ಮನಸ್ವಿನಿ ಶಾಲೆಯಲ್ಲಿ ರಾಜ್ಯೋತ್ಸವ ಆಚರಣೆ

ಕಲಬುರಗಿ,ನ.2: ನಗರದ ಗುಬ್ಬಿ ಕಾಲೋನಿಯಲ್ಲಿರುವ ಮನಸ್ವಿನಿ ಬುಧ್ಧಿಮಾಂದ್ಯ ವಿಶೇಷ ಮಕ್ಕಳ ಶಾಲೆಯಲ್ಲಿ 68ನೇ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಧ್ವಜಾರೋಹಣ ಮಾಡಲಾಯಿತು.
ಶಾಲೆಯ ಆವರಣದಲ್ಲಿ ರಂಗೋಲಿ ಬಿಡಿಸಿದ್ದಲ್ಲದೆ ತಾಯಿ ಭುವನೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಶಾಲಾ ಶಿಕ್ಷಣ ಇಲಾಖೆಯ ವಿಷಯ ಪರಿವೀಕ್ಷಕ ನಾಗೇಂದ್ರಪ್ಪ ಅವರಾದಿ, ಓಕಳಿ ವ್ಯಕ್ತಿತ್ವ ವಿಕಾಸ ಸಂಸ್ಥೆಯ ಕಾರ್ಯದರ್ಶಿ ಜಯರಾಜ ಪಾಟೀಲ, ರೋಟರಿ ಕ್ಲಬ್ ಸದಸ್ಯ ಸಿದ್ದಲಿಂಗಪ್ಪ ಹತ್ತಿ, ಇಂದುಮತಿ ಚಾರಿಟೇಬಲ್ ಸಂಸ್ಥೆಯ ಅಧ್ಯಕ್ಷ ರಮೇಶ ಹತ್ತಿ, ಕಾರ್ಯದರ್ಶಿ ಸುರೇಶ ಹತ್ತಿ, ಖಜಾಂಚಿ ರಕ್ಷಿತ್ ಹತ್ತಿ, ಟ್ರಸ್ಟಿ ರಿತೇಶ್ ಹತ್ತಿ, ರೇಣುಕಾ ಹತ್ತಿ, ಶಾಲೆ ಮುಖ್ಯಗುರು ಆಶಾ ನಿಪ್ಪಾಣಿ, ಶಿಕ್ಷಕ ವೃಂದದವರು, ಸೇವಾ ವೃಂದದವರು, ಮಕ್ಕಳು, ಪೆÇೀಷಕರು ಭಾಗವಹಿಸಿದ್ದರು.