ಕಲಬುರಗಿ,ಮಾ 31: ಶ್ರೀ ಗುರು ಪುಟ್ಟರಾಜ ಸಂಗೀತ ಪ್ರತಿಷ್ಠಾನವು ಅಫಜಲಪುರ ನಗರದಲ್ಲಿ ಗುರುವಾರ, ಗಾನಯೋಗಿ ಶಿವಯೋಗಿ ಡಾ.ಪಂಡಿತ ಪುಟ್ಟರಾಜ ಕವಿ ಗವಾಯಿಗಳವರ 109 ನೆ ಜಯಂತೋತ್ಸವ ಹಾಗೂ ಸ್ವರಸಾಧನಾ ಸಂಗೀತ ಪಾಠ ಶಾಲೆಯ ವಾರ್ಷಿಕೋತ್ಸವ ಹಮ್ಮಿಕೊಂಡಿತು.
ಕಾರ್ಯಕ್ರಮದ ವೇದಿಕೆಯಲ್ಲಿ ಹಿಂದೂಸ್ತಾನಿ ಖ್ಯಾತ ಗಾಯಕ ಹನುಮಂತರಾವ್ ಮಳ್ಳಿ ಅವರಿಂದ ಮೂಡಿಬಂದ ಶುದ್ಧ ಸಾರಂಗರಾಗದ ವಿಲಂಬಿತ ಏಕತಾಲದಲ್ಲಿ ಜಾರೇಖಗವಾ ಹಾಗೂ ದೃತ್ ತೀನ್‍ತಾಲದಲ್ಲಿ ಪಪಿಯಾಲಜಾ ಪಿಯ ಖೆಲಿಯೇ ಗಾಯನ ಸಭಿಕರ ಮನಸೂರೆಗೊಂಡಿತು. ಕಾಯೈ ಗುರುವರನೆ ನೀ ಕಾಯೈ ಗುರುವರನೆ ಎಂಬ ವಚನ ಮತ್ತು ಪುರಂದರ ದಾಸರ ಕೀರ್ತನೆಯನ್ನು ಅವರು ಈ ಸಂದರ್ಭದಲ್ಲಿ ಹಾಡಿದರು. ಇವರಿಗೆ ಹಾರ್ಮೋನಿಯಂ ಚನ್ನವೀರ ಚೌಡಪೂರ, ಸಂತೋಷ್ ನಂದರ್ಗಿ ಹಾಗೂ ಸಂತೋಷಕುಮಾರ್ ಕೊಡ್ಲಾ ಅವರು ತಬಲಾ ಸಾಥ್ ನೀಡಿದರು.