ಮನಸ್ಸಿನ ನೋವು ಮರೆಸುವ ಶಕ್ತಿ ಸಂಗೀತಕ್ಕಿದೆ

ಕಲಬುರಗಿ,ಜು.19-ಅನಾದಿ ಕಾಲದಿಂದಲೂ ಸಂಗೀತ ರಾಗ, ತಾಳ, ಲಯ ಬದ್ಧ, ನಾದವು ವಿಶ್ವದ ಎಲ್ಲಾ ಸಂಸ್ಕೃತಿಗಳಲ್ಲಿ ಸಂಗೀತ ಪ್ರಕಾರಗಳಲ್ಲಿ ತನ್ನದೇ ಆದ ಛಾಪು ಮೂಡಿಸುತ್ತಾ ಬಂದಿದೆ. ಪ್ರತಿಯೊಂದು ಶುಭಕಾರ್ಯಗಳಿಂದ ಹಿಡಿದು ದುಃಖದ ಸನ್ನಿವೇಶದಲ್ಲೂ ಮನಸ್ಸನ್ನು ನಿರಾಳತೆಗೆ ಕೊಂಡೊಯ್ಯುವ ಶಕ್ತಿ ಈ ಸಂಗೀತಕ್ಕಿದೆ. ಸಂಗೀತವು ಮನಸ್ಸಿನ ನೋವನ್ನು ಮರೆಸಲು ಸಹಾಯಮಾಡುತ್ತದೆ ಅಲ್ಲದೇ ಚಂಚಲ ಮನಸಿಗೆ ಮುದ ನೀಡುವ ಶಕ್ತಿ ಕೂಡಾ ಸಂಗೀತಕ್ಕಿದೆ ಎಂದು ಚಿಣಮಗೇರಿಯ ಮಹಾಂತೇಶ್ವರ ಮಠದ ವೀರ ಮಹಾಂತ ಶಿವಾಚಾರ್ಯರು ನುಡಿದರು.
ಕಲಬುರ್ಗಿ ತಾಲ್ಲೂಕಿನ ಪಟ್ಟಣ ಗ್ರಾಮದ ರಾಚಣ್ಣ ದೇವರ ದೇವಸ್ಥಾನದ ಆವರಣದಲ್ಲಿ ಗಾನಯೋಗಿ ಪಂಚಾಕ್ಷರಿ ಸಂಗೀತ ಕಲಾ ಸೇವೆ ಸಂಸ್ಥೆ ಆಲೂರ (ಬಿ) ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ನಡೆದ “ಸಾಂಸ್ಕೃತಿಕ ಕಲಾ ಉತ್ಸವ ” ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಹಿಂದೆ ಸಂಗೀತದಿಂದ ಮಳೆ ತರಿಸಿದರು, ಸಂಗೀತದಿಂದ ಜೀವ ತುಂಬಿದರು ಎನ್ನುವ ಮಾತು ಕೇಳಿರುತ್ತೇವೆ ಬಹುಷಃ ನಮಗಿಂತ ಹಿಂದಿನ ಪೀಳಿಗೆಯವರು ಈ ಸಂಗೀತದ ಮಹತ್ವವನ್ನು ಮೊದಲೇ ತಿಳಿದಿದ್ದರೇನೋ ಇತ್ತೀಚಿನ ದಿನಗಳಲ್ಲಿ ಸಂಗೀತವನ್ನು ಆರೋಗ್ಯ ಸುಧಾರಣೆಯಲ್ಲೂ ಬಳಕೆಯಾಗುತ್ತಿದೆ ಎಂದರು.
