಮತ್ತು ಕರ್ಮವು ಪವಿತ್ರತೆಯ ಸಂಸ್ಕಾರಗಳನ್ನು ಅವಲಂಬಿಸಿರುತ್ತದೆ.ಕೇವಲ ಈಶ್ವರೀಯ ಜ್ಞಾನ ಮತ್ತು ಆಧ್ಯಾತ್ಮ ಯೋಗದಿಂದಲೇ ಇವುಗಳನ್ನು ಪವಿತ್ರವನ್ನಾಗಿ ಮಾಡಬಹುದು.
೬.ಮನಮತದಂತೆ ನಡೆಯುವುದು ಲಗಾಮಿಲ್ಲದ ಕುದುರೆಯನ್ನು ಏರಿದಂತೆ

“ಮತ”(ಮಾರ್ಗದರ್ಶನಗಳು ನಾಲ್ಕು ವಿಧವಾಗಿವೆ):-
೧ ಪರಮಾತ್ಮನಿಂದ ಸ್ವಯಂ ಕೊಡಲ್ಪಡುವ ಮತ “ಶ್ರೀಮತ”.
೨ ಗುರುವಿನಿಂದ ಕೊಡಲ್ಪಟ್ಟ ಮತ.
೩ ಶಾಸ್ತ್ರ ಮತ.
೪ ಮನಸ್ಸಿನ ಮತ.
ಈ ಮತಗಳಲ್ಲೆಲ್ಲಾ ಅತ್ಯಂತ ಒಳ್ಳೆಯ ಮತ ಪಾರಲೌಕಿಕ ಪರಮಪಿತ, ಪರಮಶಿಕ್ಷಕ, ಪರಮ ಸದ್ಗುರು, ಸರ್ವಜ್ಞ ಮತ್ತು ಸರ್ವಶಕ್ತಿವಂತ ನಿರಾಕಾರ ಪರಮಾತ್ಮನಾದ ಶಿವನು ಕೊಡುತ್ತ್ತಿರುವುದೇ ಆಗಿದೆ. ಈ ಸರ್ವಶ್ರೇಷ್ಟ ಮತವನ್ನು ಪ್ರತಿಯೊಂದು ಕಲ್ಪದಲ್ಲಿಯೂ(ಐದು ಸಾವಿರ ವರ್ಷಕ್ಕೆ ಒಂದು ಕಲ್ಪ) ಒಂದು ಸಾರಿ ಸಂಗಮಯುಗದಲ್ಲಿ ಮಾತ್ರ ಬ್ರಹ್ಮನ ಮುಖಕಮಲದ ಮೂಲಕ ಪರಮಾತ್ಮ ಶಿವ ತಂದೆಯು ಕೊಡುತ್ತಾರೆ.
ಮನಸ್ಸಿಗೆ ಬಂದಂತೆ ನಡೆಯುವುದರಿಂದ ಮನುಷ್ಯನ ಆತ್ಮ ಪೂರ್ಣವಾಗಿ ಪಾಪಿಯಾಗುವುದು.ಗುರುಮತ ಮತ್ತು ಶಾಸ್ತ್ರಗಳ ಮತಗಳೂ ಕೂಡ ಎಲ್ಲಿಯವರೆಗೆ ಪರಮಾತ್ಮನಿಂದ ಶ್ರೀಮತವು ದೊರೆಯುವುದಿಲ್ಲವೋ ಅಲ್ಲಿಯವರೆಗೆ ಮಾತ್ರ ನಡೆದುಕೊಂಡು ಬರುವವು.ಶಾಸ್ತ್ರ ಮತ ಮತ್ತು ಗುರುವಿನಿಂದ ಕೊಡಲ್ಪಟ್ಟ ಮತಗಳೂ ಕೂಡ ಮನುಷ್ಯರಿಂದ ಕೊಡಲ್ಪಟ್ಟ ಮತವಾಗಿದೆ.
ಹೇಗೆ ಸೂರ್ಯ ಉದಯವಾದ ಮೇಲೆ ದೀಪದ ಪ್ರಕಾಶದ ಅವಶ್ಯಕತೆಯಿರುವುದಿಲ್ಲವೋ ಹಾಗೆಯೇ ಪರಮಾತ್ಮನಿಂದ ಮಾರ್ಗದರ್ಶನವಾದ ಮೇಲೆ ಶಾಸ್ತ್ರ ಮತ್ತು ಶರೀರಧಾರಿ ಗುರುವಿನ ಮತಗಳ ಅವಶ್ಯಕತೆ ಇರುವುದಿಲ್ಲ.
೭.ಮನಸ್ಸನ್ನು ದಮನ ಮಾಡಲು ಸಾಧ್ಯವಿಲ್ಲ, ಸುಧಾರಿಸಬಹುದು.
ಅಶಾಂತ ಮಾನವರು ಹಠಯೋಗ, ಪ್ರಾಣಾಯಮ ಮೊದಲಾದ ಅನೇಕ ಸಾಧನೆಗಳಿಂದ ಮನಸ್ಸನ್ನು ದಮನ ಮಾಡಲು ಯತ್ನಿಸುತ್ತಾರೆ.ಅವರು ಅಭಿಪ್ರಾಯವೆಂದರೆ ಮನಸ್ಸೇ ಪ್ರತಿಯೊಂದು ಇಚ್ಛೆಗೂ ಕಾರಣ ಮತ್ತು ನಮಗೆ ಅಶಾಂತಿಯು ಇದರಿಂದಲೇ ಉದ್ಭವವಾಗವವೇಂದೂ, ಮನಸ್ಸನ್ನು ದಮನ ಮಾಡುವದರಿಂದ ಅಶಾಂತಿಯೂ ಉಂಟಾಗುವದಿಲ್ಲವೆಂಬದೂ ಅವರ ಮತ. ಆದರೆ ಮುಖ್ಯವಾಗಿ ನಾವು ಯೋಚನೆ ಮಾಡಬೇಕಾದುದೇನೆಂದರೆ ನಾವು ಎಲ್ಲಿಯವರೆಗೆ ಈ ದೇಹದಲ್ಲಿ ನಮ್ಮ ಪಾತ್ರವನ್ನು ಮಾಡುತ್ತೇವೆಯೋ ಅಲ್ಲಿಯ ವರೆಗೂ ನಮ್ಮ ಸಂಕಲ್ಪಗಳು ನಿಲ್ಲುವುದಿಲ್ಲ. ಸಂಕಲ್ಪಗಳಲ್ಲಿ ಎರಡು ವಿಧ:
೧.ಶುದ್ಧ ಸಂಕಲ್ಪ ೨. ಅಶುದ್ಧ ಸಂಕಲ್ಪ
ಶುದ್ಧ ಸಂಕಲ್ಪಗಳಿಂದ ಶುದ್ಧವಾದ ಇಚ್ಛೆಗಳು, ಅಶುದ್ಧ ಸಂಕಲ್ಪಗಳಿಂದ ಅಶುದ್ಧ ಇಚ್ಛೆಗಳು ಏಳುವವು.ಶುದ್ಧವಾದ ಭಾವನೆಯಿಂದ ಕರ್ತವ್ಯಗಳನ್ನು ಪೂರ್ಣವಾಗಿ ಮಾಡಿದರೆ ಅವನನ್ನು ದೇವತೆ ಎಂದೂ, ಅಶುದ್ಧವಾದ ಭಾವನೆ ಮತ್ತು ಕರ್ತವ್ಯಗಳನ್ನೇ ಮಾಡುತಿದ್ದರೆ ಅದೇ ಮನುಷ್ಯನನ್ನು ರಾಕ್ಷಸನೆಂದು ಕರೆಯುತ್ತಾರೆ.ಮನುಷ್ಯನು ತನ್ನ ಮನಸ್ಸನ್ನು ದಮನ ಮಾಡುವ ಪ್ರಯತ್ನದಿಂದ ಏನೂ ಉಪಯೋಗವಿಲ್ಲ. ಅಶುದ್ಧ ಸಂಕಲ್ಪಗಳನ್ನು ಎದುರಿಸುತ್ತ ಮತ್ತು ಶುದ್ಧ ಸಂಕಲ್ಪಗಳನ್ನು ವೃದ್ಧಿ ಮಾಡುತ್ತಾ ಸಾಗುವುದೇ ಮಾನವನ ಜೀವನದಲ್ಲಿ ಮಾಡಬೇಕಾದ ಪುರಾಷಾರ್ಥವಾಗಿದೆ.ಯಾವ ಮನುಷ್ಯನ ಸಂಕಲ್ಪ, ಇಚ್ಛೆ ಶುದ್ಧವಾಗಿರುತ್ತವೆಯೋ ಅವನು ಯಾವಾಗಲೂ ಪರೊಪಕಾರಿ ಯಾಗಿರುತ್ತಾನೆ. ತಾನೂ ಕೂಡಾ ಶಾಂತಚಿತ್ತ ಮತ್ತು ಸಖಿಯಾಗಿರುತ್ತಾನೆ. ತನ್ನಂತೆಯೇ ಇತರರ ಜೀವನವನ್ನೂ ಬದಲಾಯಿಸಲು ಪ್ರಯತ್ನಿಸುತ್ತಾನೆ.
