ಮಧ್ಯಪ್ರದೇಶದಲ್ಲಿ ಲವ್ ಜಿಹಾದ್ ನಿಷೇಧ

ಭೂಪಾಲ್,ಡಿ.೨೬-ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜಸಿಂಗ್ ಚೌವ್ಹಾಣ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಂಪುಟ ಸಭೆಯಲ್ಲಿ ನೂತನ ಲವ್ ಜಿವಾದ್ ವಿರೋಧಿ ಮಸೂದೆಗೆ ಇಂದು ಅಂಗೀಕಾರ ನೀಡಿದ್ದು, ಕಾನೂನು ಉಲ್ಲಂಘಿಸಿದವರಿಗೆ ೧೦ ವರ್ಷ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ತಿಳಿಸಿದೆ.
ನೂತನ ಕಾಯ್ದೆ ಪ್ರಕಾರ ಬಲವಂತದ ಧಾರ್ಮಿಕ ಮತಾಂತರ ಮಾಡಿದಲ್ಲಿ ಒಂದು ವರ್ಷದಿಂದ ಐದು ವರ್ಷದವರೆಗೆ ಜೈಲು ಶಿಕ್ಷೆ ಮತ್ತು ಕನಿಷ್ಠ ೨೫ ಸಾವಿರ ರೂಪಾಯಿ ದಂಡ ವಿಧಿಸಲು ಅವಕಾಶವಿದೆ ಎಂದು ಗೃಹ ಸಚಿವ ನರೋತ್ತಮ ಮಿಶ್ರಾ ತಿಳಿಸಿದ್ದಾರೆ ಎನ್ನಲಾಗಿದೆ.
ಮಧ್ಯಪ್ರದೇಶ ಧಾರ್ಮಿಕ ಸ್ವಾತಂತ್ರ ಮಸೂದೆ ೨೦೨೦ರ ಅನ್ವಯ ಹಿಂದುಳಿದ ವರ್ಗ ಅಥವಾ ಹಿಂದುಳಿದ ಪಂಗಡದ ಅಪ್ರಾಪ್ತ ಮಹಿಳೆ ಅಥವಾ ವ್ಯಕ್ತಿಯನ್ನು ಬಲವಂತವಾಗಿ ಮತಾಂತರಗೊಳಿಸಿದರೆ ಕನಿಷ್ಠ ೨ ರಿಂದ ೧೦ ವರ್ಷ ಜೈಲು ಶಿಕ್ಷೆ ಹಾಗೂ ಕನಿಷ್ಠ ೫೦ ಸಾವಿರ ರೂ.ದಂಡ ವಿಧಿಸಲಾಗುವುದು ಎಂದು ತಿಳಿಸಿದೆ.