ಪಟ್ಟಣ ಗ್ರಾಮ ಪಂಚಾಯತಿ ಅಧ್ಯಕ್ಷ ಶಿವಲಿಂಗಪ್ಪ ಬಿಸಗೊಂಡ, ನರಸಪ್ಪ ಬಿರಾದಾರ ದೇವಗಾಂವ, ವೇದಮೂರ್ತಿ ನೀಲಕಂಠಯ್ಯ ಹಿರೇಮಠ, ರವಿ ಪೊಲೀಸ್ ಪಾಟೀಲ್, ಅನಿಲ್ ಕುಮಾರ್ ಕಡ್ಲಾ, ಶರಣಯ್ಯಸ್ವಾಮಿ, ಶಾಂತಯ್ಯ ಸ್ವಾಮಿ ಮಠಪತಿ ಅತಿಥಿಗಳಾಗಿ ಆಗಮಿಸಿದ್ದರು. 2022 ನೇ ಸಾಲಿನ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಗಣ್ಯರಿಗೆ ಪ್ರಶಸ್ತಿ ಪ್ರಧಾನ, ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ನರಸಪ್ಪ ಬಿರಾದಾರ್ ದೇವಗಾಂವ್, ನೀಲಕಂಠಯ್ಯ ಹಿರೇಮಠ ಸುಂಟನೂರ, ಪ್ರಭುಲಿಂಗ ಎಸ್ ಕುಂಬಾರ್, ಭೀಮಾಶಂಕರ ಖಜರಿ, ಶಿವಪುತ್ರ ಎಸ್ ಹಾಗರಗಿ, ಸಂಗೀತ ಕ್ಷೇತ್ರದ ರಾಜೇಂದ್ರ ಸುತಾರ್, ಪಟ್ಟಣದ ಗುರುರಾಜ್ ಬಿರಾದಾರ್ ಸೂಂಟನೂರು, ಅಣ್ಣಾರಾವ ಸುತಾರ ಆಲೂರ ಬಿ, ಸಮಾಜ ಸೇವೆ ಕ್ಷೇತ್ರದ ವಿಶ್ವನಾಥ ಸಾಲಿಮಠ, ಶ್ರವಣಕುಮಾರ್ ಪರಸ್ತಿ, ಚಂದ್ರಕಾಂತ ಗುಳುಗುಳಿ, ಸದಾಶಿವ ಪಾಟೀಲ, ಗುರು ಶಾಂತಪ್ಪ ಪರಸ್ತಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸಾಂಸ್ಕೃತಿಕ ಕಲಾ ಉತ್ಸವ ಕಾರ್ಯಕ್ರಮದಲ್ಲಿ ಹಿಂದೂಸ್ತಾನಿ ಸಂಗೀತ ಗುರುಶಾಂತಯ್ಯ ಸ್ಥಾವರಮಠ, ಕೊಳಲುವಾದನ ಶಬ್ದ ಪೆÇೀಟ್ಲಿ ಗದಗ್, ತಬಲಾ ಸೋಲೋ ಜಗದೀಶ ಹೂಗಾರ ದೇಸಾಯಿ ಕಲ್ಲೂರ, ಕಥಾಕೀರ್ತನ ಉದಯಕುಮಾರ ಶಾಸ್ತ್ರೀಯಗಳು ಭೀಮಳ್ಳಿ, ಸುಗಮಸಂಗೀತ ಬಾಬುರಾವ್ ಕೋಬಾಳ, ಅಣ್ಣಾರಾವ್ ಶೆಡ್ ಗೆ, ಸೈದಪ್ಪ ಚೌಡಾಪುರ, ವಿಜಯಲಕ್ಷ್ಮೀ ಕೆಂಗನಾಳ, ತೋಟಯ್ಯ ಸ್ವಾಮಿ ಅಬ್ಬೆತುಮಕೂರು, ರಾಚಯ್ಯಸ್ವಾಮಿ ರಟಕಲ್, ಚೇತನ ಬೀದಿಮನಿ, ಅನಿಲ್ ಮಠಪತಿ, ಸಾಗರ ಭೀಮಳ್ಳಿ, ಆನಂದ್ ನಂದಿಕೋಲಮಠ, ಜಾನಪದಗೀತೆ ಸೂರ್ಯಕಾಂತ್ ಗೊಬ್ಬುರವಾಡಿ, ಬಂಡಯ್ಯ ಸ್ವಾಮಿ ಸುಂಟನೂರ, ಶಿವಕುಮಾರ ಪಾಟೀಲ್ ಬೇಡರ್ಜುಗಿ, ಈರಮ್ಮ ಎಸ್ ಮಠಪತಿ ಆಲೂರು, ಶರಣಮ್ಮ ಕೆ ಮಠಪತಿ, ರಾಜೇಂದ್ರ ಸುತಾರ ಪಟ್ಟಣ, ವಚನಗಾಯನ ಶ್ರೀಶೈಲ ಕೊಂಡೆವೂರು, ವಿನೋದ ದಸ್ತಾಪುರ, ಶ್ರೀನಾಗರಾಜ ಸಪ್ಪನಗೋಳ, ವಿರುಪಾಕ್ಷ ಗೌಡಗಾಂವ, ಹಿರಿಯ ಡೋಲಕ್ ವಾದಕರಾದ ರವಿ ಸ್ವಾಮಿ ಗೋಟೂರ, ತಬಲಾ ಸಾಥ್ ವೀರಭದ್ರಯ್ಯ ಸ್ಥಾವರಮಠ, ಮೌನೇಶ ಪಂಚಾಳ, ಅಭಿಲಾಷ್ ಮಠಪತಿ ಸಂಗೀತ ಕಾರ್ಯಕ್ರಮ ನೀಡಿದರು.
ಸಂಸ್ಥೆಯ ಅಧ್ಯಕ್ಷ ನಾಗಲಿಂಗಯ್ಯ ಸ್ಥಾವರಮಠ, ಕಾರ್ಯದರ್ಶಿ ಮಹಾಲಿಂಗಯ್ಯ ಸ್ವಾಮಿ ಸ್ಥಾವರಮಠ ಉಪಸ್ಥಿತರಿದ್ದರು. ಲಿಂಗಯ್ಯ ಸ್ವಾಮಿ ಮಠಪತಿ ಸ್ವಾಗತಿಸಿದರು, ಬಂಡಯ್ಯ ಹಿರೇಮಠ ಸುಂಟನೂರ ನಿರೂಪಿಸಿದರು.