ಮನಪಾಗೆ ಆಂಬ್ಯುಲೆನ್ಸ್‌ ಹಸ್ತಾಂತರ

ಮಂಗಳೂರು, ಎ.2೭- ಸರಕಾರದ ಅಧೀನ ಸಂಸ್ಥೆಯಾದ ಕೆಐಒಸಿಎಲ್ ಕೋವಿಡ್ ಸಂದರ್ಭದ ತುರ್ತು ಸೇವೆಗಾಗಿ ಹೊರಗುತ್ತಿಗೆ ಸಂಸ್ಥೆಯೊಂದ ರಿಂದ ಒಂದು ತಿಂಗಳ ಮಟ್ಟಿಗೆ ಪಡೆದ ಆ್ಯಂಬುಲೆನ್ಸನ್ನು ಬಾಡಿಗೆಗೆ ಪಡೆದು ಮಂಗಳೂರು ಮಹಾನಗರ ಪಾಲಿಕೆಗೆ ಸೋಮವಾರ ಹಸ್ತಾಂತರಿಸಿತು.

ಈ ಸಂದರ್ಭ ಮೇಯರ್ ಪ್ರೇಮಾನಂದ ಶೆಟ್ಟಿ, ಮನಪಾ ಆಯುಕ್ತ ಅಕ್ಷಯ್ ಶ್ರೀಧರ್ ಮತ್ತಿತರರು ಉಪಸ್ಥಿತರಿದ್ದರು. ಆ್ಯಂಬುಲೆನ್ಸ್, ಅದಕ್ಕೆ ಬೇಕಾದ ಇಂಧನ ಮತ್ತು ಚಾಲಕನನ್ನು ಕೆಐಒಸಿಎಲ್ ಕಲ್ಪಿಸಲು ಮುಂದಾಗಿದೆ. ಕೋವಿಡ್ ಸೋಂಕಿತರು ಅಥವಾ ಕೋವಿಡ್‌ನಿಂದ ಮೃತಪಟ್ಟರೆ ಮೃತದೇಹ ಸಾಗಿಸಲು ಈ ಆ್ಯಂಬುಲೆನ್ಸ್ ಬಳಸಬಹುದಾಗಿದೆ. ಅದಕ್ಕಾಗಿ 0824-2220306ನ್ನು ಸಂಪರ್ಕಿಸಬಹುದಾಗಿದೆ.