ಮನಸೂರೆಗೊಳಿಸಿದ ಶಾಸ್ತ್ರೀಯ, ಸುಗಮ ಸಂಗೀತ

ಹುಬ್ಬಳ್ಳಿ, ಜ 1: ಶ್ರೀ ದತ್ತ ಜಯಂತಿ ನಿಮಿತ್ತ ಭೂಮಿ ವೆಲ್ಫೇರ ಸೊಸೈಟಿ (ರಿ) ಹುಬ್ಬಳ್ಳಿ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಧಾರವಾಡ ಸಹಯೋಗದೊಂದಿಗೆ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಮತ್ತು ಸುಗಮ ಸಂಗೀತ ಕಾರ್ಯಕ್ರಮವನ್ನು ಮೂರುಸಾವಿರ ಮಠದ ಹಿಂದಿರುವ ಶ್ರೀ ಗುರು ದತ್ತ ಮಂದಿರದಲ್ಲಿ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹ.ಬ.ಪ ಮಾನೆ ಮಹಾರಾಜ ಅವರು ಉದ್ಘಾಟನೆಯನ್ನು ನೆರವೇರಿಸಿದರು. ಶ್ರೀ ದತ್ತ ಸಮೀತಿ ಅಧ್ಯಕ್ಷರಾದ ಸಂಜಯ ಪಿ. ಸಾಟೆ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ರುಕ್ಮಿಣಿ ವಲ್ಲಬದಾಸ ಗೋಸ್ವಾಮಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಆಕಾಶವಾಣಿ ಕಲಾವಿದರಾದ ಶ್ರೀಕಾಂತ ಬಾಕಳೆ ರಾಗ-ಯಮನದಲ್ಲಿ ಖಯಾಲ ವಿಲಂಬಿತದಲ್ಲಿ ಮೇರೂ ಮನ ಭಾ'' ತ್ರಿಕಾಲದಲ್ಲಿಏರಿ ಆಲಿ ಪಿಯಾಬಿನ ಸಖಿ” ಬಂದಿಶಗಳನ್ನು ಸಾದರಪಡಿಸಿ ಪ್ರೇಕ್ಷಕರ ಮನಸೂರೆಗೊಳಿಸಿದರು. ಇವರಿಗೆ ಹಾರ್ಮೋನಿಯಂದಲ್ಲಿ ಎ.ಎಮ್. ಹಿರೆಮಠ, ತಬಲಾದಲ್ಲಿ ನಾಗರಾಜ ಪಿಳ್ಳೆ ಸಾಥ್ ನೀಡಿದರು.
ನಂತರ ನಡೆದ ಸುಗಮ ಸಂಗೀತ ಕಾರ್ಯಕ್ರಮದಲ್ಲಿ ಗಾಯಕಿ ಗಾಯತ್ರಿ ಎಸ್. ಬಾಕಳೆ ಇವರು ಪುರಂದರ ದಾಸರ, ಕನಕ ದಾಸರ, ದತ್ತಾತ್ರೇಯ ಗುರುಗಳ ಹಾಗೂ ಭಕ್ತಿಗೀಗೆಗಳನ್ನು ಸಾದರಪಡಿಸಿ ಪ್ರೇಕ್ಷಕರ ಮನಸೆಳೆದರು. ಇವರಿಗೆ ಹಾರ್ಮೋನಿಯಂದಲ್ಲಿ ಶ್ರೀಕಾಂತ ಬಾಕಳೆ, ತಬಲಾದಲ್ಲಿ ಪ್ರಮೋದ ಟಿಕಾರೆ ಸಾಥ್ ನೀಡಿದರು.