ಮಧ್ಯ ಪ್ರದೇಶ ಲಾಕ್‌ಡೌನ್ ಜಾರಿ

ನವದೆಹಲಿ, ಮಾ.೨೦-ದೇಶದ ಹಲವು ರಾಜ್ಯಗಳಲ್ಲಿ ಕೊರೋನಾ ಸೊಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹೀಗಾಗಲೇ ಹಲವು ರಾಜ್ಯಗಳಲ್ಲಿ ಲಾಕ್ ಡೌನ್ ಮತ್ತು ರಾತ್ರಿ ಕಪ್ರ್ಯೂ ಜಾರಿ ಮಾಡಿದ್ದು ಇದೀಗ ಮಧ್ಯ ಪ್ರದೇಶ, ಸಿಕ್ಕಿಂ ರಾಜ್ಯಗಳ ಕೆಲ ಭಾಗಗಳಲ್ಲಿ ಇಂದಿನಿಂದ ಲಾಕ್ ಡೌನ್ ಜಾರಿ ಮಾಡಲಾಗಿದೆ.
ಮಹಾರಾಷ್ಟ್ರದಲ್ಲಿ ಕೊರೋನಾ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಜನರು ಕೋವಿಡ್ ನಿಯಮ ಪಾಲಿಸದಿದ್ದರೆ ಲಾಕ್ ಡೌನ್ ಜಾರಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಉದ್ದವ್ರ ಠಾಕ್ರ ಎಚ್ಚರಿಕೆ ನೀಡಿರುವ ನಡುವೆಯೇ ಮಧ್ಯ ಪ್ರದೇಶದ ಇಂಧೋರ್, ಭೋಪಾಲ್, ಜಬಲ್‌ಪುರ್ ದಲ್ಲಿ ಮಾಚ್೩೧ ರತನಕ ಲಾಕ್ ಡೌನ್ ಮಾಡಲಾಗಿದೆ.
ರಾತ್ರಿ ೧೦ ಗಂಟೆಯಿಂದ ಬೆಳಗ್ಗೆ ೬ ಗಂಟೆಯ ತನಕ ಹಲವು ಭಾಗಗಳಲ್ಲಿ ರಾತ್ರಿ ಕಪ್ರ್ಯೂ ಜಾರಿ ಮಾಡಲಾಗಿದೆ. ಇನ್ನು ಹಲವು ಕಡೆ ಶಿಕ್ಷಣ ಸಂಸ್ಥೆ ಸೇರಿದಂತೆ ಶಾಲಾ ಕಛೇರಿಗೆ ಮಾಚ್ ೩೧ರ ತನಕ ರಜೆ ನೀಡಲಾಗಿದೆ.
ರಾಜಸ್ತಾನದಲ್ಲಿ ಕೊರೋನಾ ಸೊಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಏಪ್ರಿಲ್ ೨೧ ರ ತನಕ ನಿಷೇಧಾಜ್ಞೆ ಜಾರಿ ಮಾಡಲಾಗಿದ್ದು, ಕೋವಿಡ್ ಮಾರ್ಗಸೂಚಿ ಕಟ್ಟು ನಿಟ್ಟಾಗಿ ಪಾಲಿಸುವಂತೆ ಮುಖ್ಯಮಂತ್ರಿ ಅಶೋಕ್ ಗೆಹಲೋಟ್ ಆದೇಶಿಸಿದ್ದಾರೆ.
ಗುಜರಾತ್‌ನ ಹಲವು ಮಹಾನಗರ ಪಾಲಿಕ ವ್ಯಾಪ್ತಿಯಲ್ಲಿ ಮಾಲ್‌ಗಳಿ, ಮಲ್ಟಿಫ್ಲೆಕ್‌ಗಳನ್ನು ಬಂದ್ ಮಾಡಲಾಗಿದೆ.ಜೊತೆಗೆ ರಾತ್ರಿ ೯ ರಿಂದ ಬೆಳಗ್ಗೆ ೬ ಗಂಟೆಯ ತನಕ ರಾತ್ರಿ ಕಪ್ರ್ಯೂ ಜಾರಿ ಮಾಡಲಾಗಿದೆ.
ಲಸಿಕೆ ಹೆಚ್ಚಳಕ್ಕೆ ಸೂಚನೆ:
ಪಂಜಾಬ್‌ನಲ್ಲಿ ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಮಾಚ್ ೩೧ರ ತನಕ ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಖಾಸಗೀ ಆಸ್ಪತ್ರೆಗಳಲ್ಲಿ ಕೊರೋನಾ ಲಸಿಕೆ ನೀಡಿಕೆ ಪ್ರಮಾಣವನ್ನು ಹೆಚ್ಚಳ ಮಾಡುವಂತೆ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಸೂಚನೆ ನೀಡಿದ್ದಾರೆ.
ಪ್ರತಿದಿನ ೮ ಗಂಟೆಗಳ ಕಾಲ ಕಡ್ಡಾಂiiವಾಗಿ ಲಸಿಕೆ ನೀಡಿಕೆಯನ್ನು ಹೆಚ್ಚಳ ಮಾಡುವಂತೆ ಸೂಚಿಸಿದ್ದಾರೆ.

100 ದಶಲಕ್ಷ ಲಸಿಕೆ
ಇನ್ನೂ ಹೆಚ್ಚವರಿಯಾಗಿ ೧೦೦ ದಶಲಕ್ಷ ಡೋಸ್ ಕೊರೋನಾ ಲಸಿಕೆಯನ್ನು ಪೂರೈಕೆ ಮಾಡುವಂತೆ ಭಾರತೀಯ ಸೆರಂ ಸಂಸ್ಥೆಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.
ದೇಶದಲ್ಲಿ ಕೊರೋನಾ ಸೊಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಲಸಿಕೆ ನೀಡಿಕೆ ಪ್ರಮಾಣವನ್ನು ಹೆಚ್ಚಳ ಮಾಡುವ ಉದ್ದೇಶವನ್ನು ಹೊಂದಲಾಗಿದೆ. ಹೀಗಾಗಿ ಹೆಚ್ಚುವರಿಯಾಗಿ ಲಸಿಕೆ ನೀಡುವಂತೆ ಸೂಚಸಿಲಾಗಿದೆ