ಅದ್ದರಿಂದ ಮಾನಸಿಕವಾಗಿ ಬರುವ ವಿಕಲ್ಪಗಳನ್ನು ಬದಿಗೊತ್ತಿಟ್ಟು ಶುದ್ಧವಾದ ಸಂಕಲ್ಪಗಳನ್ನು ಮನಸ್ಸಿಗೆ ತರುವುದೇ ಮನಸ್ಸನ್ನು ಸುಧಾರಿಸುವುದು.ಶುದ್ಧ ಮತ್ತು ಅಶುದ್ಧವೆಂದು ವಿಮರ್ಶಿಸುವುದಕ್ಕೂ ಕೂಡ ಶುದ್ಧವಾದ ಬುದ್ಧಿಯು ಅವಶ್ಯಕ. ಬುದ್ಧಯೇನಾದರೂ ತಮೋಗುಣಿಯಾಗಿದ್ದರೆ ಅಶುದ್ಧ ಸಂಕಲ್ಪಗಳೇ ಏಳುತ್ತಿರುತ್ತವೆ ಮತ್ತು ಅಶಾಂತಿಯಿಂದಲೆ ನರಳುತ್ತಾರೆ. ಹೇಗೆ ಒಂದು ಕುದರೆಯನ್ನು ಅದರ ಮಾಲೇಕನು ತಾನೆ ಹೇಳುವ ಹಾಗೆ ಕೇಳಲು ಪರಿವರ್ತಿಸುತ್ತಾನೆ, ಅದೇರೀತಿ ಮನಸ್ಸೆಂಬ ಕುದುರೆಯನ್ನು ಶುದ್ಧ ಸಂಕಲ್ಪಗಳಿಂದ ಪರಿವರ್ತಿಸಿಕೋಳ್ಳಬೇಕು.
೮ ಮಾನಸಿಕ ವಿಕಾರವೇ ಮನಸ್ಸಿನ ಚಂಚಲತೆಗೆ ಮುಖ್ಯ ಕಾರಣ
ಮಾನಸಿಕ ವಿಕಾರಗಳು ಮುಖ್ಯವಾಗಿ ಕಾಮ, ಕ್ರೋದ, ಲೋಭ, ಮೋಹ ಮತ್ತು ಅಹಂಕಾರಗಳಾಗಿವೆ. ಬೇರೆಯ ವಿಕಾರಗಳು ಇವುಗಳ ಸಂತಾನವಾಗಿವೆ. ಇವುಗಳನ್ನು ಮಾನಸಿಕ ರೋಗವೆಂದು ಹೇಳಬಹುದು.ಇವು ಮನಸ್ಸನ್ನು ಚಂಚಲ ಮಾಡುತ್ತವೆ. ಆ ಚಂಚಲತೆಯೇ ಮನುಷ್ಯತ್ಮನನ್ನು ಅಶಾಂತನನ್ನಾಗಿ ಮಾಡುತ್ತದೆ.
ಹೇಗೆ ಮನುಷ್ಯನು ತನ್ನ ಶರೀರದ ರೋಗಗಳಿಂದ ವ್ಯಾಕುಲನಾಗುತ್ತಾನೋ, ಅದೇ ರೀತಿ ಮಾನಸಿಕವಾದ ರೋಗವು ಕೂಡ ಮನುಷ್ಯನ ದು:ಖ ಮತ್ತು ಅಶಾಂತಿಗೆ ಕಾರಣವಾಗಿದೆ. ಇದರ ನಿವಾರಣೆಗಾಗಿ ಮನುಷ್ಯನು ದೇವಸ್ಥಾನ ಮತ್ತು ತಿರ್ಥಯಾತ್ರ್ರೆಯನ್ನು ಮಾಡುತ್ತಾನೆ. ಹೇಗೆ ಕೋತಿಯು ಶಾಂತಿಯಿಂದ ಇರುವದಿಲ್ಲವೋ ಹಾಗೇ ವಿಕಾರಗಳಿಂದ ಕೂಡಿದ ಮನುಷ್ಯನೂ ಕೂಡ ಚಂಚಲವಾಗಿರುತ್ತಾನೆ. ಅಲ್ಪ ಶಾಂತಿಗಾಗಿ ಜಪ, ತಪ, ಪೂಜೆ, ಪಠನ, ಶಾಸ್ತ್ರಗಳನ್ನು ಒದುವದು, ಯಜ್ಷ ಮೊದಲಾವುಗಳನ್ನು ಮನುಷ್ಯನು ಮಾಡುತ್ತಿರುತ್ತಾನೆ. ಆದರೆ ಎಲ್ಲಿಯ ವರೆಗೆ ನಿಜವಾದ ಶಾಂತಿಯು ಮನಸ್ಸಿಗೆ ಸಿಗುವುದಿಲ್ಲವೋ ಅಲ್ಲಿಯ ವರೆಗೆ ಅವನು ಸುತುತ್ತಲೆ ಇರುತ್ತಾನೆ.
