ಮಧ್ಯ ಕರ್ನಾಟಕಕ್ಕೆ ಸಚಿವ ಸ್ಥಾನ ಬೇಕಿದೆ

ದಾವಣಗೆರೆ. ಜ.೧೧; ಸೂರ್ಯ ಚಂದ್ರ ಎಷ್ಟು ಸತ್ಯವೋ ಅಷ್ಟೇ ಸತ್ಯ ಯಡಿಯೂರಪ್ಪ ಅವರೇ ಮುಖ್ಯಮಂತ್ರಿಗಳಾಗಿರುತ್ತಾರೆ.ಇದರಲ್ಲಿ ಯಾರು ಪ್ರಶ್ನೆ ಮಾಡುವಂತೆಯೇ ಇಲ್ಲ ಎಂದು ಶಾಸಕ ಎಂ.ಪಿ ರೇಣುಕಾಚಾರ್ಯಹೇಳಿದ್ದಾರೆ.ಹೊನ್ನಾಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರುಬರುವ 2023 ವಿಧಾನ ಸಭೆ ಚುನಾವಣೆ ಕೂಡಾ ಬಿಎಸ್ ವೈ ನೇತೃತ್ವದಲ್ಲಿಯೇ ನಡೆಯುತ್ತದೆ.ಕೇವಲ ನಾಯಕತ್ವ ಬದಲಾವಣೆ ಬಗ್ಗೆ  ವದಂತಿಗಳು ಮಾತ್ರ. ಇದರಲ್ಲಿ ಸತ್ಯಾಂಶವಿಲ್ಲ. ಮೇಲಾಗಿ ಸಿಎಂ ಉತ್ತಮ ಕೆಲಸ ಮಾಡುತ್ತಿದ್ದಾರೆ. ಇದರ ಬಗ್ಗೆ ರಾಜ್ಯ ಉಸ್ತುವಾರಿಗಳೇ ಸ್ಪಷ್ಟಪಡಿಸಿದ್ದಾರೆ.ಶಾಸಕ ಯತ್ನಾಳ್ ಬಗ್ಗೆ ಮಾತನಾಡುವುದಿಲ್ಲ.
ಈಗಾಗಲೇ ಅವರ ಹೇಳಿಕೆ ಬಗ್ಗೆ ರಾಜ್ಯಾಧ್ಯಕ್ಷರು ವರದಿ ನೀಡಿದ್ದಾರೆ‌ ಸೂಕ್ತ ಸಮಯದಲ್ಲಿ ನಿರ್ಧಾರ ಪಕ್ಷ ಯತ್ನಾಳ್ ವಿರುದ್ದ ತೆಗೆದುಕೊಳ್ಳುತ್ತದೆ.
ನಾನು ಕೂಡಾ ಸಚಿವ ಸ್ಥಾನದ ಆಕಾಂಕ್ಷಿ ಮದ್ಯ ಕರ್ನಾಟಕ ದಾವಣಗೆರೆಗೆ ಒಂದು ಸ್ಥಾನ ನೀಡಿ ಎಂದು ಕೇಳಿದ್ದೇವೆ. ಅದು ಮುಖ್ಯಮಂತ್ರಿಗಳ ಪರಮಾಧಿಕಾರ.ಸಿಎಂ ಯಡಿಯೂರಪ್ಪ ಅವರ ನೇತೃತ್ವದಲ್ಲಿಯೇ  ಬರುವ ವಿಧಾನ ಸಭೆ ಚುನಾವಣೆ ಎದುರಿಸುತ್ತೇವೆ ಎಂದರು.