ಮಧ್ಯರಾತ್ರಿ ಎಂಟ್ರಿ ಕೊಟ್ಟು ಮದ್ಯ ಹೊತ್ತೊಯ್ದ ಕಳ್ಳ: 32 ಸಾವಿರ ಮೌಲ್ಯದ ಎಣ್ಣೆ ಕಳವು

ಸಂಜೆವಾಣಿ ವಾರ್ತೆ
ಚಾಮರಾಜನಗರ, ಏ.12-ಹನೂರು ಪಟ್ಟಣದಅಮೃತ್ ಬಾರ್‍ಅಂಡ್‍ರೆಸ್ಟೋರೆಂಟ್ ನಲ್ಲಿ ಶನಿವಾರತಡರಾತ್ರಿ ಸುಮಾರು 32 ಸಾವಿರ ಬೆಲೆ ಬಾಳುವ ಮದ್ಯವನ್ನು ಕಳ್ಳನೋರ್ವ ಕಳವು ಮಾಡಿರುವಘಟನೆ ನಡೆದಿದೆ.
ಹನೂರು ಪಟ್ಟಣದ ಬಂಡಳ್ಳಿ ಮುಖ್ಯರಸ್ತೆಯಲ್ಲಿರುವಅಮೃತ್ ಬಾರ್‍ಅಂಡ್‍ರೆಸ್ಟೋರೆಂಟ್ ನಲ್ಲಿ ಬಾರ್ ಹಿಂಭಾಗದ ಶೆಲ್ಟರ್‍ಒಡೆದು ಒಳನುಗ್ಗಿರುವ ಕಳ್ಳ ಸಾವಿರಾರುರೂ. ಮೌಲ್ಯದ ವಿವಿಧಕಂಪನಿಯ ಮಧ್ಯವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾನೆ.
ಅಮೃತ್ ಬಾರ್‍ಅಂಡ್‍ರೆಸ್ಟೋರೆಂಟ್ ನಲ್ಲಿ ಕಳ್ಳತನ ದೂರುದಾಖಲಾಗುತ್ತಿದ್ದಂತೆ ಪಟ್ಟಣ ಪೆÇಲೀಸ್‍ಠಾಣೆಯ ಸಬ್‍ಇನ್ಸ್‍ಪ್ಪೆಕ್ಟರ್‍ರಿಹಾನ ಬೇಗಮ್ ನೇತೃತ್ವದಲ್ಲಿಚಾಮರಾಜನಗರಜಿಲ್ಲಾಕೇಂದ್ರದಿಂದ ಆಗಮಿಸಿದ್ದ ಬೆರಳಚ್ಚು ತಜ್ಞರು ಹಾಗೂ ಶ್ವಾನದಳದ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇನ್ನು, ಸಿಸಿ ಟಿವಿಯಲ್ಲಿಯುವಕನೋರ್ವಓಡಾಡಿ ಬಾಕ್ಸ್ ಹೊತ್ತೊಯ್ಯುವುದು ಸೆರೆಯಾಗಿದೆ.