ಯಾವ ವಿಕಾರಗಳಿಂದ ಅಶಾಂತಿಯುಂಟಾಗುತ್ತದೆಯೋ ಆ ವಿಕಾರಗಳಲ್ಲೇ ಶಾಂತಿಯನ್ನು ಹುಡುಕುವ ಮೂರ್ಖರನ್ನು ನಾವು ಇಂದು ಕಾಣಬಹುದು. ಹೇಗೆ ನಾಯಿಯು ಮೂಳೆಯನ್ನು ಕಡಿಯುವಾಗ ತನ್ನ ಬಾಯಿಯಿಂದಲೇ ಸೋರುತ್ತಿರುವ ರಕ್ತವನ್ನೇ ಮಜ್ಜೆಯೆಂದು ನೆಕ್ಕುತ್ತದೆಯೋ ಅದೇ ರೀತಿ ಇಂದು ಮನುಷ್ಯರು ವಿಕಾರಗಳೆಂಬ ಮೂಳೆಯನ್ನು ತಮ್ಮ ಜೀವನವೆಂಬ ಬಾಯಿಯಲ್ಲಿ ಹಿಡಿದು ಅದರಿಂದ ಉತ್ಪನ್ನವಾಗುತ್ತಿರುವ ದು:ಖವೆಂಬ ರಕ್ತವನ್ನು ಸುಖವೆಂದು ಸವೆಯುತ್ತಿದ್ದಾರೆ.
೯.ಮನಸ್ಸಿನ ಚಂಚಲತೆಯನ್ನು ಜ್ಞಾನ ಮತ್ತು ಬುದ್ಧಿಯೋಗ ಬಲದಿಂದ ಹತೋಟಿಗೆ ತರಬಹುದು
ಏಲ್ಲಿಯವರೆಗೆ ಒಬ್ಬ ಯಾತ್ರಿಕನಿಗೆ ತನು ಮುಟ್ಟಬೇಕಾದ ಸ್ಥಳದ ಅರಿವಿರುವುದಿಲ್ಲವೋ; ಅದನ್ನು ಸೇರಲು ಒಬ್ಬ ಸರಿಯಾದ ದಾರಿ ತೋರಿಸುವವ ಸಿಗುವುದಿಲ್ಲವೋ; ಅಲ್ಲಿಯವರೆಗೆ ಅವನು ಅಶಾಂತಿಯಿಂದ ಅಲೆಯುತ್ತಿರುತ್ತಾನೆ. ಅದೇ ರೀತಿ ಅಜ್ಞಾನಿ ಮನುಷ್ಯನು ಕೂಡ ತನ್ನ ನಿಜ ಗುರಿಯನ್ನು ತಿಳಿಯದೇ ಹಾಗೂ ಅಲ್ಲಿಗೆ ತಲುಪಿಸುವ ನಿಜವಾದ ಮಾರ್ಗದರ್ಶಕರಿಲ್ಲದೆ ಅವನು ಮನಮತ, ಗುರುಮತ, ಮತ್ತು ಶಾಸ್ತ್ರಮತಗಳ ಮೇಲೆ ನಡೆದು ತನ್ನ ನಿಜ ಗುರಿಯನ್ನು ಮುಟ್ಟದೆ ಅಳುತ್ತಿದ್ದಾನೆ. ಇಂದು ಮನುಷ್ಯ ತನ್ನ ನಿಜ ಗುರಿಯಾದಮುಕ್ತಿ ಮತ್ತು ಜೀವನಮುಕ್ತಿಯನ್ನು ಮರೆತು ವಿಕಾರಗಳ ಮಾರ್ಗವನ್ನೇ ಅವಲಂಬಿಸಿದ್ದಾನೆ. ವಿಕಾರಗಳಿಂದ ಯಾವಗಲು ಶಾಂತಿ ಸಿಕ್ಕುವುದಿಲ್ಲ. ಮತ್ತು ಅವನ ಆಸೆಯು ದಿನೇ ದಿನೇ ಹೆಚ್ಚುತ್ತಲೇ ಇದ್ದು ಮನಸ್ಸಿನ ಚಂಚಲತೆಯು ವೃದ್ಧಿಯಾಗುತ್ತಿರುತ್ತದೆ. ಈ ಮನಸ್ಸಿನ ಚಂಚಲತೆಯನ್ನು ಸ್ಥಿರ ಮಾಡುವುದಕ್ಕೆ ಸರಿಯಾದ ಮಾರ್ಗದರ್ಶಕನು ಬೇಕು.
ಯಾವ ಮನುಷ್ಯನು ಪರಮಾತ್ಮನ ಕೈಯಲ್ಲಿ ತನ್ನ ಕೈಯನ್ನು ಕೊಟ್ಟು ಅಥವಾ ನಿಜವಾದ ಮಾರ್ಗದರ್ಶಕನಾದ ಪರಮತ್ಮನ ಕೈಯನ್ನು ಹಿಡಿದು ತೀವ್ರವಾದ ಪುರುಷಾರ್ಥ ಮಾಡುತ್ತಾನೋ, ಅವನಿಗೆ ಸುಲಭವಾಗಿ ಮುಕ್ತಿ ಮತ್ತು ಜೀವನ್ಮುಕ್ತಿಯು ದೊರೆಯುತ್ತದೆ.ಮನಸ್ಸಿನ ಚಂಚಲತೆಯು ಮತ್ತೆ ಅವನ ಮುಂದೆ ಸುಳಿಯುವದೆ ಇಲ್ಲ. ಆದ್ದರಿಂದ ಮನಸ್ಸಿನ ಶಾಂತಿಗಾಗಿ ಯೋಗಿ ಜೀವನವನ್ನು ಅವಲಂಬಿಸಬೇಕು.
೧೦.ಮನಸ್ಸಿನ ಆಲೆದಾಟ ಹೇಗೆ ದೂರವಾಗಲು ಸಾಧ್ಯ?
