ಮಧ್ಯಪ್ರಾಚ್ಯದಲ್ಲಿ ಅಮೇರಿಕಾ ಸಂಘರ್ಷ ಬಯಸುವುದಿಲ್ಲ:ಬೈಡನ್

ವಾಷಿಂಗ್ಟನ್,ಫೆ,೩- ಮಧ್ಯಪ್ರಾಚ್ಯದಲ್ಲಿ ಅಮೇರಿಕಾ ಸಂಘರ್ಷವನ್ನು ಬಯಸುವುದಿಲ್ಲ ಆದರೆ ಅಮೆರಿಕಾಕ್ಕೆ ಹಾನಿಯಾಗುವುದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಅಧ್ಯಕ್ಷ ಜೋ ಬೈಡನ್ ನೇರವಾಗಿಯೇ ಎಚ್ಚರಿಕೆ ನೀಡಿದ್ದಾರೆ.

ಇರಾಕ್ ಮತ್ತು ಸಿರಿಯಾ ಎರಡರಲ್ಲೂ ಮಿಲಿಟರಿ ಸ್ಥಾನಗಳನ್ನು ಗುರಿಯಾಗಿಟ್ಟುಕೊಂಡು ಅಮೇರಿಕಾ ವೈಮಾನಿಕ ದಾಳಿ ನಡೆಸಿರುವು ಕ್ರಮಕ್ಕೆ ಪ್ರತಿಕ್ರಿಯೆ ನೀಡಿದ ಅವರು ಅಮೇರಿಕಾ ತಂಟೆಗೆ ಬಂದರೆ ಸುಮ್ಮನೆ ಬಿಡುವುದಿಲ್ಲ ಎಂದು ಗುಡುಗಿದ್ದಾರೆ

ಮಧ್ಯಪ್ರಾಚ್ಯದಲ್ಲಿ ಅಥವಾ ಪ್ರಪಂಚದ ಬೇರೆ ಯಾವುದೇ ಭಾಗದಲ್ಲಿ ಸಂಘರ್ಷ ಸೃಷ್ಠಿಸಲು ಬಯಸುವುದಿಲ್ಲ. ಆದರೆ ನಮಗೆ ಹಾನಿ ಮಾಡಲು ಬಯಸುವ ಎಲ್ಲರಿಗೂ ತಿಳಿದಿರಲಿ, ಅಮೇರಿಕಾದ ಸೈನಿಕರೂ ಸೇರಿದಂತೆ ಅಮೆರಿಕನ್ನರಿಗೆ ಹಾನಿ ಮಾಡಿದರೆ ಅದರ ಪರಿಣಾಮ ಬೇರೆಯದೇ ಆಗಿರುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಇರಾಕ್ ಮತ್ತು ಸಿರಿಯಾ ಈ ಪ್ರದೇಶದಲ್ಲಿ ಅಮೇರಿಕಾ ಪಡೆಗಳ ಮೇಲಿನ ದಾಳಿಯಲ್ಲಿ ಭಾಗಿಯಾಗಿರುವ ಇರಾನಿನ ಬೆಂಬಲಿತ ಸೇನಾಪಡೆಗಳ ವಿರುದ್ಧ ಹೆಚ್ಚು ಗಣನೀಯ ದಾಳಿಗಳ ಸರಣಿ ಪ್ರಾರಂಭವಾಗಿದ್ದು ಸೈನಿಕರ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳಲಿದೆ ಎಂದಿದ್ದಾರೆ.

ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾಡ್ರ್ಸ್ ಕಾಪ್ರ್ಸ್ ಬೆಂಬಲಿತ ಉಗ್ರಗಾಮಿ ಗುಂಪುಗಳು ಉಡಾಯಿಸಿದ ಡ್ರೋನ್‌ನಿಂದ ಜೋರ್ಡಾನ್‌ನಲ್ಲಿ ಮೂವರು ಅಮೇರಿಕನ್ ಸೈನಿಕರು ಹತ್ಯೆಯಾದ ನಂತರ ಈ ದಾಳಿ ನಡೆದಿದೆ.

ಡೋವರ್ ವಾಯುನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೆಚ್ಚೆದೆಯ ಅಮೆರಿಕನ್ನರ ಗೌರವಾನ್ವಿತ ವಾಪಸಾತಿಗೆ ಹಾಜರಾಗಿದ್ದೇನೆ.ಮಡಿದ ಸೈನಿಕ ಕುಟುಂಬದದೊಂದಿಗೆ ಅಮೇರಿಕಾ ಸದಾ ಇರಲಿದೆ ಎಂದಿದ್ದಾರೆ.

ಅಮೇರಿಕಾದ ಸೇನಾ ಪಡೆಯ ಮಿಲಿಟರಿ ಪಡೆಗಳು ಇರಾಕ್ ಮತ್ತು ಸಿರಿಯಾದಲ್ಲಿನ ಸೌಲಭ್ಯಗಳ ಮೇಲೆ ಗುರಿಯಾಗಿಸಿ ದಾಳಿ ನಡೆಸಲಾಗಿದೆ. ಐಆರ್‍ಜಿಸಿ ಮತ್ತು ಸಂಯೋಜಿತ ಸೇನೆ, ಅಮೇರಿಕಾ ಪಡೆಗಳ ಮೇಲೆ ದಾಳಿ ಮಾಡಲು ಬಳಸುತ್ತದೆ ಎಂದು ತಿಳಿಸಿದ್ಧಾರೆ

ಏತನ್ಮಧ್ಯೆ, ಅಮೇರಿಕಾದ ಸೆಂಟ್ರಲ್ ಕಮಾಂಡ್ ಇರಾಕ್ ಮತ್ತು ಸಿರಿಯಾದಲ್ಲಿ “ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾಡ್ರ್ಸ್ ಕಾಪ್ರ್ಸ್ ಕ್ಯುಡ್ಸ್ ಫೊ?ರ್ಸ್ ಮತ್ತು ಅಂಗಸಂಸ್ಥೆ ಸೇನಾ ಗುಂಪುಗಳ ವಿರುದ್ಧ” ವೈಮಾನಿಕ ದಾಳಿ ನಡೆಸಿದೆ ಎಂದು ಹೇಳಿದೆ.

ಅಮೇರಿಕಾದ ಮಿಲಿಟರಿ ಪಡೆಗಳು ಹಾರಿಸಲಾದ ದೀರ್ಘ-ಶ್ರೇಣಿಯ ಬಾಂಬರ್ ಒಳಗೊಂಡಂತೆ ಹಲವಾರು ವಿಮಾನಗಳೊಂದಿಗೆ ೮೫ ಕ್ಕೂ ಹೆಚ್ಚು ದಾಳಿ ಮಾಡಲಾಗಿದೆ ಎನ್ನಲಾಗಿದೆ