
ಲಕ್ಷ್ಮೇಶ್ವರ,ಮೇ9: ಮೇ 10 ರಂದು ಜರುಗಲಿರುವ ಪ್ರಜಾಪ್ರಭುತ್ವದ ಹಬ್ಬದಲ್ಲಿ ಎಲ್ಲರೂ ಪಾಲ್ಗೊಂಡು ತಮ್ಮ ಪವಿತ್ರವಾದ ಮತದಾನದ ಹಕ್ಕನ್ನು ಚಲಾಯಿಸಬೇಕೆಂದು ಲಕ್ಷ್ಮೇಶ್ವರ ತಾಲೂಕ ಗ್ರಾಮ ಪಂಚಾಯತಿ ನೌಕರರ ಸಂಘದ ಅಧ್ಯಕ್ಷರಾದ ಬಸವರಾಜ್ ಅರ್ಕಸಾಲಿ ಮನವಿ ಮಾಡಿದ್ದಾರೆ.
12 ವರ್ಷಕ್ಕೊಮ್ಮೆ ಜರುಗುವ ಮಸ್ತಕಾಭಿಷೇಕ, ಜಾತ್ರಾ ಮಹೋತ್ಸವಗಳು ಜರುಗುವಂತೆ ಪ್ರತಿ ಐದು ವರ್ಷಕ್ಕೊಮ್ಮೆ ಜರುಗುವ ಪ್ರಜಾಪ್ರಭುತ್ವದ ಹಬ್ಬದಲ್ಲಿ ಉತ್ಸಾಹ ಸಡಗರದಿಂದ ಪಾಲ್ಗೊಂಡು ಅತ್ಯಂತ ಯಶಸ್ವಿಯಾಗಿ ಜರುಗಲು ಎಲ್ಲರೂ ಕಡ್ಡಾಯವಾಗಿ ಮತ ಚಲಾಯಿಸುವಂತೆ ತಿಳಿಸಿರುವ ಅವರು ಗ್ರಾಮ ಪಂಚಾಯಿತಿ ಸಿಬ್ಬಂದಿ ಕುಟುಂಬದ ಎಲ್ಲಾ ಅರ್ಹ ಮತದಾರರು ಯಾವುದೇ ನೆಪ ಹೇಳದೆ ಕಡ್ಡಾಯವಾಗಿ ಮತದಾನ ಮಾಡುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ ಮಾಡಿದ್ದಾರೆ.