ಮನಸ್ಸನ್ನು ಏಕಾಗ್ರತೆಯಲ್ಲಿ ಇಡುವದಕ್ಕೋಸ್ಕರ ಹಠ ಯೋಗ ಮೊದಲಾದ ಕ್ರಿಯೆಗಳನ್ನು ಮಾಡುತ್ತಾರೆ.ಆದರೆ ಅದರಿಂದಲೂ ಮನಸ್ಸಿನ ಅಲೆತ ನಿಲ್ಲುವದಿಲ್ಲ. ಸತ್ಯವಾಗಿ ಹೇಳುವುದಾದರೆ ಎಲ್ಲಿಯವರಗೆ ಆತ್ಮಕ್ಕೆ ಅಸಂತುಷ್ಟತೆ ಇರುವದೋ ಅಲ್ಲಿಯವರೆಗೆ ಅದು ಸುತ್ತುತ್ತಲೇ ಇರುತ್ತದೆ.ಆದ್ದರಿಂದ ಆತ್ಮದ ಸಂತುಷ್ಟತೆಯ ರೀತಿಯನ್ನು ತಿಳಿಯುವದು ಅವ್ಯಶಕ. ಪ್ರತಿಯೊಬ್ಬ ಆತ್ಮವೂ ಕೂಡ ತನ್ನ ಕರ್ಮ, ಸ್ವಭಾವ, ಗುಣ ಇವುಗಳಲ್ಲಿ ಮುಳುಗಿಯೇ ಆನಂದವನ್ನು ಪಡೆಯುತ್ತಿರುತ್ತಾನೆ. ಹೇಗೆ ಡಾಕ್ಟರ ತನ್ನ ಕೆಲಸದಲ್ಲಿ ಮಗ್ನನಾಗಿ ಪ್ರಸನ್ನನಾಗಿರುತ್ತಾನೋ ಮತ್ತು ಡೋಂಬರವನು ತನ್ನ ಆಟವನ್ನು ತೋರಿಸಿ ಪ್ರಸನ್ನನಾಗಿರುತ್ತಾನೋ, ವ್ಯಾಪರಿಯೂ ವ್ಯಾಪಾರದಲ್ಲು ಹರ್ಷಿತನಾಗಿರುತ್ತಾನೋ, ಅದೇ ರೀತಿ ಆತ್ಮನು ಸಹ ತನ್ನ ವಾಸ್ತವಿಕವಾಗಿ ಪರಮ ಪವಿತ್ರ, ಸುಖಸಾಗರ ಶಾಂತಿಸಾಗರನಾದ ಪರಮಪಿತ ಪರಮಾತ್ಮನ ಸಂತಾನನು ಹಾಗೂ ದಿವ್ಯ ಗುಣಗಳನ್ನು ಹೊಂದಿದ ನಿರ್ವಿಕಾರಿ ಸ್ವಭಾವವುಳ್ಳವನು. ಆತ್ಮನು ಸುಖ,ಶಾಂತಿ, ಪ್ರೇಮ, ಆನಂದ ಇತ್ಯಾದಿ ಗೂಣಗಳನ್ನು ಮನನ ಮಾಡುವುದರಿಂದ ಸಂತುಷ್ಟನಾಗುತ್ತಾನೆ.
ಯಾವಾಗ ಆತ್ಮವೂ ತನ್ನ ನಿಜವಾದ ಗುಣಗಳನ್ನು ಮರೆಯುತ್ತಾನೋ ಮತ್ತು ದುರ್ಗುಣಗಳ ವಶನಾಗುತ್ತಾನೆಯೋ ಆಗ ದು:ಖ, ಆಶಾಂತಿ, ಅಸಂತುಷ್ಟತೆಯಲ್ಲಿ ಮುಳುಗುತ್ತಾನೆ. ಮನೆಯನ್ನು ಮರೆತು ಮಗುವು ಹೇಗೆ ವ್ಯಾಕುಲವಾಗುವುದೋ ಅಂತೆಯೇ ಇಂದು ಪ್ರತಿಯೊಬ್ಬ ಜೀವಾತ್ಮನೂ ಕೂಡ ತನ್ನ ನಿಜವಾದ ಮನೆಯಾದ ಪರಂಧಾಮವನ್ನು ಮರೆತು ಅಶಾಂತಿಯಲ್ಲಿದ್ದಾನೆ. ಯಲ್ಲಿಯವರೆಗೆ ಈ ಜಿವಾತ್ಮಕ್ಕೆ ತನ್ನ ನಿಜವಾದ ಮನೆಯ ಮತ್ತು ಅಲ್ಲಿಗೆ ಹೋಗುವ ದಾರಿ ತಿಳಿಯುವುದಿಲ್ಲವೋ, ಅಲ್ಲಯವರೆಗೆ ಅದು ಸುತ್ತುತ್ತಲೇ ಇರುತ್ತದೆ. ಪೂರ್ಣ ಅರಿವಿಲ್ಲದ ಇಂದಿನ ವಿದ್ವಾಂಸರು, ಗುರು, ಪಂಡಿತರು, ಆಚಾರ್ಯರು ಮೋದಲಾದವರು ಮುಕ್ತಿ ಮತ್ತು ಜೀವನ ಮುಕ್ತಿಯದಾರಿಯನ್ನು ತೊರಿಸಲಾರರು.ಇವರು ಮನುಷ್ಯರನ್ನು ಸ್ಥೂಲ ಪ್ರಪಂಚದ ಅನೇಕ ತೀರ್ಥಯಾತ್ರ್ರೆಗಳನ್ನು ಮಾಡಿಸಿ, ಮಾಡಿಸಿ ಇನ್ನು ಮನುಷ್ಯನನ್ನು ಅಲೇಸುತ್ತಿದ್ದಾರೆ.ತಾವೇ ಮನೆಯನ್ನು ಹುಡುಕುತ್ತಾ ಅಲೇಯುತ್ತಿರುವ ಮನುಷ್ಯ ಬೇರೆಯವರಿಗೆ ಹೇಗೆ ಮನೆಯನ್ನು ತೋರಿಸಬಲ್ಲ ಇದು ಆಶ್ಚರ್ಯವೆ ಸರಿ.
ಅತಿ ಧರ್ಮಗ್ಲಾನಿಯಾಗಿರುವ ಈ ಸಮಯದಲ್ಲಿ ನಿರಾಕಾರ ಪರಮಪಿತ ಪರಮಾತ್ಮ ಜ್ಯೋತಿರ್ಬಿಂದು ಶಿವನು ಈ ಸ್ಥೂಲ ಸೃಷ್ಟಿಯಲ್ಲಿ ಅವತರಿತನಾಗಿ ಬ್ರಹ್ಮನ ಸಾಧಾರಣ ತನುವಿನಮೂಲಕ ತಮ್ಮ ಪರಿಚಯ ಮಾಡಿಕೊಟ್ಟಿದ್ದಾರೆ.ಈ ಸತ್ಯಜ್ಞಾನ ಅರ್ಥಾತ್ ಪ್ರಜಾಪಿತ ಬ್ರಹ್ಮಾಕುಮರಿಯರ ಈಶ್ವರೀಯ ವಿಶ್ವವಿದ್ಯಾಲಯುದಲ್ಲಿ ಕೊಡಲಾಗುತ್ತಿರುವ ಸಹಜ ಜ್ಞಾನ ಮತ್ತು ಸಹಜ ರಾಜಯೋಗದ ಶಿಕ್ಷಣದಿಂದ ಈಶ್ವರನ ಸೃಷ್ಟಿ, ಬ್ರಹ್ಮಾಂಡ ಮೊದಲಾದವುಗಳ ಪುರ್ಣ ಜ್ಞಾನ ಸಿಕ್ಕುವುದರಿಂದ ಮನಸ್ಸಿನ ಅಲೆದಾಟ ಪೂರ್ಣವಾಗಿ ನಿಲ್ಲುತ್ತದೆ.
