ಮನದ  ಕೊಳೆ  ತೊಳೆಯಲು  ಶರಣರ ಅನುಭವದ  ಮಾತು ಮಾದರಿ

ಜಗಳೂರು.ಆ.೪; ದೇಹ  ಮತ್ತು  ಬಟ್ಟೆ ತೊಳೆಯಲು  ನೀರು,ಸಾಬೂನು  ಮುಂತಾದ  ಪರಿಕರಗಳು  ಬೇಕಾಗುವುದು.  ಆದರೆ  ಮನದ ಕೊಳೆಯನ್ನು  ತೊಳೆಯರಲು  ಬೇಕಾಗಿರುವುದು  ಶರಣರ  ಅನುಭಾವದ  ಮಾತುಗಳು  ಎಂದು  ಮುಸ್ಟೂರು  ದಾಸೋಹ  ಮಠದ.ಶ್ರೀ ರುದ್ರಮುನಿ  ಶಿವಚಾರ್ಯ  ಮಹಾಸ್ವಾಮಿಗಳು  ನುಡಿದರು. ಅವರು   ಜಗಳೂರಿನಲ್ಲಿ  ಶರಣ  ಸಾಹಿತ್ಯ  ಪರಿಷತ್ತು ಕದಳಿ  ಮಹಿಳಾ  ವೇದಿಕೆ  ಮತ್ತು  ಸರ್ಕಾರಿ  ಪದವಿಪೂರ್ವ  ಕಾಲೇಜು  ಹೈಸ್ಕೂಲು  ವಿಭಾಗ  ಇವರ  ಸಹಯೋಗದೊಂದಿಗೆ  ನಾಲಂದ ಕಾಲೇಜಿನ  ಪ್ರಾಚಾರ್ಯರಾಗಿದ್ದ  ಡಾ.ತಿಪ್ಪೇಸ್ವಾಮಿ,  ಉಪನ್ಯಾಸಕರಾಗಿದ್ದ  ಟಿ.ಆರ್.ಮಹದೇವಪ್ಪ  ದಂಪತಿಗಳು  ತಮ್ಮ  ತಂದೆ  ತಾಯಿಯವರ ಹೆಸರಿನಲ್ಲಿ  ಏರ್ಪಡಿಸಿದ್ದ  ದತ್ತಿ  ಉಪನ್ಯಾಸ  ಕಾರ್ಯಕ್ರಮದಲ್ಲಿ  ಆಶೀರ್ವಚನ  ನೀಡಿ  ಮಾತನಾಡಿದರು.  ಮಕ್ಕಳಲ್ಲಿ  ಶರಣರ  ವೈಚಾರಿಕ ಚಿಂತನೆಗಳನ್ನು  ಬಿತ್ತಿ  ಬೆಳೆಯುವ  ಅಗತ್ಯವಿದೆ  ಎಂದು  ಸ್ವಾಮೀಜಿಗಳು  ತಿಳಿಸಿದರು.ನಿವೃತ್ತ  ಉಪನ್ಯಾಸಕರಾದ  ಡಿ.ಸಿ.ಮಲ್ಲಿಕಾರ್ಜುನರವರು ಶರಣ  ಸಾಹಿತ್ಯ  ಮತ್ತು  ಸಂಸ್ಕೃತಿ  ಎಂಬ  ವಿಚಾರವಾಗಿ  ದತ್ತಿ  ಉಪನ್ಯಾಸವನ್ನು  ನೀಡಿ  ಬದುಕಿನ  ಪ್ರತಿಯೊಂದು  ಹೆಜ್ಜೆಯಲ್ಲೂ  ಶರಣರ  ನಡೆ ನುಡಿಗಳನ್ನು  ನಮಗೆ  ಸೂಕ್ತ  ಮಾರ್ಗದರ್ಶನವನ್ನು  ನೀಡಬಲ್ಲವು  ಎಂಬುದನ್ನು  ಸವಿವರವಾಗಿ  ಮಕ್ಕಳಿಗೆ  ತಿಳಿಸಿದರು. ಪ್ರಭಾರ  ಶಿಕ್ಷಣಾಧಿಕಾರಿ ಡಿ.ಡಿ.ಹಾಲೇಶ್‌ರವರು  ಮಾತನಾಡಿ  ಮಕ್ಕಳು ಸಂಸ್ಕಾರವಂತರಾಗಲು ಶರಣರ  ಚಿಂತನೆಗಳು  ದಿವ್ಯ  ಔಷಧಿಯಂತವು.  ಇಂತಹ  ಉಪನ್ಯಾಸಗಳ ಮೂಲಕ  ಮಕ್ಕಳಲ್ಲಿ  ಒಳಿತನ್ನು  ಬಿತ್ತಬಹುದಾಗಿದೆ  ಎಂದು  ನುಡಿದರು.  ಶರಣ  ಸಾಹಿತ್ಯ  ಪರಿಷತ್  ಅಧ್ಯಕ್ಷರಾದ  ಎನ್.ಟಿ.ಎರ‍್ರಿಸ್ವಾಮಿಯವರು ಸಮಾರಂಭದ  ಅಧ್ಯಕ್ಷತೆಯನ್ನು  ವಹಿಸಿ  ದತ್ತಿ  ಉಪನ್ಯಾಸಗಳ  ಮಹತ್ವವನ್ನು  ತಿಳಿಸಿದರು.ಕಾರ್ಯಕ್ರಮದಲ್ಲಿ  ಹಾಜಿ  ಹುಸೇನ್‌ಮಿಯ್ಯಾಸಾಬ್, ಡಾ.ಪ್ರಭಾಕರ್‌ಲಕ್ಕೋಳ್,  ಡಾ.ಬಿ.ಎ.ರಾಜಪ್ಪ,  ಕದಳಿ  ವೇದಿಕೆಯ  ಅಧ್ಯಕ್ಷರಾದ  ಶ್ರೀಮತಿ  ಜೆ.ಆರ್.ಗೌರಮ್ಮ  ಮಾತನಾಡಿದರು.  ಇದೇ ವೇಳೆ ಕದಳಿ ವೇದಿಕೆಯ  ಲೀಲಾವತಿ  ಸುಂದರಮ್ಮ,  ರೇವತಿ,  ಇಂದಿರಮ್ಮ, ರಾಧಮ್ಮ,  ಮುಂತಾದವರು  ವಚನಗಾಯನವನ್ನು ಅರ್ಥಪೂರ್ಣವಾಗಿ  ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಆರ್.ತಿಪ್ಪೇಸ್ವಾಮಿ, ಮಂಜುನಾಥ್,  ಶೋಭಾ, ತಾ.ಕಾರ್ಯನಿರತ ಪತ್ರಕರ್ತರ  ಸಂಘದ  ಉಪಾಧ್ಯಕ್ಷರಾದ  ವಾಸಿಮ್,  ಪ್ರಧಾನ ಕಾರ್ಯದರ್ಶಿ  ಲೋಕೇಶ್ ಎಂ.ಐಹೊಳೆ, ರಾಕೀಬ್  ಸೇರಿದಂತೆ  ಇತರರು  ಉಪಸ್ಥಿತರಿದ್ದರು.Attachments areaReplyForward