ಮನರಂಜಿಸಿದ  ತ್ಯಾಗಿ ನಾಟಕ


(ಸಂಜೆವಾಣಿ ವಾರ್ತೆ)
ಬಳ್ಳಾರಿ:ಅ,1- ನಗರದ ರಾಘವ ಮೆಮೋರಿಯಲ್ ಅಸೋಸಿಯೇಷನ್ ಸಂಸ್ಥೆಯ ಅಮೃತ ಮಹೋತ್ಸವದ  ಅಂಗವಾಗಿ ಇಲ್ಲಿನ ರಾಘವ ಕಲಾ ಮಂದಿರದಲ್ಲಿ ನಿನ್ನೆ ಸಂಜೆ ಪ್ರದರ್ಶನಗೊಂಡ ತ್ಯಾಗಿ ನಾಟಕ  ಪ್ರೇಕ್ಷಕರನ್ನು ಮನರಂಜಿಸಿತು.
ರಾಘವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ಪ್ರದರ್ಶನಕ್ಕೆ ಚಾಲನೆ ನೀಡಲಾಯಿತು. ಸಂಸ್ಥೆಯ ಗೌರವ ಕಾರ್ಯದರ್ಶಿ ಎನ್. ಪ್ರಕಾಶ್ ಮಾತನಾಡಿ, ಸಂಸ್ಥೆ 75 ವರ್ಷಗಳ ಕಾಲ ಬೆಳೆದು ಬಂದ ದಾರಿಯನ್ನು ಸ್ಮರಿಸಿದರು.ಇಂದಿನಿಂದ ನಾಲ್ಕು ದಿನಗಳ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಲ್ಲರೂ ಆಗಮಿಸಿ ಯಶಸ್ವಿಗೊಳಿಸಬೇಕೆಂದರು.
ಡ್ರೀಮ್ ವರ್ಲ್ಡ್ ಶಾಲೆಯಲ್ಲಿ ಆರನೇ ತರಗತಿಯಲ್ಲಿ ವಿದ್ಯಾಬ್ಯಾಸ ಮಾಡುತ್ತಿರುವ ಕುಮಾರ್ ನಯನ ಭೂಷಣ ಬಳ್ಳಾರಿ ರಾಘವರ ಬಗ್ಗೆ ಭಾಷಣ ಮಾಡಿ ಜನರ ಮೆಚ್ಚುಗೆ ಪಡೆದರು.
ಎನ್ ಬಸವರಾಜ್ ಮತ್ತು ತಂಡದಿಂದ ಸುಗಮ ಸಂಗೀತ ಪ್ರದರ್ಶನ ಮಾಡಲಾಯಿತು. ಹಾರ್ಮೋನಿಯಂ  ದೊಡ್ಡ ಬಸವ ಗವಾಯಿ, ತಬಲ ಯೋಗೀಶ್ ಸಂಗನಕಲ್ಲು ಸಾಥ್ ನೀಡಿದರು. ತದನಂತರ ನಗರದ ಮಯೂರ ಕಲಾ ಸಂಘ  ತ್ಯಾಗಿ  ನಾಟಕ  ಪ್ರದರ್ಶನ ನೀಡಿದರು.
ಸಂಸ್ಥೆಯ ಗೌರವಾಧ್ಯಕ್ಷ  ಕೆ. ಚನ್ನಪ್ಪ ಅಧ್ಯಕ್ಷ ಕೆ. ಕೋಟೇಶ್ವರ ರಾವ್, ಉಪಾಧ್ಯಕ್ಷರುಗಳಾದ  ರಮೇಶ್ ಗೌಡ ಪಾಟೀಲ್,  ಹೆಚ್. ವಿಷ್ಣುವರ್ಧನ್ ರೆಡ್ಡಿ, ಖಜಾಂಚಿ  ಪಿ. ಧನಂಜಯ, ಜಂಟಿ ಕಾರ್ಯದರ್ಶಿ  ಎಂ ರಾಮಾಂಜನೇಯಲು, ಡಾಕ್ಟರ್ ಡಿ. ಎಲ್. ರಮೇಶ್ ಗೋಪಾಲ್, ಕೆ ಕೃಷ್ಣ, ಕೆ ಶ್ಯಾಮ ಸುಂದರ, ಬಿ ಎಂ ಬಸವರಾಜ್,ವಿ ರಾಮಚಂದ್ರ, ಜಿ ಪ್ರಭಾಕರ,ಗಾದೆಂ ಗೋಪಾಲ್ ಕೃಷ್ಣ ,ಜಿ ಆರ್ ವೆಂಕಟೇಶಲು, ರಮಣಪ್ಪ ಭಜಂತ್ರಿ ಹಾಗೂ ಕಲಾವಿದರು ಭಾಗವಹಿಸಿದ್ದರು.

One attachment • Scanned by Gmail