೧೧.ಮನಸ್ಸನ್ನು ಗೆಲ್ಲುವುದು ಅಂದರೆ ಮಾನಸಿಕ ವಿಕಾರಗಳನ್ನು ಗೆಲ್ಲುವುದು
ಮನಸ್ಸನ್ನು ಗೆಲ್ಲುವುದೆಂದರೆ ಮನಸ್ಸು ಚಲಿಸದಂತೆ ಹಿಡಿಯುವದಲ್ಲ. ಮನಸ್ಸನ್ನು ವಶಪಡಿಸಿಕೊಳ್ಳುವುದೆಂದರೆ ಮನಸ್ಸನ್ನು ಸನ್ಮಾರ್ಗಕ್ಕೆ ಕೋಂಡೊಯ್ಯುವ ಸಂಕಲ್ಪಗಳು ಬರುವಂತೆ ಸುಧಾರಿಸಿಕೋಳ್ಳುವುದು.ಕುದುರೆಯನ್ನು ವಶಪಡಿಸಿ ಕೊಳ್ಳುವುದೆಂದರೆ ಅದು ಓಡಾಡದ ಹಾಗೆ ಕಟ್ಟಿ ಹಾಕುವದಲ್ಲ, ಮಾಲೀಕನು ಇಚ್ಚಿಸಿದ ಹಾಗೆ ನಡೆಯುವಂತೆ ಮಾಡುವುದು.ಮನಸ್ಸೆಂಬ ಕುದುರೆಗೆ ವಿಕಾರಗಳೇ ದುರ್ಮಾರ್ಗಗಳು, ಜೀವನವೆಂಬ ರಸ್ತೆಯಲ್ಲಿ ನಡೆಯುವಾಗ ವಿಕಾರಗಳೆಂಬ ಹಳ್ಳಗಳಲ್ಲಿ ಬಿದ್ದರೆ ಅನೇಕ ಸಂಕಟಗಳನ್ನು ಎದುರಿಸಬೇಕಾಗಿ ಬರುತ್ತದೆ.
೧೨. ಮಾನಸಿಕ ವಿಕಾರಗಳ ಜೊತೆಯಲ್ಲಿ ಯುದ್ಧ
ವಿಕಾರಗಳನ್ನು ಗೆಲ್ಲುವ ಶಬ್ದ ವಿಕಾರಗಳಿಂದ ಸೋತವರಿಗೆ ಮಾತ್ರ ಇರುತ್ತದೆ.ಇಂದು ಮನುಷ್ಯರಲ್ಲಿ ವಿಕಾರಗಳನ್ನು ಗೆಲ್ಲುವ ಶಕ್ತಿಯಿಲ್ಲ. ತಾನು ಅದರಲ್ಲಿ ಬೀಳಲು ಸ್ವಯಂ ಇಷ್ಟಪಡದಿದ್ದರೂ ಕೂಡ ಅದು ಅವರನ್ನು ಬಿಡದೆ ತನ್ನ ವಶಕ್ಕೆ ಎಳಿದುಕೊಳ್ಳುತ್ತದೆ.ಈ ಸೃಷ್ಟಿಯು ಒಂದು ಯುದ್ದ ಸ್ಥಳ.ನಮ್ಮ ಯುದ್ಧವು ಮಾಯೆ ಅಥವಾ ಐದು ವಿಕಾರಗಳ ಜೊತೆಯಲ್ಲಿ ನಡೆಯುತ್ತದೆ. ಹೇಗೆ ಮನುಷ್ಯನು ಬಲಿಷ್ಠವಾಗಿದ್ದರೆ ಅವನಿಗೆ ರೋಗ ಬರುವದಿಲ್ಲವೋ ಹಾಗೆಯೆ ಆತ್ಮವು ಬಲಿಷ್ಠವಾಗಿದ್ದಾಗ ವಿಕಾರಗಳ ರೋಗವಿಲ್ಲದೆ ಅದು ನಿರೋಗಿಯಾಗಿತ್ತು. ಈಗ ಆತ್ಮದ ನಿರ್ಬಲತೆಯಿಂದ ಪ್ರತಿಯೊಂದು ಆತ್ಮವು ರೋಗಿಯಾಗಿದೆ.
ಜೀವಾತ್ಮದ ನಿರ್ಬಲತೆಯ ಮುಖ್ಯ ಕಾರಣವೇ ಅಜ್ಞಾನ. ಯಾವಾಗ ಜೀವಾತ್ಮವು ತನ್ನ ನಿಜ ಸ್ವರೂಪನ್ನು, ಸ್ವಧರ್ಮವನ್ನು, ನಿಜಸ್ಥಾನ ಅಥವಾ ಮನೆಯನ್ನು ಮತ್ತು ಪರಮಪಿತ ಪರಮಾತ್ಮನನ್ನೂ ಮರೆಯುತ್ತದೆಯೋ ಆಗ ಅದರ ಪತನವು ಅಥವಾ ದುರಾವಸ್ಥೆಯು ಪ್ರ್ರಾರಂಭವಾಗುತ್ತದೆ.ಆಗ ವಿಕಾರವೆಂಬ ಶತ್ರು ಪ್ರಭಾವವನ್ನು ಬೀರಲು ಅಥವಾ ಮುತ್ತಿಗೆಯನ್ನು ಹಾಕಲು ಪ್ರಾರಂಭಿಸುತ್ತದೆ.
ಯಾವಾಗ ಆತ್ಮವು ವಿಕಾರಗಳಿಂದ ಸೋಲುತ್ತದೆಯೋ ಆಗ ಅದು ವಿಕಾರಗಳನ್ನು ಗೆಲ್ಲುವ ಪ್ರಯತ್ನ ಮಾಡುವುದು.ನಾವು ವಿಕಾರಗಳಿಂದ ಸೋಲದೇ ಇರುತ್ತಿದ್ದರೆ ಗೆಲ್ಲುವ ಮಾತೆ ಬರುತ್ತಿರಲಿಲ್ಲ. ಮಾನವನ್ನು ಪುರುಷಾರ್ಥವನ್ನು ಮಾಡಿದಾಗ ಮಾತ್ರ ಅದು ಯುದ್ಧವೆನಿಸುತ್ತದೆ. ಯುದ್ಧದಲ್ಲಿ ಗೆಲ್ಲುಲು ಹೇಗೆ ಶಕ್ತಿಯು ಬೇಕಾಗುತ್ತದೆಯೋ, ಅದೇ ರೀತಿ ಈ ವಿಕಾರಗಳೆಂಬ ಶತ್ರುಗಳ ಮೇಲೆ ಯುದ್ಧ ಮಾಡಲು ಕೂಡ ಶಕ್ತಿ ಬೇಕಾಗುವುದು. ಈ ಶಕ್ತಿಯನ್ನು ಪಡೆಯಲು ನಮ್ಮ ಬುದ್ಧಿಯ ಯೋಗವನ್ನು ಸಂಪೂರ್ಣವಾಗಿ ಪರಮಪಿತ ಪರಮಾತ್ಮ ನಿರಾಕರ ’ಶಿವ’ ನಲ್ಲಿ ಇಡಬೇಕಾಗಿದೆ.ಇದರ ಶಿಕ್ಷಣವನ್ನು ಪ್ರಜಾಪಿತ ಬ್ರಹ್ಮಾಕುಮರಿಯರ ಈಶ್ವರೀಯ ವಿಶ್ವ ವಿದ್ಯಾಲಯದ ಸೇವಾಕೇಂದ್ರಗಳ ಮುಖಾಂತರ ಪಡೆಯಬಹುದು.
