ಮನಪಾ ವಾರ್ಡ್ 20 ರಲ್ಲಿ ಬಿಜೆಪಿ ಪ್ರಚಾರ

ದಾವಣಗೆರೆ.ಮಾ.೨೪; ಮಹಾನಗರ ಪಾಲಿಕೆಯ ಉಪ ಚುನಾವಣೆಯ ನಿಮಿತ್ತ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಭಾರತೀಯ ಜನತಾ ಪಾರ್ಟಿಯ ವಾರ್ಡ್ ನಂಬರ್ 20ರ ಅಭ್ಯರ್ಥಿಯಾದ ಶ್ರೀಮತಿ ರೇಣುಕಾ ಎಂ ಕೃಷ್ಣ ರವರ ಪರವಾಗಿ ಭಾರತ್ ಕಾಲೋನಿಯ ಸುತ್ತಮುತ್ತ ಪ್ರದೇಶಗಳಲ್ಲಿ ಬಿರುಸಿನ ಪ್ರಚಾರ ಮಾಡಲಾಯಿತು. ಪ್ರತಿ ಮನೆ ಮನೆಗೆ ತೆರಳಿ ಮತಯಾಚನೆ ಮಾಡಲಾಯಿತು. ಈ ಸಂದರ್ಭದಲ್ಲಿ ಭಾಗದ ಹಿರಿಯ ಮುಖಂಡರು,  ಮಾಜಿ ಜಿಲ್ಲಾ ಅಧ್ಯಕ್ಷರಾದ   ಯಶವಂತರಾವ್ ಜಾದವ್, ದೂಡಾ ಅಧ್ಯಕ್ಷರಾದ  ರಾಜನಹಳ್ಳಿ  ಶಿವಕುಮಾರ್, ಹಿರಿಯ ಮುಖಂಡರು  ದೇವರಮನೆ ಶಿವಕುಮಾರ್ , ಜಿಲ್ಲಾ ಪ್ರಧಾನ ಕಾರ್ಯದರ್ಶಿ  ಜಗದೀಶ್, ಜಿಲ್ಲಾ ಉಪಾಧ್ಯಕ್ಷರಾದ ಶ್ರೀನಿವಾಸ ದಾಸ್ ಕರಿಯಪ್ಪನವರು,  ಮಂಡಲದ ಅಧ್ಯಕ್ಷರಾದ ಆನಂದರಾವ್ ಶಿಂದೆ ,  ದೂಡಾ ಸದಸ್ಯರಾದ ಶ್ರೀಮತಿ ದೇವಿರಮ್ಮ , ಮಹಾನಗರಪಾಲಿಕೆ ಸದಸ್ಯರುಗಳಾದ ಸೋಗಿ ಶಾಂತಕುಮಾರ್ ,  ಗೋಣೆಪ್ಪನವರು, ಸೌಮ್ಯ ನರೇಂದ್ರ ಕುಮಾರ್ , ಗಾಯಿತ್ರಮ್ಮ, ಶಿವಪ್ರಕಾಶ್ , ರಾಕೇಶ್ , ಶಿವನಗೌಡ ಪಾಟೀಲ್ , ತರಕಾರಿ ಶಿವಣ್ಣ ಇತರರಿದ್ದರು.