ಮನವಿಗೆ ಸ್ಪಂದಿಸಿದ ಗುವಿವಿ ಕುಲಪತಿ ಅಗಸರ

ಕಲಬುರಗಿ,ಏ.11- ಜಿಲ್ಲೆಯ ಕಾಳಗಿ ತಾಲೂಕಿನ ಟೇಂಗಳಿ ಗ್ರಾಮದ ಅವತಾರಿ ಹಾಗೂ ಪವಾಡ ಪುರುಷ ಶ್ರೀ ಭೀಮೇಶ್ವರ ದೇವರು ಕ್ರಿ. ಶ. 1850, ಅಂದರೆ ಸುಮಾರ 150 ವರ್ಷಗಳ ಹಿಂದೆ ಅನೇಕ ಅವತಾರ ತಾಳಿ ಪವಾಡಗಳನ್ನು ಸೃಷ್ಟಿ ಮಾಡಿ ಲಿಂಗೈಕ್ಯರಾದ ಶ್ರೀ ಭೀಮೇಶ್ವರ ಜೀವನ ಚರಿತ್ರೆ ಕುರಿತು ಪುಸ್ತಕ (ಕೃತಿ) ಗುಲಬರ್ಗಾ ವಿಶ್ವವಿದ್ಯಾಲಯ ಪ್ರಸಾರಾಂಗದ ಮೂಲಕ ಪ್ರಟಿಸುಮಂತೆ ಮಾಡಿದ ಮನವಿಗೆ ಕುಲಪತಿಗಳು ಸ್ಪಂಧಿಸಿದ್ದಾರೆ.
ಟೆಂಗಳಿ ಗ್ರಾಮದ ಭೀಮೇಶ್ವರ ದೇವಸ್ಥಾನ ಟ್ರಸ್ಟ್ ವತಿಯಿಂದ ಆಗಿನ ಕುಲಪತಿಗಳಿಗೆ ಮನವಿ ಸಲ್ಲಿಸಿದ್ದು ಈಗ ನೂತನ ಕುಲಪತಿ ಡಾ.ದಯಾನಂದ ಅಗಸರ ಅವರು ಸ್ಪಂಧಿಸಿದ್ದಾರೆ, ಅವರಿಗೆ ಹೂಗುಚ್ಛ ನೀಡಿ ಅಭಿನಂದಿಸಲಾಯಿತು.
ಎರಡು ತಿಂಗಳ ಹಿಂದೆ ಕೊಟ್ಟ ಟೆಂಗಳಿ ಗ್ರಾಮದ ಶ್ರೀ ಭೀವೇಶ್ವರ ದೇವರ ಜೀವನ ಚರಿತ್ರೆ ತಮ್ಮ ವಿಶ್ವವಿದ್ಯಾಲಯದಿಂದ ಪ್ರಕಟಿಸಲು ಬೇಗನೆ ಕ್ರಮಕೈಗೊಳ್ಳಬೇಕೆಂದು ಕುಲಪತಿಗಳಿಗೆ ಮನವಿ ಸಲ್ಲಿಸಲು ಹೋದಾಗ ಈಗಾಗಲೇ ನಿಮ್ಮ ಫೈಲು ಪ್ರಸಾರಾಂಗಕ್ಕೆ ಸಲಹಾ ಮಂಡಳಿ ಅನುಮತಿಗಾಗಿ ಹಾಗು ಇತಿಹಾಸ ತಜ್ಞರ ಜೊತೆ ಚರ್ಚಿಸಲು ಕಳುಹಿಸಲಾಗಿದೆ ಎಂದು ಕುಲಪತಿಗಳು ತಿಳಿಸಿದ್ದಾರೆ. ಅದೇ ರೀತಿ ಪ್ರಸಾರಾಂಗದ ನಿರ್ದೇಶಕರಾದ ಡಾ. ಎಚ್.ಟಿ.ಪೋತೆ ಅವರು ಬೇಗನೆ ನಿಮ್ಮ ಊರಿನ ಭೀಮೇಶ್ವರ ದೇವರ ಚರಿತ್ರೆ ಪ್ರಕಟಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ
ಕುಲಪತಿಗಳು ತಮ್ಮ ಬಿಡುವಿಲ್ಲದ ಕೆಲಸದ ಮದ್ಯದಲ್ಲಿಯೂ ನಮ್ಮ ಮನವಿಗೆ ಸ್ಪಂದಿಸಿದ್ದಾರೆಂದು ಹೇಳಲು ಸಂತೋಷವೆನಿಸುತ್ತದೆ ಎಂದು ಭೀಮೇಶ್ವರ ಟ್ರಸ್ಟ್ ಆಡಳಿತ ಮಂಡಳಿ ಸದಸ್ಯರಾದ ಶಿವರಾಜ ಅಂಡಗಿ ತಿಳಿಸಿದ್ದಾರೆ.
ಸದರಿ ಭೀವೇಶ್ವರ ಕುರಿತು ದಿ. ಭೀಮರಾವ ಮಾಸ್ಟರ್ (ಸೆಕ್ರಟರಿ) ಬುಳ್ಳಾ ಅವರು 2009ನೇ ಸಾಲಿನಲ್ಲಿ ಭಿಮೇಶ್ವರ ಕುರಿತು ನಾಟಕ ರೂಪದಲ್ಲಿ ಪುಸ್ತಕ ಬರೆದಿದ್ದಾರೆ. ಜೊತೆಗೆ ಟೆಂಗಳಿ ಲೇಖಕರಾದ (ನಾಟಕಕಾರರಾದ) ಎ.ಬಿ. ಮಠಪತಿ ಯವರು ಭೀಮೇಶ್ವರ ಟೆಂಗಳಿಯ ಪವಾಡ ಪುರುಷ ಎಂಬ ಹೆಸರಿನಡಿಯಲ್ಲಿ 108 ನಾಮಾವಳಿ ರಚಿಸಿದ್ದಾರೆ. ಅದರಲ್ಲಿಯೂ ಸ್ವಲ್ಪ ಮಾಹಿತಿ ಭೀಮೇಶ್ವರ ಕುರಿತು ಮಾಹಿತಿ ಒಳಗೊಂಡಿದೆ. ಅಲ್ಲದೇ ಸದರಿ ಸ್ಥಾನವು 12ನೇ ಶತಮಾನದಿಂದ ಕಲ್ಯಾಣ ಚಾಲುಕ್ಯರ ಒಳಗೊಂಡು ಅಶ್ವತ್ಥ ನಾರಾಯಣ ವೃಕ್ಷ, ನಾದ ಬ್ರಹ್ಮನ ದೇವಸ್ಥಾನ, ಪ್ರಾಚ್ಯ ವಸ್ತು ಸಂಗ್ರಹಾಲಯ, ಅನೇಕ ಶಿಲಾಶಾಸನ ಈ ರೀತಿ ಗ್ರಾಮದಲ್ಲಿ ಅನೇಕ ಪುರಾತನ ದೇವಸ್ಥಾನಗಳನ್ನು ಕಾಣಬಹುದಾಗಿದೆ ಇದೆಲ್ಲವನ್ನೂ ಒಳಗೊಂಡ ಕೃತಿ ಇದಾಗಿದೆ. ಎಂದು ಮನವಿಯಲ್ಲಿ ವಿವರಿಸಲಾಗಿದೆ ಎಂದು ಶಿವರಾಜ ಅಂಡಗಿ
ಅವರು ತಿಳಿಸಿದ್ದಾರೆ.