೧೩.ಪರಮಶಾಂತಿಯನ್ನು ಕೊಡುವವರು ಪರಮಪಿತ ಪರಮಾತ್ಮ ಒಬ್ಬರೇ
ಯಾವ ವಸ್ತುವು ಯಾವ ಅಂಗಡಿಯಲ್ಲಿ ಸಿಕ್ಕುವುದೋ ಆ ವಸ್ತುವನ್ನು ಅಲ್ಲಿಯೇ ಕೊಳ್ಳುವಂತೆ, ಅಲ್ಪಕಾಲದ ಶಾಂತಿಗೆ ಅನೇಕ ಮಾರ್‍ಗಗಳಿದ್ದರೂ ಸದಾಕಾಲದ ಶಾಂತಿಯನ್ನು ನಿರಾಕಾರ ಪರಮಾತ್ಮನಿಂದ ಮಾತ್ರ ಪಡೆಯಬಹುದು.ಅವರನ್ನೇ ಶಾಂತಿಸಾಗರನೆಂದು ಕರೆಯುವುದು.ಏಕೆಂದರೆ ಅವರು ಈ ಸೃಷ್ಟಿಯಲ್ಲಿ ಬಂದು ಅಪಾರ ಕೃಪೆಯನ್ನು ತೋರಿಸಿದ್ದಾರೆ ಮತ್ತು ಸುಖ ಶಾಂತಿಯನ್ನು ಕೊಟ್ಟಿದ್ದಾರೆ.ಅವರನ್ನು ಪರಮಪಿತ ಎಂದು ಕರೆಯುವ ಮುಖ್ಯ ಕಾರಣವೆಂದರೆ ಅವರು ಮಕ್ಕಳಾದ ನಮಗೆ ಪರಮಪವಿತ್ರತೆ ಮತ್ತು ಪರಮ ಸುಖದ ಅವಿನಾಶಿ ಆಸ್ತಿಯನ್ನು ಕೊಟ್ಟಿರುತ್ತಾರೆ.
ಈ ಪ್ರಾಪ್ತಿ ಇಡೀ ಕಲ್ಪದಲ್ಲಿ ಈಗ ನಡೆಯುತ್ತಿರುವ ಕಲಿಯುಗದ ಅಂತ್ಯದ ಮತ್ತು ಸತ್ಯಯುಗದ ಆದಿಯ ವರ್ತಮಾನ ಪುರುಷೋತ್ತಮ ಸಂಗಮ ಯುಗದಲ್ಲಿ ಮಾತ್ರ ಸಾಧ್ಯ. ಹೇಗೆ ವರ್ಷ ಋತಿವಿನಲ್ಲಿ ಮಳೆಯು ಚೆನ್ನಾಗಿ ಬಿದ್ದರೆ ಭೂಮಿಯು ಹುಲ್ಲಿನಿಂದ ಬೆಳೆದು ಸೊಂಪಾಗಿ ಕಾಣುತ್ತದೆಯೋ, ಅದೇ ರೀತಿ ತ್ರಿಮೂರ್ತಿ ಜ್ಞಾನಸಾಗರನಾದ ಶಿವನು ಈ ಕಲಿಯುಗದ ಅಂತ್ಯದ ಈಗಿನ ಸಂಗಮಯುಗದಲ್ಲಿ ಪ್ರಜಾಪಿತ ಬ್ರಹ್ಮಾರ ಮುಖ ಕಮಲದಿಂದ ಅತ್ಯಮೂಲ್ಯ ಅವಿನಾಸಿ ಗೀತಾಜ್ಞಾನ ರತ್ನಗಳನ್ನು ಕೊಟ್ಟು ಮನುಷ್ಯಾತ್ಮರನ್ನು ತೃಪ್ತಿಪಡಿಸುತ್ತಿದ್ದಾರೆ. ವಿಕಾರಗಳೆಂಬ ಮಾಯೆಯಿಂದ ಮೂರ್ಛಿತರಾದ ಮನುಷ್ಯಾತ್ಮರನ್ನು ಮತ್ತೆ ಎಚ್ಚರಗೊಳಿಸಿವರು.ಪರಮಾತ್ಮ ಕಲಿಸಿಕೊಡುತ್ತಿರುವ ಸಹಜ ರಾಜಯೋಗ ಮತ್ತು ಸಹಜ ಜ್ಞಾನದ ಅಭ್ಯಾಸವನ್ನು ಮಾಡಿ, ಯೋಗಾಗ್ನಿಯನ್ನು ಪ್ರಜ್ವಲಿಸಿ ತಮ್ಮ ಜನ್ಮ-ಜನ್ಮಾಂತರದ ವಿಕರ್ಮಗಳನ್ನು ಭಸ್ಮ ಮಾಡಿಕೊಂಡು ಕರ್ಮಬಂಧನದಿಂದ ಮುಕ್ತರಾಗುವರು.
ಈಗ ಈ ಸೃಷ್ಟಿಯಲ್ಲಿ ಭಿನ್ನ ಭಿನ್ನ ರೀತಿಯಲ್ಲಿ ಪ್ರಾಕೃತಿಕ ಆಪತ್ತ್ತುಗಳು, ಆಣ್ವಸ್ತ್ರಗಳು ಗೃಹಯುದ್ಧ ಮೊದಲಾದವುಗಳಿಂದ ಮಹಾವಿನಾಶ ಪ್ರಾರಂಭವಾಗುವುದು .ಪರಮಪಿತ ಪರಮಾತ್ಮನಲ್ಲಿ ಬುದ್ದಿಯೋಗವನ್ನು ಬೆಳೆಸದೆ ಪಾಪಾತ್ಮರಾಗಿಯೇ ಉಳಿದ ಆತ್ಮಗಳು ಶಿಕ್ಷೆಯನ್ನು ಹೊಂದಿ ವಿಕರ್ಮ ಮತ್ತು ಕರ್ಮ ಬಂಧನವನ್ನು ಬಿಡುಗಡೆ ಮಾಡಿಕೊಂಡು ಪರಲೋಕ ಅಥವಾ ಶಾಂತಿಧಾಮವನ್ನು ಸೇರಿ ಪರಮಶಾಂತಿಯನ್ನು ಪ್ರಾಪ್ತಿಮಾಡಿಕೊಳ್ಳುವರು. ಇದನ್ನೆ ಮುಕ್ತಿ ಎಂದು ಕರೆಯಲಾಗುವುದು. ಆದರೆ ಪರಮಾತ್ಮನ ಜೊತೆಯಲ್ಲಿ ಪ್ರೀತಿಯನ್ನು ಬೆಳೆಸಿ, ಅವರ ಶ್ರೀಮತದಂತೆ ನಡೆದ ಆತ್ಮರು ಶಿಕ್ಷೆಯಿಲ್ಲದೆ ಶಾಂತಿಧಾಮಕ್ಕೆ ಹೋಗಿ ಅಲ್ಲಿಂದ ಮತ್ತೆ ಸಂಪೂರ್ಣ ಸುಖ-ಶಾಂತಿ ಮತ್ತು ಪವಿತ್ರತೆಯಿಂದ ಕೂಡಿದ ಸತ್ಯಯುಗ(ಸ್ವರ್ಗ)ಕ್ಕೆ ಬರುವರು.ಇದನ್ನೇ ಈಶ್ವರೀಯ ಜನ್ಮಸಿದ್ಧ ಅಧಿಕಾರವೆಂದು ಹೇಳಲಾಗುವುದು.ಈ ಜನ್ಮಸಿದ್ಧ ಅಧಿಕಾರವನ್ನು ಪಡೆಯುವುದಕ್ಕಾಗಿ, ಪ್ರಜಾಪಿತ ಬ್ರಹ್ಮಾರವರ ಮುಖ ಕಮಲದಿಂದ ನಿರಾಕಾರ ಪರಮಾತ್ಮ ಶಿವನು ಊಚ್ಚರಿಸುತ್ತಿರುವ ಗೀತೆಯ ಸಹಜ ಜ್ಞಾನ ಮತ್ತು ಸಹಜ ರಾಜಯೋಗವನ್ನು ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಕಲಿಸಲಾಗುವುದು.ಇದರಿಂದ ವರ್ತಮಾನ ವಿಕಾರಿ ಜೀವನವು ಪೂರ್ಣ ಬದಲಾಗಿ ಅಶಾಂತವಾದ ಮನವು ಪರಮಾತ್ಮನಚಿಂತನೆಯಲ್ಲಿ ಪೂರ್ಣ ಶಾಂತಿಯನ್ನು ಪಡೆದುಕೋಳ್ಳುವುದು.
