ಮಧ್ವರಾಜ್ ನಿಧನಕ್ಕೆ ಕಾರ್ಯನಿರತ ಪತ್ರಕರ್ತರ ಸಂಘ ಸಂತಾಪ

ರಾಯಚೂರು,ಡಿ.೩- ಹಿರಿಯ ಪತ್ರಕರ್ತ ಮಧ್ವರಾಜ್ ಅಕಾಲಿಕ ನಿಧನಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ತೀವ್ರ ಸಂತಾಪ ಸಭೆಯನ್ನು ನಗರದ ಪತ್ರಿಕಾ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಸಂತಾಪ ಸಭೆ ಉದ್ದೇಶಿಸಿ ಹಿರಿಯ ಪತ್ರಕರ್ತ ಜಿ.ಕೆ.ಕಿಸಾನ್ ರಾವ್ ಅವರು ಮಾತನಾಡಿ,
ಹಿರಿಯ ಪತ್ರಕರ್ತ ಮಧ್ವರಾಜ್ ನಿಧನ ಸುದ್ದಿ ಕೇಳಿ ಮನಸ್ಸಿಗೆ ತುಂಬಾ ಬೇಸರವಾಯಿತು.
ಮಧ್ವರಾಜ್ ಅವರು ಎಲ್ಲರ ಜೊತೆ ಒಳ್ಳೆ ಸಂಬಂಧವನ್ನು ಇಟ್ಟುಕೊಂಡಿದ್ದರು.
ಮಧ್ವರಾಜ್ ಅವರ ಅಗಲಿಕೆಯಿಂದ ಪತ್ರಿಕಾ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಉಂಟಾಗಿದೆ.ಮಧ್ವರಾಜ್ ಅವರಿಂದ ನಾವು ತುಂಬಾ ಪಾಠ ಕಲಿತಿದ್ದೇವೆ.ಜಿಲ್ಲೆಯ ಅಭಿವೃದ್ಧಿ ಬಗ್ಗೆ ತುಂಬಾ ಕಾಳಜಿ ವಹಿಸಿದ್ದರು.
ಅಗಲಿದ ಮಧ್ವರಾಜ್ ರಿಗೆ ಒಂದು ನಿಮಿಷಗಳ ಕಾಲ ಮೌನ ಆಚರಿಸಲಾಯಿತು.
ಸಂತಾಪ ಸಭೆಯಲ್ಲಿ ವರದಿಗಾರರಾದ ವೆಂಕಟ್ ಸಿಂಗ್,ದತ್ತು ಸರ್ಕಿಲ್,ಗುರುನಾಥ್,ಶಿವಮೂರ್ತಿ, ಚನ್ನಬಸಣ್ಣ,ವಿಜಯ,ವಿಜಯ ಕುಮಾರ ದೇಸಾಯಿ,ಶಿವಪ್ಪ,ರಂಗನಾಥ್,ಖಾನ್ ಸಾಬ್,ಸತೀಶ್, ಬಿ.ರಾಜು,ಮುತ್ತಣ್ಣ,ಸೇರಿದಂತೆ ಹಿರಿಯ ಹಾಗೂ ಕಿರಿಯ ಪತ್ರಕರ್ತರು ಇದ್ದರು.