ಮನರಂಜನೆಗೆ ಮನಸ್ಸು ಉಲ್ಲಾಸ: ಶಂಕರ ಮಾರಿಹಾಳ

ಸಂಜೆವಾಣಿ ವಾರ್ತೆ,
ವಿಜಯಪುರ, ಮಾ.27: ಮನರಂಜನೆಗೆ ಮನಸ್ಸು ಉಲ್ಲಾಸ, ಉತ್ಸಾಹಕ್ಕೆ ಸ್ಫೂರ್ತಿ ತುಂಬುವ ಇಂದಿನ ಮನರಂಜನೆ ತುಂಬ ಉಪಯುಕ್ತವಾಗಿವೆ ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿμÁ್ಠಧಿಕಾರಿ ಶಂಕರ ಮಾರಿಹಾಳ ಅಭಿಪ್ರಾಯಪಟ್ಟರು.
ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಜರುಗಿದ ಜಿಲ್ಲಾ 19ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮನರಂಜನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕುಟುಂಬದ ಎಲ್ಲ ಸದಸ್ಯರು ಕೂಡಿಕೊಂಡು ಮನರಂಜನೆ ಆಲಿಸುವಂತಾಗಬೇಕು. ಮನರಂಜನೆ ತನ್ನ ನೈಜ ಜೀವನದ ಮೌಲ್ಯಯುತವಾದ ಪ್ರತಿಭೆಯಿಂದ ಕೂಡಿರಬೇಕು. ಕಲೆ, ಸಂಸ್ಕøತಿ, ಮನರಂಜನೆ ಸಾಹಿತ್ಯದ ಮಹತ್ವ ಸಾರುತ್ತವೆ ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ ವಿಶ್ರಾಂತ ಡಿ.ಎಸ್.ಪಿ ಬಸವರಾಜ ಚೌಕಿಮಠ ಮಾತನಾಡಿ, ಭರತನಾಟ್ಯ, ಲಾವಣಿ ಹಾಡು. ಕುಚಪುಡಿ. ಸಂಗೀತ, ಭಜನೆ. ಗೀಗಿಪದ. ಯಕ್ಷಗಾನ ಮುಂತಾದ ಕಲೆಗಳು ಇಂದಿಗೂ ಕರ್ನಾಟಕದಲ್ಲಿ ಪ್ರಮುಖವಾಗಿವೆ ಎಂದರು.
ದಿವ್ಯಾ ಹಾಗೂ ದೀಕ್ಷಾ ಭಿಸೆ ಸಹೋದರಿಯರು ವೈವಿಧ್ಯಮಯ ಜಾನಪದ ನೃತ್ಯ ಪ್ರದರ್ಶನ ನೀಡಿದರು. ಲಕ್ಷ್ಮಿ ತೇರದಾಳಮಠ ತಂಡ ವಿವಿಧ ಕನ್ನಡ ಗೀತಗಾಯನಕ್ಕೆ ನೃತ್ಯ ರೂಪಕ ಪ್ರದರ್ಶಿಸಿದರು.
ಸÀರ್ವಾಧ್ಯಕ್ಷ ಡಾ. ವಿ.ಡಿ. ಐಹೊಳ್ಳಿ. ವಿಜಯಕುಮಾರ ಘಾಟಗೆ. ರಾಜೇಸಾಬ ಶಿವನಗುತ್ತಿ, ಅರ್ಜುನ ಶಿರೂರ. ಅಲ್ಲಮಪ್ರಭು ಮಲ್ಲಿಕಾರ್ಜುನಮಠ. ಅಶೋಕ ಅಲ್ಲಾಪೂರ. ಡಾ. ವಿಜಯಲಕ್ಷ್ಮಿ ಪವಾರ, ಅಂಬಿಕಾ ಕರಕಪ್ಪಗೋಳ, ಶ್ರೀಕಾಂತ ಪಾರಗೊಂಡ. ಸಾವಿತ್ರಿ ತಳವಾರ ವೇದಿಕೆಯ ಮೇಲಿದ್ದರು.
ಭಾರತಿ ಪಾಟೀಲ, ಹಾಸಿಂಪೀರ ವಾಲಿಕಾರ, ಡಾ. ಸಂಗಮೇಶ ಮೇತ್ರಿ, ಡಾ. ಮಾಧವ ಗುಡಿ, ಪೆÇ್ರ. ಸುಭಾಶ್ಚಂದ್ರ ಕನ್ನೂರ, ಅಭಿμÉೀಕ ಚಕ್ರವರ್ತಿ, ಮಹಮ್ಮದಗೌಸ ಹವಾಲ್ದಾರ, ಕಮಲಾ ಮುರಾಳ, ರವಿ ಕಿತ್ತೂರ, ಸುಖದೇವಿ ಅಲಬಾಳಮಠ. ವಿದ್ಯಾವತಿ ಅಂಕಲಗಿ. ಸುರೇಶ ಜತ್ತಿ, ಮನೋಹರ ಮೇಟಿ, ಆಶಾ ಬಿರಾದಾರ, ಎಸ್.ಎಲ್. ಇಂಗಳೇಶ್ವರ, ದಿಲಾವರ ಖಾಜಿ, ಹುಸೇನ ಬಾಗಾಯತ, ಶಾರದಾ ನಾಯಕ. ಮುಂತಾದವರು ಉಪಸ್ಥಿತರಿದ್ದರು.