೧೪. ’ಮನ್‌ಮನಾಭವ’ ಮನಸ್ಸಿನ ಶಾಂತಿಯ ಮೂಲಮಂತ್ರ.
ಗೀತೆಯ ಜ್ಞಾನದಾತ ನಿರಾಕಾರ ಜ್ಯೋತಿರ್ಲಿಂಗಮ ಶಿವ ಪರಮಾತ್ಮ ಪರಮಶಾಂತಿಯ ಪ್ರಾಪ್ತಿಗಾಗಿ ಬಹಳ ಸಹಜ ಉಪಾಯವನ್ನು ತಿಳಿಸುತ್ತಿದ್ದಾರೆ.ಮಕ್ಕಳೇ, ’ಮನ್‌ಮನಾಭವ’ ರಾಗಿರಿ ಎಂಬ ಆಜ್ಞೆಯನ್ನು ಮಾಡುತ್ತಿದ್ದಾರೆ.’ಮಕ್ಕಳೇ ನಿಮ್ಮ ಮನಸ್ಸನ್ನು ಅನೇಕ ಕಡೆ ಅಲೆಯಲು ಬಿಡಬೇಡಿ, ನನ್ನನ್ನು ನೆನಪು ಮಾಡುವ ಅಭ್ಯಾಸ ಮಾಡಿ.ನಿಮ್ಮ ಮನಸ್ಸನ್ನು ನನ್ನಲ್ಲಿ ಇಡಿ.ಇದರ ಫಲ ಸ್ವರೂಪವಾಗಿ ಸರ್ವಪಾಪಗಳಿಂದ ಮುಕ್ತರಾಗಿ ಪರಮ ಶಾಂತಿ ಮತ್ತ್ತು ಸುಖವನ್ನು ಪ್ರಾಪ್ತಿ ಮಾಡಿ ಕೊಳ್ಳುವಿರಿ’.ಈ ಮಂತ್ರವು ಜಪ ಮಾಡುವುದಕ್ಕೆ ಅಥವಾ ಮತ್ತೆ ಮತ್ತೆ ಹೇಳುತ್ತಿರುವುದಕ್ಕಲ್ಲ. ಹೇಗೆ ಬೆಲ್ಲ ಎಂದ ಮಾತ್ರಕ್ಕೆ ಬಾಯಿ ಸಿಹಿಯಾಗದೆ ಅದನ್ನು ತಿಂದಾಗ ಮತ್ರ ಗೊತ್ತಾಗುತ್ತದೆಯೋ, ಅದೇ ರೀತಿಯಲ್ಲಿ ’ಶಾಂತಿ, ಶಾಂತಿ’ ಎಂದು ಎಷ್ಟು ಬಾರಿ ನುಡಿದರೂ ಅದು ಸಿಗುವದಿಲ್ಲ. ಅದು ದೊರೆಯಬೇಕಾದರೆ ಶಾಂತಿಯಲ್ಲಿ ಸ್ಥಿತವಾಗಿ ಪರಮಾತ್ಮನ ಸ್ಮೃತಿ ಮಾಡುವುದರಿಂದ ಮಾತ್ರ ಸಾಧ್ಯ.ಅದ್ದರಿಂದ ಮನಸ್ಸಿನಲ್ಲಿ ಆ ದಿವ್ಯ ಅವ್ಯಕ್ತ ಮೂರ್ತಿಯಾದ ಪರಮಾತ್ಮನ ಅಪಾರ ಗುಣಗಳ ನೆನಪು ಮಾಡುತ್ತಿರಬೇಕು.
ಇಂದು ಮನ:ಶಾಂತಿಗಾಗಿ ಸತ್ಯ ಮಾರ್ಗವನ್ನು ಕಾಣದೆ ಕುಂಭಮೇಳಗಳಲ್ಲಿ ಗಂಗಾಸ್ನಾನ ಮಾಡುವುರು. ಗುಂಪು ಗುಂಪಾಗಿ ತೀರ್ಥಯಾತ್ರೆ ಹೋಗುವುದು ಅಥವಾ ಜೋರಾಗಿ ನಗಾರಿಗಳನ್ನು ಬಾರಿಸಿ ಗಲಾಟೆ ಮಾಡುವುದು ಅಥವಾ ನಿರಂತರ ಪೂಜಾಕರ್ಮವನ್ನು ಮಾಡುವುದೇ ಶಾಂತಿಯ ಮಾರ್ಗವಲ್ಲ. ಸತ್ಯ ಅನುಭವದಿಂದಾ ಹೇಳುವುದಾದರೆ ಇವು ಶಾಂತಿಯಿಂದ ದೂರ ತೆಗೆದುಕೊಂಡು ಹೋಗುವ ಮಾರ್ಗಗಳೆಂದು ಅನೇಕರು ಅಭಿಪ್ರಾಯವೂ ಆಗಿದೆ.
ಬುದ್ಧಿಯಲ್ಲಿ ಕೇವಲ ಪರಮಾತ್ಮನ ನೇನಪು ಹಾಗೂ ಸತ್ಯ ಪರಮತ್ಮನ ಇಡುವ ಪ್ರೇಮದಿಂದ ಶಾಂತಿ ಸಿಕ್ಕೇ ಸಿಗುವುದು. ಸತ್ಯ ಪರಿಚಯವುಳ್ಳವರು ಬಾಯಿಯಿಂದ ಹೇಳುವ ಅವಶ್ಯಕತೆಯಿಲ್ಲ. ಯಾತ್ರ್ರಾರ್ಥ್ರಿಗಳ ಗೋಜು ಕೂಡ ಇರುವುದಿಲ್ಲ. ನಿಜವಾದ ಪುರುಷಾರ್ಥದಿಂದ ಸಫಲತೆ ಸಿಕ್ಕೇ ಸಿಗುವುದು.ಮನಸ್ಸಿನ ಶಾಂತಿಯು ನಮ್ಮ ಕೊರಳ ಹಾರವಾಗಿದೆ.ಇದನ್ನು ಹುಡುಕಬೇಕಾಗಿಲ್ಲ. ಅದರೆ ಸ್ವಲ್ಪ ಅಂತರ್ಮುಖರಾಗಬೇಕು.ಬಾಹರ್ಮುಖ ರಾದರೆ ಶಾಂತಿಯ ಬದಲು ಅಶಾಂತಿಯೇ ಸಿಗುವುದು.
