ಮಧ್ಯವರ್ತಿಗಳನ್ನು ಕಚೇರಿಯಿಂದ  ಹೊರ ಕಳಿಸಿದ  ನಗರಸಭೆಯ ಆಯುಕ್ತ


ಸಂಜೆವಾಣಿ ವಾರ್ತೆ
ಹೊಸಪೇಟೆ  ಜು20: ಹೊಸಪೇಟೆಯ ನಗರಸಭೆಯ ಆಡಳಿತ ವಿಭಾಗದಲ್ಲಿ  ಮದ್ಯವರ್ತಿಗಳ ಹಾವಳಿ ಜೋರಾಗಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಖುದ್ದು ಮಧ್ಯವರ್ತಿಗಳನ್ನು ಹೊರ ಕಳಿಸುವ ಮೂಲಕ ಹೊಸ ಪೌರಾಯುಕ್ತ ಮನೋಹರ್ ಆಂತರಿಕ ವ್ಯವಸ್ಥೆ ಸರಿಪಡಿಸಲು ಮುಂದಾಗಿದ್ದಾರೆ.
ಬುಧವಾರ ನಗರಸಭೆ ತುಂಬಾ ತುಂಬಿದ್ದ ಜನ ಜಂಗುಳಿ, ಪ್ರತಿಯೊಬ್ಬರು ಆ ಕೆಲಸವಾಗಿಲ್ಲಾ, ಈ ಕೆಲಸವಾಗಿಲ್ಲಾ ಎಂಬ ಮಾತುಗಳಿಂದ ರೋಸಿಹೋದ ಆಯುಕ್ತರು ಕಚೇರಿ ತುಂಬೆಲ್ಲಾ ಸುತ್ತಾಡಿ, ಯಾರು ನೀನು? ಏನಬೇಕು, ಎಂದೆಲ್ಲಾ ಪ್ರಶ್ನಿಸುವ ಮೂಲಕ ನಿಮ್ಮ ಕೆಲಸಕ್ಕೆ ಮಾತ್ರ, ಕೆಲಸವಾಗಬೇಕು ಎನ್ನುವುದಾದರೆ ನಿರೀಕ್ಷಿಸಿ,  ಹಿರಿಯರಾದವರಿಗೆ ಖುರ್ಚಿಹಾಕಿ ಕೂಡಿಸಿ, ಎಂದು ಸಿಬ್ಬಂದಿಗಳಿಗೂ ತಾಕಿತು ಮಾಡಿದರು. ಮಧ್ಯವರ್ತಿಗಳೊಂದಿಗೆ ಸಹಕರಿಸಿದ್ದಾದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸುವುದಾಗಿ ತಾಕೀತು ಮಾಡಿದರು. ಮಧ್ಯವರ್ತಿ ಅಥವಾ ಸಾರ್ವಜನಿಕರ ಕೈಯಲ್ಲಿ ಕಚೇರಿ ಕಡತ ಕಂಡರೆ ಸಿಬ್ಬಂದಿಗಳ ಮೇಲೆ ಕ್ರಮ ಜರುಗಿಸುವುದಾಗಿಯೂ ಎಚ್ಚರಿಕೆ ನೀಡಿದರು.