ಮಧ್ಯಾನ 3 ರವರೆಗೆ ಶೇ 47.68 ಮತದಾನ ಜಿಲ್ಲೆಯಲ್ಲಿ 23.05 ಲಕ್ಷ ಜನರಿಗೆ ಮತದಾನದ ಹಕ್ಕು

ಕಲಬುರಗಿ,ಮೇ.7: ಇಂದು ಬೆಳಿಗ್ಗೆ 7 ಗಂಟೆಯಿಂದ ಕಲಬುರಗಿಲೋಕಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಮತದಾನ ಪ್ರಕ್ರಿಯೆ ಆರಂಭವಾಗಿದೆ.ಮತದಾನ ಶಾಂತಿಯುತವಾಗಿತ್ತು ಮಧ್ಯಾನ 3 ಗಂಟೆವರೆಗೆ ಕಲಬುರಗಿ ಲೋಕಸಭೆ ಕ್ಷೇತ್ರದಲ್ಲಿ ಶೇ 47.68 ಮತದಾನವಾಗಿದೆ.
ಬೆಳಿಗ್ಗೆಯಿಂದ ಮತಗಟ್ಟೆಯ ಮುಂದೆ ಸಾಲುಗಟ್ಟಿ ನಿಂತು ಉತ್ಸಾಹದಿಂದ ಮತದಾನ ಮಾಡಿದರು.ಬಿಸಿಲೇರುವ ಮುನ್ನ ಮತದಾನ ಮಾಡುವ ಉದ್ದೇಶದಿಂದ ನಿಗದಿತ ಅವಧಿಗೆ ಮುನ್ನವೇ ಮತಗಟ್ಟೆಗಳ ಮುಂದೆ ಮತದಾರರು ಸಾಲುಗಟ್ಟಿ ನಿಂತದ್ದು ಕಂಡು ಬಂತು. ಹಿರಿಯ ನಾಗರಿಕರು,ವಿಕಲಚೇತನರು ಗಾಲಿಕುರ್ಚಿಯ ಸಹಾಯದಿಂದ ಮತದಾನಕ್ಕೆ ಆಗಮಿಸಿದರು.
ಸಾರ್ವತ್ರಿಕ ಲೋಕಸಭೆ ಚುನಾವಣೆಗೆ ಇಂದು ನಡೆಯುತ್ತಿರುವ ಮತದಾನದಲ್ಲಿ ಕಲಬುರಗಿ ಜಿಲ್ಲೆಯಾದ್ಯಂತ 23,05,304 ಜನ ಮತದಾನದ ಹಕ್ಕು ಚಲಾಯಿಸಲಿದ್ದು,ಇದರಲ್ಲಿ 11,60,716 ಪುರುಷ, 11,44,256 ಮಹಿಳೆ, ಇತರೆ 332 ಸೇರಿದ್ದಾರೆ. ಬೆಳಿಗ್ಗೆ 7 ರಿಂದ ಆರಂಭವಾದ ಮತದಾನ ಸಂಜೆ 6 ಗಂಟೆಯವರೆಗೆ ನಡೆಯಲಿದ್ದು, ಕಣದಲ್ಲಿರುವ 14 ಅಭ್ಯರ್ಥಿಗಳ ಭವಿಷ್ಯ ಮತಯಂತ್ರಗಳಲ್ಲಿ ಭದ್ರವಾಗಲಿದೆ.
ಜಿಲ್ಲೆಯ ಒಟ್ಟು 18-19 ವರ್ಷದ 36,543 ಯುವ ಮತದಾರರಿದ್ದಾರೆ. ಇನ್ನೂ ಮತಗಟ್ಟೆಗೆ ಬಂದು ಮತ ಚಲಾಯಿಸಲು ಆಗದ 85 ವರ್ಷ ಮೇಲ್ಪಟ್ಟ 1,149 ಜನ ಹಿರಿಯ ನಾಗರಿಕರು, 396 ವಿಶೇಷಚೇತನರು ಹಾಗೂ ಅಗತ್ಯ ಸೇವಾ ವಲಯದಡಿ ಬರುವ 952 ಜನ ಮತದಾರರು ಈಗಾಗಲೆ ಪೆÇೀಸ್ಟಲ್ ಬ್ಯಾಲೆಟ್ ಮೂಲಕ ಮತ ಚಲಾಯಿಸಿದ್ದು, ವಿಧಾನಸಭಾ ಕ್ಷೇತ್ರವಾರು ಮತದಾರರ, ಮತಗಟ್ಟೆ ವಿವರ
ಅಫಜಲಪೂರ ವಿಧಾನಸಭಾ ಕ್ಷೇತ್ರದಲ್ಲಿ 1,21,355 ಪುರುಷ, 1,15,917 ಮಹಿಳೆ, ಇತರೆ 20 ಸೇರಿ 2,37,292, ಜೇವರ್ಗಿ ವಿಧಾನಸಭಾ ಕ್ಷೇತ್ರದಲ್ಲಿ 1,25,373 ಪುರುಷ, 1,22,392 ಮಹಿಳೆ, ಇತರೆ 24 ಸೇರಿ 2,47,789, ಚಿತ್ತಾಪೂರ ವಿಧಾನಸಭಾ ಕ್ಷೇತ್ರದಲ್ಲಿ 1,23,063 ಪುರುಷ, 1,23,910 ಮಹಿಳೆ, ಇತರೆ 16 ಸೇರಿ 2,46,989, ಸೇಡಂ ವಿಧಾನಸಭಾ ಕ್ಷೇತ್ರದಲ್ಲಿ 1,14,179 ಪುರುಷ, 1,17,678 ಮಹಿಳೆ, ಇತರೆ 32 ಸೇರಿ 2,31,889, ಚಿಂಚೋಳಿ ವಿಧಾನಸಭಾ ಕ್ಷೇತ್ರದಲ್ಲಿ 1,06,910 ಪುರುಷ, 1,03,791 ಮಹಿಳೆ, ಇತರೆ 15 ಸೇರಿ 2,10,716 ಜನ ಮತದಾರರಿದ್ದಾರೆ.