೧೫. ಪವಿತ್ತತೆಯು ಮನಸ್ಸಿನ ಶಾಂತಿಯ ಜನನಿ
ಮನಸ್ಸಿನ ಶಾಂತಿಗೊಸ್ಕರವಾಗಿ ನಿಜವಾದ ಆತ್ಮದ ಸ್ವಧರ್ಮದ ತಿಳುವಳಿಕೆ ಮತ್ತು ಆ ತಿಳುವಳಿಕೆಯ ಚಿಂತನೆಯಲ್ಲಿ ಸ್ಥಿತರಿರುವುದೂ ಅತ್ಯವಶ್ಯಕ. ಗೀತಾಜ್ಞಾನದಾತನಾದ ಪರಮಪಿತ ಪರಮಾತ್ಮ ಶಿವ ಹೇಳುವುದೇನೆಂದರೆ- ’ಮಕ್ಕಳೇ, ಆತ್ಮರಾದ ನಿಮ್ಮ ಸ್ವಧರ್ಮ ಶಾಂತಿಯಾಗಿದೆ.ನಿಮ್ಮ ನಿವಾಸಸ್ಥಾನ ಭೂಲೋಕದಿಂದ ಅಂದರೆ ಸೂರ್ಯ, ಚಂದ್ರರಿಗಿಂತಲೂ ಮೇಲಿರುವ ಅಖಂಡ ಜ್ಯೋತಿತತ್ವ.ಇದನ್ನು ಪರಂಧಾಮವೆಂತಲೂ ಕರೆಯುತ್ತಾರೆ.ಇದು ಪೂರ್ಣ ಶಾಂತಿಯಿಂದ ಕೂಡಿದೆ.ಈ ನಿಜವಾದ ಮನೆಯಲ್ಲಿ ಇರುವಆತ್ಮಗಳುಪೂರ್ಣಶಾಂತಿಯಲ್ಲಿರುವವು ಆಸಮಯದಲ್ಲಿಆತ್ಮಗಳು ಪೂರ್ಣವಾಗಿ ಪವಿತ್ತತೆ ಮತ್ತು ನಿರ್ವಿಕಾರಿಗಳಗಿದ್ದವು. ಆದ್ದರಿಂದ ಈಗ ಕಾಯಾ, ವಾಚಾ, ಮನಸಾ; ದೃಷ್ಟಿ, ಆಹಾರದಲ್ಲಿ ಪವಿತ್ರತೆಯನ್ನು ಕಾಯ್ದುಕೊಂಡರೆ ಆಗ ಮನ:ಶಾಂತಿಯು ಈಶ್ವಿರೀಯ ಜನ್ಮಸಿದ್ಧ ಅಧಿಕಾರವಾಗಿ ಲಭಿಸುತ್ತದೆ.
೧೬, ಮಾನಸಿಕ ಅಶಾಂತಿಗೆ ಮೂಖ್ಯ ಕಾರಣಗಳು
೧ ಶರೀರದ ರೋಗಗಳು, ೨.ಮಾನಸಿಕ ರೋಗಗಳು, ೩.ನಿದ್ರಾ ಹೀನತೆ, ೪.ನಿರ್ಧನತೆ, ೫. ಭಯ ಮತ್ತು ದು:ಖ, ೬.ಅತೃಪ್ತಿ, ೭.ಈರ್ಷೆ, ೮.ದ್ವೇಷ, ೯.ಕ್ರೋಧ, ೧೦. ಅಶುದ್ಧ ಅನ್ನ, ೧೧.ದುರಾಸೆ, ೧೨.ದುರ್ಜನರ ಸಂಗ, ೧೩. ದುರಾಚಾರ, ೧೪. ದುಶ್ಚಟಗಳು, ೧೫.ದುರ್ಘಟನೆಗಳು, ೧೬.ಅಶ್ಲೀಲ ಪುಸ್ತಕ ಪಠಣ, ೧೭. ಅಶ್ಲೀಲ ಚಲನಚಿತ್ರಗಳು, ೧೮.ಅಶ್ಲೀಲ ಗೀತೆಗಳು.
೧೭. ಶಾಂತಿಯ ಪ್ರಾಪ್ತಿಗೆ ಮುಖ್ಯ ಸಾಧನೆ
೧. ಆತ್ಮದ ನಿಜಸ್ವರೂಪದ ಸ್ಮೃತಿ.
೨. ನಿಜವಾದ ಮನೆಯ ನೆನಪು.
೩. ಶಾಂತಿಯ ಸಾಗರನಾದ ಪರಮಪಿತ ಪರಮಾತ್ಮನೋಡನೆ ಬುದ್ಧಿಯೋಗ ಇಡುವುದು.
೪.ಕೇಲಸ ಮಾಡುವಾಗ ಕೆಲಸಕ್ಕೆ ಪೂರ್ಣವಾಗಿ ಅಂಟಿಕೋಂಡಿರದೆ ಟ್ರಸ್ಟಿ ಆಗಿದ್ದುಕೊಂಡು ಕರ್ತವ್ಯ ಪರಾಯಣನಾಗಿರುವುದು.
೫. ಕಳೆದಹೋದ ಮಾತುಗಳನ್ನು ಸ್ವಪ್ನದಂತೆ ಮರೆತುಬಿಡುವುದು.
೬. ಅಶಾಂತ ವಾತಾವರಣದಿಂದ ಅದಷ್ಟೂ ದೂರವಿರುವುದು.
೭. ಸಹನಶೀಲತೆ, ಶಾಂತಿ, ಪ್ರೀತಿ, ಇತ್ಯಾದಿ ಗುಣಗಳನ್ನು ಧಾರಣೆಮಡುವುದು.
೮. ಸೃಷ್ಟಿಯಲ್ಲಿ ತಾನು ಪಾತ್ರಧಾರಿಯೆಂದು ತಿಳಿಯುವುದು.
೯. ಮಾನಸಿಕ ವಿಕಾರಗಳ ತ್ಯಾಗ, ಅಂದರೆ ಕಾಮ, ಕ್ರೋಧ, ಲೋಭ, ಮೋಹ, ಅಹಂಕಾರಗಳ ತ್ಯಾಗ ಮಾಡುವುದು.
’ಸಹನಾ ಭವತು, ಸಹನೌ ಭುನತ್ತು, ಸಹವಿರ್‍ಯಂ ಕರವಾವಹೆ, ತೇಜಸ್ವಿನಾದಮಿತಮಸ್ತು, ಮಹಾವಿದ್ವಿ ಶಾವಹೆ, ಓಂ ಶಾಂತಿ ಶಾಂತಿ ಶಾಂತಿ ಹಿ

ವಿಶ್ವಾಸ ಸೊಹೊನಿ
ನಿರ್ದೇಶಕರು, ಮಾಧ್ಯಮ ವಿಭಾಗ,ಬ್ರಹ್ಮಾಕುಮಾರಿ ಪ್ರಧಾನ ಕೇಂದ್ರ,ಮೌಂಟ್ ಅಬು, ರಾಜಸ್ಥಾನ.