ಮನಸ್ಸಿಟ್ಟು ಕಲಿತರೆ ಯಾವ ಭಾಷೆ ಕಠೀಣವಲ್ಲಃ ಡಾ.ಝಿಯಾ ಆಬೇದಿ

ವಿಜಯಪುರ, ಸೆ.25- ಸಿಕ್ಯಾಬ ಸಂಸ್ಥೆಯ ಮಹಿಳಾ ಪದವಿ ಕಾಲೇಜಿನ ಪ್ರಾಚಾರ್ಯರಾದ ಶ್ರೀಮತಿ ನಾಜಿಮಾ ಪಠಾಣ ಅವರು ‘ಇಂಗ್ಲೀಷ’ ವಿಷಯದ ಕುರಿತು ವಿಶೇಷ ಉಪನ್ಯಾಸದ ಮುಖ್ಯ ಅತಿಥಿಯಾಗಿ ಮಾತನಾಡಿದರು.
ವಿದ್ಯಾರ್ಥಿಗಳು ಯಾವುದೇ ವಿಷಯಗಳನ್ನು ಮನಸ್ಸಿಟ್ಟು ಕಲಿತರೆ ಕಠಿಣವಾಗಿ ಭಾಷಾ ವಿಷಯವಾದ “ಇಂಗ್ಲೀಷ (ಪ್ರನೋನಷನ ಭಾಷಾ ಉಚ್ಚಾರಣೆ”) ಕುರಿತು ಸಿಕ್ಯಾಬ ಆಂಗ್ಲ ಮಾಧ್ಯಮ ಪ್ರೌಢಶಾಲೆ ನವರಸಪುರ ವಿದ್ಯಾರ್ಥಿಗಳ ಮನಸ್ಸಿಗೆ ಮುಟ್ಟುವಂತೆ ಮತ್ತು ಪ್ರಶ್ನೆ ಕೇಳುವಿಕೆಯನ್ನು ಸಂದೇಹಗಳನ್ನು ನಿವಾರಿಸುವಂತೆ ಭೋದನೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ನಿರ್ದೇಶಕರು ಡಾ.ಝಿಯಾ ಆಬೇದಿನ ಮಾತನಾಡಿ ಪ್ರಶ್ನೇ ಕೇಳುವಿಕೆ ಮತ್ತು ಸ್ಪಷ್ಟ ಉಚ್ಚಾರಣೆಯಿಂದ ಭಾಷಾ ವಿಷಯಗಳು ಹತ್ತಿರವಾಗುತ್ತವೆ ಎಂದು ಹೇಳಿದರು. ಸಲೀಂ ಪುಣೆಕರ ಮತ್ತು ಪ್ರೌಢಶಾಲಾ ಸಮಸ್ತ ಸಿಬ್ಬಂದಿ ಉಪಸ್ಥಿತರಿದ್ದರು.