ಗುಲಬರ್ಗಾ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ 1,37,031 ಪುರುಷ, 1,31,585 ಮಹಿಳೆ, ಇತರೆ 35 ಸೇರಿ 2,68,651, 44-ಗುಲಬರ್ಗಾ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ 1,43,775 ಪುರುಷ, 1,47,283 ಮಹಿಳೆ, ಇತರೆ 55 ಸೇರಿ 2,91,113,ಗುಲಬರ್ಗಾ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ 1,58,358 ಪುರುಷ, 1,60,810 ಮಹಿಳೆ, ಇತರೆ 94 ಸೇರಿ 3,19,262 ಹಾಗೂ 46-ಅಳಂದ ವಿಧಾನಸಭಾ ಕ್ಷೇತ್ರದಲ್ಲಿ 1,30,672 ಪುರುಷ, 1,20,890 ಮಹಿಳೆ, ಇತರೆ 41 ಸೇರಿ 2,51,603 ಜನ ಮತದಾರರ ಹಕ್ಕು ಚಲಾಯಿಸಲು ಅರ್ಹತೆ ಹೊಂದಿದ್ದಾರೆ.
ಕ್ಷೇತ್ರವಾರು ಮತಗಟ್ಟೆಗಳ ವಿವರ:
ಅಫಜಲಪುರ ಕ್ಷೇತ್ರದಲ್ಲಿ ನಗರ ವ್ಯಾಪ್ತಿಯಲ್ಲಿ 22, ಗ್ರಾಮೀಣ ಭಾಗದಲ್ಲಿ 229 ಸೇರಿ 251 ಮತಗಟ್ಟೆಗಳು, ಜೇವರ್ಗಿ ಕ್ಷೇತ್ರದಲ್ಲಿ ನಗರ ವ್ಯಾಪ್ತಿಯಲ್ಲಿ 24, ಗ್ರಾಮೀಣ ಭಾಗದಲ್ಲಿ 255 ಸೇರಿ 279 ಮತಗಟ್ಟೆಗಳು, ಚಿತ್ತಾಪುರ ಕ್ಷೇತ್ರದಲ್ಲಿ ನಗರ ವ್ಯಾಪ್ತಿಯಲ್ಲಿ 66, ಗ್ರಾಮೀಣ ಭಾಗದಲ್ಲಿ 190 ಸೇರಿ 256 ಮತಗಟ್ಟೆಗಳು, ಸೇಡಂ ಕ್ಷೇತ್ರದಲ್ಲಿ ನಗರ ವ್ಯಾಪ್ತಿಯಲ್ಲಿ 36, ಗ್ರಾಮೀಣ ಭಾಗದಲ್ಲಿ 225 ಸೇರಿ 261 ಮತಗಟ್ಟೆಗಳು, ಚಿಂಚೋಳಿ ಕ್ಷೇತ್ರದಲ್ಲಿ ನಗರ ವ್ಯಾಪ್ತಿಯಲ್ಲಿ 16, ಗ್ರಾಮೀಣ ಭಾಗದಲ್ಲಿ 226 ಸೇರಿ 242 ಮತಗಟ್ಟೆಗಳು, ಗುಲಬರ್ಗಾ ಗ್ರಾಮೀಣ ಕ್ಷೇತ್ರದಲ್ಲಿ ನಗರ ವ್ಯಾಪ್ತಿಯಲ್ಲಿ 50, ಗ್ರಾಮೀಣ ಭಾಗದಲ್ಲಿ 240 ಸೇರಿ 290 ಮತಗಟ್ಟೆಗಳು, ಗುಲಬರ್ಗಾ ದಕ್ಷಿಣ ಕ್ಷೇತ್ರದಲ್ಲಿ ನಗರ ವ್ಯಾಪ್ತಿಯಲ್ಲಿ 173, ಗ್ರಾಮೀಣ ಭಾಗದಲ್ಲಿ 88 ಸೇರಿ 261 ಮತಗಟ್ಟೆಗಳು, ಗುಲಬರ್ಗಾ ಉತ್ತರ ಕ್ಷೇತ್ರದಲ್ಲಿ ನಗರ ವ್ಯಾಪ್ತಿಯಲ್ಲಿ ಮಾತ್ರ 284 ಮತಗಟ್ಟೆಗಳು ಹಾಗೂ ಆಳಂದ ಕ್ಷೇತ್ರದಲ್ಲಿ ನಗರ ವ್ಯಾಪ್ತಿಯಲ್ಲಿ 34, ಗ್ರಾಮೀಣ ಭಾಗದಲ್ಲಿ 220 ಸೇರಿ 254 ಮತಗಟ್ಟೆಗಳು ಇದ್ದು, ಒಟ್ಟಾರೆ ಜಿಲ್ಲೆಯಾದ್ಯಂತ ನಗರ ಪ್ರದೇಶದಲ್ಲಿ 705, ಗ್ರಾಮೀಣ ಪ್ರದೇಶದಲ್ಲಿ 1,673 ಸೇರಿ 2,378 ಮತಗಟ್ಟೆಗಳು ಇವೆ.