ಮನಸ್ಸನ್ನು ಕೆರಳಿಸುವ ವಾತಾವರಣದಲ್ಲಿ ಅರಳಿಸುವತ್ತ ಗುರುವಂದನೆ ಶ್ಲಾಘನೀಯ

ದಾವಣಗೆರೆ. ಮೇ.೧೫; ಎಲ್ಲೆಡೆ ಸಾಮಾಜಿಕವಾಗಿ ಮನಸ್ಸನ್ನು ಕೆರಳಿಸುವ ಕಾರ್ಯಗಳೇ ಸೃಷ್ಟಿಯಾಗುವ ಸಂದರ್ಭದಲ್ಲಿ ಮನಸ್ಸನ್ನು ಅರಳಿಸುವ ಅವಕಾಶಗಳು ವಿರಳವಾಗಿವೆ. ಇಂತಹ ಮನಸ್ಸನ್ನು ಅರಳಿಸುವ ಅಪರೂಪದ ಕಾರ್ಯಕ್ರಮಗಳಲ್ಲಿ  ಗುರುವಂದನಾ ಕಾರ್ಯಕ್ರಮವು ವಿಶಿಷ್ಟ ಹಾಗೂ ಅರ್ಥಪೂರ್ಣ ಕಾರ್ಯಕ್ರಮವಾಗಿದೆ ಎಂದು ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಪ್ರೊ ಎಸ್ ಬಿ ರಂಗನಾಥ್  ಮಾತನಾಡಿದರು.ನಗರದ ದಾವಣಗೆರೆಯ ಕನ್ನಡ ಭವನದಲ್ಲಿ ಏರ್ಪಡಿಸಿದ ಸಿರಿಗೆರೆಯ ಬಿ ಲಿಂಗಯ್ಯ ವಸತಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಹಿರಿಯ ವಿದ್ಯಾರ್ಥಿಗಳು ಆಯೋಜಿಸಿದ್ದ ಗುರುವಂದನಾ ಸಮಾರಂಭ ಕುರಿತು ನುಡಿದರು. ಸಿರಿಗೆರೆ ಶರಣರು ನಡೆದಾಡಿದ ಪಾವನ ಕ್ಷೇತ್ರ. ಇಲ್ಲಿನ ಪರಮಪೂಜ್ಯರ ದೂರದರ್ಶಿತ್ವದ ಕಲಾ,ವಿಜ್ಞಾನ ಸಂಗೀತ ಮೇಳಯಿಸಿದ ದೂರದಶಿ೯ತ್ವದ ಶಿಕ್ಷಣದ ಪರಿಣಾಮ  ಇಲ್ಲಿ ಓದಿದ ಎಲ್ಲ ವಿದ್ಯಾರ್ಥಿಗಳು ಸ್ಪೂರ್ತಿ ಪಡೆದು ಉತ್ತಮ ಸಂಸ್ಕಾರ ರೂಢಿಸಿಕೊಂಡು ದೇಶ ವಿದೇಶಗಳೆಡೆಯಲ್ಲಿ ಜೀವನ ರೂಪಿಸಿಕೊಂಡಿದ್ದಾರೆ.ನೀವೆಲ್ಲರು ಬೆಳಕಿನ ಬೀಜಗಳು. ಎಲ್ಲರೂ ಸಮಾಜಕ್ಕೆ ದಿವ್ಯ ಮಾರ್ಗದರ್ಶನ ನೀಡುವರಾಗಿದ್ದೀರಿ. ನಿಮಗೆಲ್ಲರಿಗೂ ನಿಮ್ಮ ಜೀವನ  ಸಂತೋಷ ತೃಪ್ತಿ ತಂದಿದೆಯೆಂದರು.ಗುರುವಂದನ ಸನ್ಮಾನ ಸ್ವೀಕರಿಸಿದ ಅಧ್ಯಾಪಕರು ಹಾಗೂ ವಿದ್ಯಾರ್ಥಿಯ ನಿಲಯದ ನಿಲಯ ಪಾಲಕರಾಗಿದ್ದ ಎಸ್ ರೇವಣಸಿದ್ದಯ್ಯನವರು ಮಾತನಾಡಿ ವಿದ್ಯಾರ್ಥಿಗಳಲ್ಲಿ ಶಿಸ್ತು, ನಿಯಮ ಪಾಲನೆ, ಸಮಯ ಪರಿಪಾಲನೆ, ಹಲವು ಕೊರತೆಗಳ ನಡುವೆ ಜೀವನವನ್ನು ಸಮತೋಲನವಾಗಿ ಸ್ವೀಕರಿಸುವ ಶಿಕ್ಷಣವನ್ನು ನೀಡಿದ್ದೇವೆ. ಇದರ ಫಲವಾಗಿಯೇ ಇಂದು ನೀವೆಲ್ಲರೂ ಸಮಾಜದಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸಿದ್ದೀರಿ. ಸಮಾಜದಲ್ಲಿ ಯಶಸ್ಸು ಮತ್ತು ಕೀರ್ತಿಯನ್ನು ಹೊಂದಿದ್ದೀರಿ. ನೀವು ತೋರಿದ ಗುರುವಂದನೆ ಸಮಾಜದಲ್ಲಿ ಉಳಿಸ ಬಹುದಾದ ಕೃತಜ್ಞತಾ ಮೌಲ್ಯವನ್ನು ಜೀವಂತವಾಗಿರಿಸಿದ್ದೀರಿ ಎಂದು ನುಡಿದರು.ಮತ್ತೊರ್ವ ಸನ್ಮಾನಿತರಾದ ಕೆ  ಹಾಲಪ್ಪ ಅವರು ಮಾತನಾಡಿ ಗುರುವಂದನೆ ಗುರು ಶಿಷ್ಯರು ಪರಸ್ಪರ ಸಿಹಿ ಕಹಿಗಳನ್ನ ಹಂಚಿಕೊಳ್ಳುವ ಶುಭ ಸಂದರ್ಭ. ನಿಮ್ಮ ಸನ್ಮಾನ ನಮ್ಮ ಆಯುಷ್ಯ ಆರೋಗ್ಯವನ್ನು ವೃದ್ದಿಸಿದಂತಾಗಿದೆ. ಗುರುವಗ೯ ನಿಮಗೆ ಆಭಾರಿಯಾಗಿದೆ. ಗುರುವಿಗೆ ಸ್ಥಾನವನ್ನು ತಂದು ಕೊಟ್ಟ ರಾಷ್ಟ್ರಪತಿ ಎಸ್ ರಾಧಾಕೃಷ್ಣನ್ ಅವರನ್ನು ಸ್ಮರಿಸಿದ್ದರು.ಸನ್ಮಾನ ಸ್ವೀಕರಿಸಿದ ಎನ್ ಜಯಪ್ಪ, ಟಿ ಎಂ ಪರಮೇಶ್ವಯ್ಯ, ಎಚ್ಎಸ್ ಪಾಟೀಲ್, ಆರ್ ಸಿ ಕೃಷ್ಣಮೂತಿ೯ ಶೆಟ್ಟಿ, ಸಿ ಶಿವಾನಂದಪ್ಪವರು ಮಾತನಾಡಿದರು.

