ಮಧ್ಯಾಹ್ನದ ಬಳಿಕ ಬಂದವರಿಗೆ ಲಸಿಕೆ ಇಲ್ಲ

ದಾವಣಗೆರೆ,ಏ.27: ನಗರದಲ್ಲಿ ವಿವಿಧೆಡೆ ಕೊರೊನಾ ಲಸಕೀಕರಣ ನಡೆಯುತ್ತಿದೆ. ಆದರೆ, 12 ಗಂಟೆ ಬಳಿಕ ಲಸಿಕಾ ಕೇಂದ್ರಕ್ಕೆ ಬಂದಿದ್ದ ಸಾರ್ವಜನಿಕರನ್ನು ಲಸಿಕೆ ಇಲ್ಲ ನಾಳೆ ಬನ್ನಿ ಎಂದು ಕಳುಹಿಸುತ್ತಿದ್ದ ದೃಶ್ಯ ಕಂಡು ಬಂದಿತು.
ನಗರದ ಮೋತಿವೀರಪ್ಪ ಕಾಲೇಜಿನಲ್ಲಿ ತೆರೆದಿರುವ ಲಸಿಕಾ ಕೇಂದ್ರದಲ್ಲಿ 45 ವರ್ಷಕ್ಕೆ ಮೇಲ್ಪಟ್ಟವರು ಲಸಿಕೆ ಹಾಕಿಸಿಕೊಳ್ಳಲು ಸಾಲುಗಟ್ಟಿ ನಿಂತಿದ್ದರು.
ಮಧ್ಯಾಹ್ನ 12 ಗಂಟೆಯ ವರೆಗೂ ಲಸಿಕೆ ನೀಡಲಾಯಿತು. ಆದರೆ, ಬಳಿಕ ಬಂದ ಸಾರ್ವಜನಿಕರನ್ನು ಲಸಿಕೆ ಇಲ್ಲ. ನಾಳೆ ಬನ್ನಿ ನೋಡೋಣ ಎಂದು ಹೇಳಿ ವಾಪಾಸ್ ಕಳುಹಿಸಿದರು.
ಇನ್ನೂ ಲಸಿಕೆ ಸಿಗದೆ ಇದ್ದವರು ನಾಳೆ ಲಸಿಕೆ ನೀಡುತ್ತಿರಾ? ಎಂದು ಲಸಿಕೆಯ ನೇತೃತ್ವ ವಹಿಸಿದ್ದ ಅಧಿಕಾರಿಗಳನ್ನು ವಿಚಾರಿಸಿದಾಗ. ಈಗ ಸಧ್ಯ ನಮ್ಮ ಬಳಿ ಲಸಿಕೆ ಇಲ್ಲ. ರಾತ್ರಿ 12 ಗಂಟೆಯ ನಂತರ ಲಸಿಕೆ ಸಿಗುತ್ತೋ, ಇಲ್ಲವೋ ಎಂಬುದು ಗೊತ್ತಾಗುತ್ತೆ. ಹೀಗಾಗಿ ನಾಳೆ ಬನ್ನಿ ನೋಡೋಣ ಎಂಬ ಸಬೂಬು ನೀಡುತ್ತಿದ್ದರು