ಮಧ್ಯವರ್ತಿಗಳ ಕಡಿವಾಣ ಹಾಕಲು ಸೂಕ್ತ ಅಧಿಕಾರಿ

ಮಾನ್ವಿ ಪುರಸಭೆಗೆ ವಿಜಯಲಕ್ಷ್ಮಿ ಪುನಃ ಮರಳಲಿ
( ನಾಗರಾಜ್ ತಡಕಲ್ )
ಮಾನ್ವಿ. ಸೆ.16-ಪುರಸಭೆ ಮುಖ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ವೆಂಕಟೇಶ್ ಅವರು ಅನಾರೋಗ್ಯದಿಂದ ಸಾವನ್ನಪ್ಪಿದ್ದರು. ಖಾಲಿ ಇರುವ ಮಾನ್ವಿ ಪುರಸಭೆ ಮುಖ್ಯಾಧಿಕಾರಿ ಹುದ್ದೆಗೆ ಈ ಹಿಂದೆ ಕಾರ್ಯನಿರ್ವಹಿಸಿದ ವಿಜಯಲಕ್ಷ್ಮಿ ಅವರು ಸಿಂಧನೂರು ನಗರಸಭೆಗೆ ವರ್ಗಾವಣೆಗೊಂಡ ಇವರು ಪುನಃ ಮಾನವಿ ಪುರಸಭೆ ಮುಖ್ಯಾಧಿಕಾರಿಯಾಗಿ ಮರಳಲಿ ಎಂಬುದು ಸಾರ್ವಜನಿಕರ ಕೂಗಾಗಿದೆ.
ಈ ಹಿಂದೆ ಕೋರೊನಾದಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಹಗಲು ರಾತ್ರಿ ಎನ್ನದೇ ಒಬ್ಬ ಮಹಿಳೆಯಾಗಿ ದಿನದ ಇಪ್ಪತ್ತು ನಾಲ್ಕು ಗಂಟೆಗಳ ಕಾಲ ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಿ ಲಾಕ್‌ಡೌನ್ ನಾ ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ ಪಟ್ಟಣದ ಜನಜೀವನಕ್ಕೆ ಯಾವುದೇ ತರಹದ ತೊಂದರೆ ಆಗದಂತೆ ಒಬ್ಬ ಯಶಸ್ವಿ ಮುಖ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದು ನಿಜಕ್ಕೂ ಶ್ಲಾಘನೀಯ.
ಪುರಸಭೆ ಮುಖ್ಯಾಧಿಕಾರಿ ವಿಜಯಲಕ್ಷ್ಮಿ ಅವರು ಮಾನ್ವಿ ಪಟ್ಟಣವನ್ನು ಸ್ವಚ್ಛಗೊಳಿಸುವುದರಲ್ಲಾಗಲಿ ವಿದ್ಯುತ್ ದೀಪ ಅಳವಡಿಸುವುದರಲ್ಲಿ ಆಗಲಿ ಯಾವಾಗಲೂ ಮುಂದೆ ಇದ್ದು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಇದ್ದರು.
ಪಟ್ಟಣದ ಪುರಸಭೆ ಇಲಾಖೆಯಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗುತ್ತಿದ್ದು ಇಂತಹ ಅಧಿಕಾರಿಗಳು ಮಾನ್ವಿ ಪುರಸಭೆಯಂತಹ ಮುಖ್ಯಾಧಿಕಾರಿ ಹುದ್ದೆಗೆ ನಿಯೋಜನೆಗೊಂಡರೆ ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕಿ ಯಾವುದೇ ಸೌಲಭ್ಯಗಳು ನೇರವಾಗಿ ಫಲಾನುವಿಗಳಿಗೆ ಸಿಗುವಂತೆ ರೂಪುಗೊಳಿಸಬಹುದು.
ಈ ಹಿಂದೆ ಮುಖ್ಯ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ವಿಜಯಲಕ್ಷ್ಮಿ ಅವರ ಇದ್ದಂತ ಸಂದರ್ಭದಲ್ಲಿ ಪುರಸಭೆ ಸಿಬ್ಬಂದಿ ಅವರಿಗೆ ಮತ್ತು ಪೌರ ಕಾರ್ಮಿಕರಿಗೆ ತಿಂಗಳ ವೇತನ ಸರಿಯಾಗಿ ಖಾತೆಗೆ ಜಮಾ ಆಗುತ್ತಿದ್ದ ಎಂಬ ಸಿಬ್ಬಂದಿ ವರ್ಗದವರ ಮಾತಾಗಿದೆ.
ಪುರಸಭೆ ಮುಖ್ಯಾಧಿಕಾರಿಯಾಗಿ ಮಾನ್ವಿಗೆ ಮರಳಿದರೆ ಶಾಸಕರ ಮತ್ತು ಎಲ್ಲಾ ವಾರ್ಡ್‌ಗಳ ಸದಸ್ಯರ ಸಲಹೆ ಮೇರೆಗೆ ಪಟ್ಟಣ ಅಭಿವೃದ್ಧಿ ಮಾಡಲು ಕಾರ್ಯ ನಿರ್ವಹಿಸುತ್ತಾರೆ ಎಂಬುದು ಸಾರ್ವಜನಿಕರ ವಲಯದಲ್ಲಿ ಕೇಳಿಬರುತ್ತಿದೆ.