ಹಿರಿಯ ವಿದ್ಯಾರ್ಥಿಗಳಲ್ಲಿ ಕಡ್ಲೆಬಾಳ್ ಸಿದ್ದೇಶ್, ಡಾ.ಸಿ ಎಲ್ ಶಿವಮೂರ್ತಿ, ಡಾ.ಶ್ರೀನಿವಾಸ್, ಯಶಸ್ವಿನಿ ಹೆಗಡೆ, ಕಿರಣ್ ಕುಮಾರ್ ಸಜ್ಜನ್  ಅವರು ಅಂದಿನ ವಿದ್ಯಾರ್ಥಿ ಜೀವನದ  ಸವಿನೆನಪುಗಳನ್ನು ಮೆಲುಕು ಹಾಕಿದರು.

ಕಾರ್ಯಕ್ರಮದಲ್ಲಿ ಕೊನೆಗೆ ಸಾಂಸ್ಕೃತಿಕ  ಕಾರ್ಯಕ್ರಮ ಜರುಗಿತು.

ಜಿ ಎನ್ ವಿಜಯ್ ಕುಮಾರ್ ಸ್ವಾಗತಿಸಿದರು, ಪ್ರಾಸ್ತಾವಿಕ ನುಡಿ ಶಿವಕುಮಾರ್ ಬಂದೋಜಿ,  ಕುಮಾರ ವಂದಿಸಿದರು. ಎನ್ ಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು.